Asianet Suvarna News Asianet Suvarna News

ರಾಜ್ಯದಿಂದ 1361 ಟನ್‌ ಸಿರಿಧಾನ್ಯ ರಫ್ತಿಗೆ ಒಪ್ಪಂದ: ಸಚಿವ ಚಲುವರಾಯಸ್ವಾಮಿ

ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ’ದಲ್ಲಿ ರಾಜ್ಯದ ಉತ್ಪಾದಕರು ಮತ್ತು ಮಾರಾಟಗಾರರಿಗೆ 1361 ಮೆಟ್ರಿಕ್‌ ಟನ್‌ ತೂಕದ 5.10 ಕೋಟಿ ರು. ಮೊತ್ತದ ರಫ್ತು ಮಾಡುವ ಅವಕಾಶ ಲಭಿಸಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Agreement for export of 1361 tonnes of sorghum from the state Says Minister N Cheluvarayaswamy gvd
Author
First Published Jan 7, 2024, 5:43 PM IST | Last Updated Jan 7, 2024, 5:43 PM IST

ಬೆಂಗಳೂರು (ಜ.07): ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ’ದಲ್ಲಿ ರಾಜ್ಯದ ಉತ್ಪಾದಕರು ಮತ್ತು ಮಾರಾಟಗಾರರಿಗೆ 1361 ಮೆಟ್ರಿಕ್‌ ಟನ್‌ ತೂಕದ 5.10 ಕೋಟಿ ರು. ಮೊತ್ತದ ರಫ್ತು ಮಾಡುವ ಅವಕಾಶ ಲಭಿಸಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಪಾದಕರು ಮತ್ತು ಮಾರಾಟಗಾರರ ನಡುವೆ 61 ಆನ್‌ಲೈನ್‌ ಸಭೆ ನಡೆದಿದ್ದು ರಫ್ತಿಗೆ ಸಂಬಂಧಿಸಿದ 6 ಒಪ್ಪಂದಗಳಾಗಿವೆ. 1361 ಮೆಟ್ರಿಕ್‌ ಟನ್‌ ತೂಕದ 5.10 ಕೋಟಿ ರು. ಮೊತ್ತದ ಉತ್ಪನ್ನಗಳ ರಫ್ತಿಗೆ ಅವಕಾಶ ಸಿಕ್ಕಿದೆ. 7 ಅಂತಾರಾಷ್ಟ್ರೀಯ ಮಾರುಕಟ್ಟೆದಾರರು ಸಭೆಯಲ್ಲಿ ಭಾಗವಹಿಸಿದ್ದರು. ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮೇಳವು ನನಗೆ ಅಸಾಧರಣ ಅನುಭವ ನೀಡಿದ್ದು, ಕೃಷಿ ಮಂತ್ರಿಯಾಗಿರುವುದಕ್ಕೆ ಖುಷಿಯಾಗಿದೆ. ಡಿ.5ರಂದು ಮೇಳ ಉದ್ಘಾಟನೆಯಾಗಿದ್ದು ಮೊದಲ ದಿನವೇ 60 ಸಾವಿರಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಆಸ್ಟ್ರೇಲಿಯಾ, ಯೂರೋಪ್, ಕೀನ್ಯಾ, ಕುವೈತ್, ಯುಎಇ ದೇಶಗಳ ಮಾರುಕಟ್ಟೆದಾರರು ಮೇಳದಲ್ಲಿ ಭಾಗವಹಿಸಿದ್ದಾರೆ. ಒಟ್ಟು 310 ಮಳಿಗೆಗಳಿವೆ ಎಂದು ಮಾಹಿತಿ ನೀಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯಬೇಕು. 

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ

ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಸಿರಿಧಾನ್ಯ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು. ಪ್ರಸ್ತುತ ಹೆಕ್ಟೇರ್ ಸಿರಿಧಾನ್ಯಕ್ಕೆ 10 ಸಾವಿರ ರು. ಪ್ರೋತ್ಸಾಹ ಧನ ನೀಡುತ್ತಿದ್ದು, ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ನವಣೆ ಮಸಾಲೆ ಬ್ರೆಡ್, ರಾಗಿಯ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್ , ಬಿಸ್ಕತ್, ಚಕ್ಕುಲಿ, ಚಿಕ್ಕಿ ಅಲ್ಲದೇ ಯುವ ಪೀಳಿಗೆ ಇಷ್ಟಪಡುವ ಆಧುನಿಕ ಸಿರಿಧಾನ್ಯ ಬ್ರೌನಿ, ಬಫ್ತಿನ್ಸ್, ರಾಗಿ ಚಾಕಲೇಟ್, ಜಾಮೂನು ಆಕರ್ಷಕವಾಗಿವೆ ಎಂದು ಬಣ್ಣಿಸಿದರು. ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios