ಬೆಂಗಳೂರು(ಮೇ.21): ರಾಜ್ಯದಲ್ಲಿ ಮೊದಲ 500ರ ಗಡಿ ದಾಟಲು ಒಂದೂವರೆ ತಿಂಗಳು ಸಮಯ ತೆಗೆದುಕೊಂಡಿದ್ದ ಕೊರೋನಾ ಸೋಂಕು ಈಗ ಐದಾರು ದಿನಗಳಲ್ಲೇ 500ರಷ್ಟುಏರಿಕೆಯಾಗುತ್ತಿದೆ. ಮೇ 15ರಂದು ಒಂದು ಸಾವಿರದ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಗುರುವಾರ 1500ರ ಗಡಿ ದಾಟುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮಾ.9ರಂದು ಮೊದಲ ಕೋವಿಡ್‌ ಪ್ರಕರಣ ದಾಖಲಾಗಿತ್ತು. ನಂತರ 22 ದಿನಗಳ ಬಳಿಕ ಅಂದರೆ ಮಾ.31ರಂದು ಸೋಂಕಿತರ ಸಂಖ್ಯೆ 100ರ ಗಡಿ ದಾಟಿತ್ತು. ಬಳಿಕ ಏ.25ರಂದು 500ರ ಗಡಿ ಮುಟ್ಟಿತ್ತು. ಇದಕ್ಕೆ 46 ದಿನಗಳು ಬೇಕಾಯಿತು. ಅನಂತರ ಮೇ 15ರಂದು 1000 ಸಂಖ್ಯೆಯ ಗಡಿ ದಾಟಿತ್ತು. ಅಂದರೆ 500 ಸೋಂಕು ಪ್ರಕರಣಗಳು ಹೆಚ್ಚಾಗಲು 20 ದಿನಗಳನ್ನು ತೆಗೆದುಕೊಂಡಿತ್ತು. ಇದೀಗ ಮೇ 16ರಿಂದ 20ರ ವರೆಗೆ 408 ಪ್ರಕರಣಗಳು ದೃಢಪಟ್ಟಿವೆ. ಇನ್ನು ಒಂದೆರಡು ದಿನಗಳಲ್ಲಿ ಇದು 500ರಷ್ಟಾಗುವ ಸಾಧ್ಯತೆ ಇದೆ.

ವಿಶ್ವದಲ್ಲಿ 50 ಲಕ್ಷ ಜನಕ್ಕೆ ಸೋಂಕು: ಭಾರತಕ್ಕೆ 11ನೇ ಸ್ಥಾನ!

ರಾಜ್ಯದ ಮೊದಲ ಪ್ರಕರಣ- ಮಾ.9

100ರ ಗಡಿ ದಾಟಿದ್ದು - ಮಾ.31

500ರ ಗಡಿ ಮುಟ್ಟಿದ್ದು- ಏ.25

1000 ಗಡಿ ದಾಟಿದ್ದು - ಮೇ 15

1467 ರಷ್ಟಾಗಿದ್ದು- ಮೇ 20