Asianet Suvarna News Asianet Suvarna News

'ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ'; ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ವಿರುದ್ಧ ಹಿಂದೂ ಸಂಘಟನೆಗಳಿಂದ ಮತ್ತೊಂದು ದೂರು

ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ಮಾಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಮತ್ತೊಂದು ದೂರು ದಾಖಲಿಸಲಾಗಿದೆ.

Another complaint filed against congress MLC Ivan D'Souza for controversy warns Karnataka governor of similar fate of bangladesh pm rav
Author
First Published Aug 20, 2024, 4:55 PM IST | Last Updated Aug 20, 2024, 5:10 PM IST

ದಕ್ಷಿಣ ಕನ್ನಡ (ಆ.20): ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ಮಾಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಮತ್ತೊಂದು ದೂರು ದಾಖಲಿಸಲಾಗಿದೆ.

ಎಂಎಲ್‌ಸಿ ಐವನ್ ಡಿಸೋಜಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಿನ್ನೆ ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ವಿಎಚ್‌ಪಿ ಕಾರ್ಯಕರ್ತ ಅಖಿಲೇಶ್ ಶೆಟ್ಟಿ ಎಂಬುವವರಿಂದ ಮತ್ತೊಂದು ದೂರು ದಾಖಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹಿಂಬದಿಯಲ್ಲಿ ಬರೆದು ಭರವಸೆ ನೀಡಿರುವ ಪೊಲೀಸರು. ನಿನ್ನೆಯೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಐವಾನ್ ಡಿಸೋಜ್ ವಿರುದ್ಧ ದೂರು ನೀಡಿದ್ದರು. ಆ ವೇಳೆ ದೂರು ಸ್ವೀಕರಿಲು ಪೊಲೀಸರು ಹಿಂದೇಟು ಹಾಕಿದ ಹಿನ್ನೆಲೆ ಕಾರ್ಯಕರ್ತರು ಠಾಣೆ ಎದುರುಗಡೆ ಧರಣಿ ಕುಳಿತು ಪೊಲೀಸರ ನಡೆ ವಿರುದ್ಧ ಧಿಕ್ಕಾರ ಕೂಗಿದ್ದರು. ಇದೀಗ ಎರಡನೇ ದೂರು ದಾಖಲಾಗಿದ್ದು, ಬರ್ಕೆ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

'ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ'; ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ಹೇಳಿಕೆಗೆ ಆರ್‌ವಿ ದೇಶಪಾಂಡೆ ಬೇಸರ

ಏದು ಐವನ್ ವಿವಾದ?

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಭಾಗಿಯಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಾಪಸ್ ಕರೆಸಬೇಕು ಇಲ್ಲವಾದಲ್ಲಿ ಬಾಂಗ್ಲಾ ಪ್ರಧಾನಿಗೂ ಇದೇ ಸ್ಥಿತಿ ಎದುರಾಗಲಿದೆ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಐವನ್ ಡಿಸೋಜಾ ಹೇಳಿಕೆಗೆ ಕಾಂಗ್ರೆಸ್ ನಾಯಕ ಆರ್‌ವಿ ದೇಶಪಾಂಡೆ ಸೇರಿ ಹಲವರು ಖಂಡಿಸಿದ್ದರು. ರಾಜಭವನದ ಮೇಲೆ ಮುತ್ತಿಗೆ ಹಾಕುವುದು ಸರಿ, ಬಾಂಗ್ಲಾ ಮಾದರಿ ದಾಳಿ ಮಾಡುವುದು ಎಂದರೆ ಏನರ್ಥ? ಜವಾಬ್ದಾರಿಯುತ ಸ್ಥಾನದಲ್ಲಿರುವ ಐವನ್ ಡಿಸೋಜಾ ತಮ್ಮ ಮಾತುಗಳನ್ನು ಸುಧಾರಿಸಿಕೊಳ್ಳಬೇಕು ಎಂದಿದ್ದರು. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

'ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ'; ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ಹೇಳಿಕೆಗೆ ಆರ್‌ವಿ ದೇಶಪಾಂಡೆ ಬೇಸರ

ಬಿಜೆಪಿಯಿಂದ ಬೀದರ್‌ನಲ್ಲೂ ದೂರು:

ರಾಜ್ಯಪಾಲರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿರುದ್ಧ ದಕ್ಷಿಣ ಕನ್ನಡದಲ್ಲಷ್ಟೇ ಅಲ್ಲ ಬೀದರ್ ನಲ್ಲೂ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿದೆ. ನಗರದ ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಐವನ್ ಡಿಸೋಜಾ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿದರು.

Latest Videos
Follow Us:
Download App:
  • android
  • ios