ಹಾಸನದಿಂದ ನೆಲಮಂಗಲಕ್ಕೆ ಕೇವಲ ಒಂದೂವರೆ ಗಂಟೆಯಲ್ಲಿ ತಲುಪಿದರೂ ನೆಲಮಂಗಲದಿಂದ ಮುಂದಕ್ಕೆ ಇದ್ದ ಟ್ರಾಫಿಕ್‌ನಿಂದಾಗಿ ಆಸ್ಪತ್ರೆ ತಲುಪಲಾಗದೆ ತುರ್ತು ಪರಿಸ್ಥಿತಿಯಲ್ಲಿದ್ದ ಮಗು ಸಾವನ್ನಪ್ಪಿರುವುದಕ್ಕೆ ಆ್ಯಂಬುಲೆನ್ಸ್‌ ಚಾಲಕನೇ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಬೆಂಗಳೂರು (ಫೆ.04): ಹಾಸನದಿಂದ ನೆಲಮಂಗಲಕ್ಕೆ ಕೇವಲ ಒಂದೂವರೆ ಗಂಟೆಯಲ್ಲಿ ತಲುಪಿದರೂ ನೆಲಮಂಗಲದಿಂದ ಮುಂದಕ್ಕೆ ಇದ್ದ ಟ್ರಾಫಿಕ್‌ನಿಂದಾಗಿ ಆಸ್ಪತ್ರೆ ತಲುಪಲಾಗದೆ ತುರ್ತು ಪರಿಸ್ಥಿತಿಯಲ್ಲಿದ್ದ ಮಗು ಸಾವನ್ನಪ್ಪಿರುವುದಕ್ಕೆ ಆ್ಯಂಬುಲೆನ್ಸ್‌ ಚಾಲಕನೇ ಕಣ್ಣೀರು ಹಾಕಿದ ಘಟನೆ ನಡೆದಿದೆ. ಒಂದು ದಿನದ ಹಿಂದೆ ತುಮಕೂರು ಜಿಲ್ಲೆ ತಿಪಟೂರಿನ ಕೈಮರದ ಬಳಿ ಬೊಲೆರೊ ವಾಹನ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ ಅಪಘಾತದಲ್ಲಿ ತಂದೆ ಅಹಮದ್‌, ತಾಯಿ ರುಕ್ಸಾನಾಗೆ ಗಂಭೀರ ಗಾಯಗಳಾದವು. 

ಹಾಗೆ ಅಘಾತಗೊಂಡ ಒಂದೂವರೆ ವರ್ಷದ ಹುದಾ ಕೌಸರ್‌ಅನ್ನು ತಿಪಟೂರು ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ಗೆ ಕಳಿಸಿದ್ದರು. ಬಳಿಕ ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಸ್ಥಳಾಂತರ ಮಾಡಲು ಸೂಚಿಸಲಾಯಿತು. ಆ್ಯಂಬುಲೆನ್ಸ್‌ ಚಾಲಕ ಮಧು ಮಗುವನ್ನು ವಿವಿಧ ಸಂಘಟನೆಗಳ ನೆರವಿನೊಂದಿಗೆ ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ನೆಲಮಂಗಲವರೆಗೂ ಕರೆದುಕೊಂಡು ಬಂದರು. ಆದರೆ ನೆಲಮಂಗಲದಿಂದ ಮುಂದಕ್ಕೆ ಟ್ರಾಫಿಕ್‌ ಸಮಸ್ಯೆಯುಂಟಾದ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

ಫೇಸ್‌ಬುಕ್‌ನಲ್ಲಿ ನೌಕರಿ ಆಸೆ ತೋರಿಸಿ ನಿರುದ್ಯೋಗಿಗಳಿಗೆ ಟೋಪಿ: ನಾಲ್ವರ ಬಂಧನ

ಆಸ್ಪತ್ರೆಯಲ್ಲಿ ಮಗು ಸಾವು-ವೈದ್ಯರ ವಿರುದ್ಧ ಆಕ್ರೋಶ: ಶಿವಮೊಗ್ಗ ನಗರ ಜೈಲ್‌ ರಸ್ತೆಯಲ್ಲಿರುವ ಸುಬ್ಬಯ್ಯ ಆಸ್ಪತ್ರೆಯಲ್ಲಿ ಭಾನುವಾರ ಹುಟ್ಟಿದ ಮಗು ಸೋಮವಾರ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಗುವಿನ ಸಂಬಂಧಿಕರ ಆಕ್ರೋಶಕ್ಕೆ ಆಸ್ಪತ್ರೆ ಗಾಜುಗಳು ಪುಡಿಪುಡಿಯಾಗಿವೆ. ಬಾಪೂಜಿ ನಗರದ ಭಾಗ್ಯ ಮತ್ತು ನಾಗರಾಜ್‌ ದಂಪತಿಗೆ ಗಂಡುಮಗು ಜನಿಸಿದೆ. ಮಗು ಹುಟ್ಟಿದ ತಕ್ಷಣ ತೂಕ ಹಾಕಿಲ್ಲ. ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರೇ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಮತ್ತು ಸಂಬಂಧಿ​ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿನಿ ಆತ್ಮಹತ್ಯೆ

ಮಗು ಸಾವಿಗೆ ಮುಂಚೆ ವೈದ್ಯರು ಉಸಿರಾಟ ತೊಂದರೆ ಆಗಿದೆ ಎಂದು ಮೆಗ್ಗಾನ್‌ಗೆ ಕರೆದುಕೊಂಡು ಹೋಗಿದ್ದಾರೆ. ಅದನ್ನು ಪೋಷಕರಿಗೆ ತಿಳಿಸಿಲ್ಲ, ಆದರೆ, ನಂತರ ತಿಳಿಸಿದ್ದಾರೆ. ಮಗುವಿಗೆ ಏನು ಸಮಸ್ಯೆಯಾಗಿದೆ, ಸಮಸ್ಯೆಗೆ ಚಿಕಿತ್ಸೆ ಏನು ಕೊಡಬೇಕು ಎಂದು ಆಸ್ಪತ್ರೆಯವರಿಗೆ ತಿಳಿದಿಲ್ಲ. ಮೆಗ್ಗಾನ್‌ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿತ್ತು. ಆದರೆ, ಸುಬ್ಬಯ್ಯ ಆಸ್ಪತ್ರೆಯಲ್ಲಿ ಮಗು ಬದುಕಿದೆ ಎಂದು ಚಿಕಿತ್ಸೆ ನೀಡಿದ್ದಾರೆ ಎಂದು ದೂರಿದ ಪೋಷಕರು ಆಸ್ಪತ್ರೆಯ ಗಾಜುಗಳನ್ನು ಪುಡಿಗೈದು, ಆಕ್ರೋಶ ವ್ಯಕ್ತಪಡಿಸಿದರು.