ಆ್ಯಂಬಿಡೆಂಟ್‌ ಕಂಪನಿ ಮಾಲಿಕ ಫರೀದ್‌ನಿಂದ ಪಡೆದಿರುವ 20 ಕೋಟಿ ರು.ಗಳನ್ನು 10 ದಿನದೊಳಗೆ ನೀಡುವುದಾಗಿ ಪ್ರಮುಖ ಆರೋಪಿ ಅಲಿಖಾನ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮುಚ್ಚಳಿಕೆಯಲ್ಲಿ ತಿಳಿಸಿದ್ದರು. ಆದರೀಗ ಈ ಅವಧಿ ಶುಕ್ರವಾರ ಅಂತ್ಯವಾಗಲಿದೆ.

 ಬೆಂಗಳೂರು[ನ.21]: ಆ್ಯಂಬಿಡೆಂಟ್‌ ಕಂಪನಿ ಮಾಲಿಕ ಫರೀದ್‌ನಿಂದ ಪಡೆದಿರುವ 20 ಕೋಟಿ ರು.ಗಳನ್ನು 10 ದಿನದೊಳಗೆ ನೀಡುವುದಾಗಿ ಇ.ಡಿ. ಡೀಲ್‌ ಪ್ರಕರಣದ ಪ್ರಮುಖ ಆರೋಪಿ ಅಲಿಖಾನ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮುಚ್ಚಳಿಕೆಯ ಅವಧಿ ಶುಕ್ರವಾರ ಅಂತ್ಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಸಿಬಿ ವಶಕ್ಕೆ ಪಡೆಯುವ ಮುನ್ನ ನ್ಯಾಯಾಲಯಕ್ಕೆ ಅಲಿಖಾನ್‌ ಹಣ ಪಾವತಿಸಿದರೆ ತೊಂದರೆ ತಪ್ಪಬಹುದು. ಇದಾಗದೆ ಹೋದರೆ ಆತನಿಗೆ ತನಿಖೆಯ ಉರುಳು ಬಿಗಿಯಾಗಲಿದೆ ಎಂದು ಮೂಲಗಳು ಹೇಳಿವೆ.

ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಗುರುವಾರ ಅಲಿಖಾನ್‌ನನ್ನು ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಲಿರುವ ಸಿಸಿಬಿ, ಆತನನ್ನು ವಶಕ್ಕೆ ಪಡೆದು ಚಿನ್ನ ಮತ್ತು ನಗದು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.