ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಾಹೀರಾತು ಫಲಕಗಳಾದ ಬ್ಯಾನರ್, ಬಂಟಿಂಗ್ಸ್‌, ಬಿಲ್‌ಪೋರ್ಡ್‌ ಪ್ರದರ್ಶನ ಮತ್ತೆ ರಾರಾಜಿಸಲಿವೆ. ಇದಕ್ಕಾಗಿ ಹೊಸ ಜಾಹೀರಾತು ನೀತಿ ಜಾರಿಗೆ ಬರಲಿದೆ.

ಬೆಂಗಳೂರು (ಜು.15): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಾಹೀರಾತು ಫಲಕಗಳಾದ ಬ್ಯಾನರ್, ಬಂಟಿಂಗ್ಸ್‌, ಬಿಲ್‌ಪೋರ್ಡ್‌ ಪ್ರದರ್ಶನ ನಿಷಿದ್ಧವಾಗಿದೆ. ಆದರೆ, ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿ, ಜಾಹೀರಾತು ಪಲಕಗಳ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಬ್ರಾಂಡ್‌‌ ಬೆಂಗಳೂರು ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ಸಂವಾದ‌ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಗಳೂರಿನ ಜನರಿಂದ ಅನೇಕ ಸಲಹೆ ಸೂಚನೆ ಬಂದಿದ್ದಾವೆ. ಸರ್ಕಾರ, ಖಾಸಗಿ ಸಂಸ್ಥೆಗಳಿಂದ ಸೂಚನೆಗಳು ಕೂಡ ಬಂದಿವೆ. ಫೈಬರ್ ಕನೆಕ್ಷನ್ ನಿಂದ ಬೆಂಗಳೂರು ಯಾವ ರೀತಿ ಹಾಳಾಗ್ತಿದೆ ಅನ್ನೋದ್ರ ಬಗ್ಗೆ ಹೇಳಿದ್ದಾರೆ. ಜಾಹಿರಾತು ಬೆಂಗಳೂರಿನಲ್ಲಿ ಸೌಂದರ್ಯಕ್ಕೆ ಧಕ್ಕೆ ಹಾಗೂ ಇತರೆ ಕಾರಣಗಳಿಂದಾಗಿ ಜಾಹಿರಾತು ಫಲಕಗಳನ್ನು ಅಳವಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಈಗ ಜಾಹಿರಾತು ಹೊಸ ಪಾಲಿಸಿಯನ್ನು ಸಿದ್ಧಗೊಳಿಸಲಾಗಿದೆ. ಅದನ್ನು ನಾನು ಸ್ಟಡಿ ಮಾಡ್ತಾ ಇದ್ದೇನೆ. ಆದಷ್ಟು ಬೇಗ ಒಂದು ಹೊಸ ರೂಪ ಕೊಡ್ತೀನಿ ಎಂದು ಮಾಹಿತಿ ನೀಡಿದರು.

Bengaluru: ಸ್ಟಾರ್ ಲೈಫ್ ಮಿಸ್ ಇಂಡಿಯಾ ವಿಜೇತೆ ನಿಶಾ ನರಸಪ್ಪ, ಈಗ ವಂಚನೆ ಆರೋಪಿ

ಟ್ಯಾಕ್ಸ್‌ ಕಟ್ಟದವರನ್ನು ಮ್ಯಾಪಿಂಗ್‌ ಮಾಡಲು ಸೂಚನೆ: ಬೆಂಗಳೂರಿನ ಸಾರ್ವಜನಿಕರು ಸರ್ಕಾರ ಮತ್ತು ಬಿಬಿಎಂಪಿ ಆಡಳಿತದ ಬಗ್ಗೆ ಪಾರದರ್ಶಕತೆ ಕೇಳ್ತಾ ಇದ್ದಾರೆ, ಅದು ಅವರ ಹಕ್ಕು. ಕರೆಂಟ್ ಈ ನಡುವೆ ಡಿಸ್ಟರ್ಬ್ ಆಗ್ತಿದೆ ಅಂತ ಹೇಳಿದ್ದಾರೆ. ನಮ್ಮ ಟೆಕ್ನಾಲಜಿ ಸರಿಯಾಗಿ ಉಪಯೋಗಿಸಿಕೊಂಡು ಹೊಸ ಕಾರ್ಯಕ್ರಮ ನೀಡಬೇಕಿದೆ. ನಾನು ದುಬಾರಿ ಟ್ಯಾಕ್ಸ್ ಹಾಕಬೇಕು ಅಂತ ಇಲ್ಲ. ಯಾರು ಟ್ಯಾಕ್ಸ್ ಕಟ್ತಾ ಇಲ್ವಾ ಅವರನ್ನ ಮ್ಯಾಪಿಂಗ್ ಮಾಡಲು ಹೇಳಿದ್ದೇನೆ. ಟ್ಯಾಕ್ಸ್ ಕಟ್ಟದೆ ಕಳ್ಳಾಟ ಆಡುವವರನ್ನ ಟ್ರೇಸ್ ಮಾಡಬೇಕಿದೆ. ದಿ ವಾಯ್ಸ್ ಬೆಂಗಳೂರಿಯನ್ ಆಗಬೇಕು ಅಂತ ಇಂದು ಸಭೆ ಕರೆಯಲಾಗಿತ್ತು. ಹಿರಿಯ ಅಧಿಕಾರಿಗಳ ಮುಂದೆಯೇ ಅವರ ಸಮಸ್ಯೆ ತಿಳಿಸಬೇಕಿತ್ತು ಹಾಗಾಗಿ ಇಂದು ಸಭೆ ಕರೆಯಲಾಗಿದೆ ಎಂದು ಹೇಳಿದರು.

ಫುಟ್‌ಪಾತ್‌ ಕ್ಲಿಯರೆನ್ಸ್‌ ಮಾಡಲು ಸೂಚನೆ: ಫುಟ್‌ಪಾತ್‌ ಕ್ಲಿಯರೆನ್ಸ್ ಮಾಡಿ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ವೇಸ್ಟ್, ಡಬ್ರೀಸ್ ತಂದು ಸುರೀತಾ ಇದ್ದಾರೆ. ಅದನ್ನು ಸರಿ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಡಬ್ರೀಸ್ ಲೆಕ್ಕ ಕೊಡಿ ಅಂತ ಹೇಳಿದ್ದೇನೆ. ಅದಕ್ಕಾಗಿ ಒಂದು ಸಿಸ್ಟಂ ತರಬೇಕು ಅಂತ ಹೇಳಿದ್ದೇನೆ. ಮೂರು ಮೇಜರ್ ನಿರ್ಧಾರಗಳನ್ನು ಈ ತಿಂಗಳ ಕೊನೆಯಲ್ಲಿ ಹೇಳ್ತೀನಿ. ಆಸ್ತಿ ಪತ್ರ ಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಂವಾದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್, ಬಿಬಿಎಂಪಿಯ ಎಲ್ಲ ಝೋನಲ್ ಕಮಿಷನರ್ ಗಳು ಭಾಗಿಯಾಗಿದ್ದರು. ಇನ್ನು ಜಯನಗರ ಕ್ಷೇತ್ರದ ಮಾಜಿ ಶಾಸಕಿ ಸೌಮ್ಯರೆಡ್ಡಿ ಕೂಡ‌ ಉಪಸ್ಥಿತರಿದ್ದರು. 

ಪಕ್ಕದ್ಮನೆ ಹುಡುಗನಿಂದ ಲವ್‌, ಸೆಕ್ಸ್‌ ಔರ್‌ ದೋಖಾ..: ಮೋಸ ಹೋದ ಹುಡುಗಿಯಿಂದ ದೂರು

  • ಬ್ರ್ಯಾಂಡ್‌ ಬೆಂಗಳೂರು ಸಂವಾದದಲ್ಲಿ ಜನರು ನೀಡಿದ ಸಲಹೆಗಳೇನು? 
  • ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಬ್ರ್ಯಾಂಡ್‌ ಬೆಂಗಳುರು ಕುರಿತು ಸರ್ಕಾರ, ಖಾಸಗಿ ಸಂಸ್ಥೆಗಳಿಂದ ಸಲಹೆಗಳು ಬಂದಿವೆ.
  • ಫೈಬರ್ ಕನೆಕ್ಷನ್ ನಿಂದ ಬೆಂಗಳೂರು ಹಾಳಾಗುತ್ತಿದ್ದು, ಕೂಡಲೇ ಸರಿಪಡಿಸಲು ಮನವಿ
  • ಬಿಬಿಎಂಪಿ ವಾರ್ಡ್‌ ವಿಂಗಡಣೆಗೆ ಸಾರ್ವಜನಿಕರ ಅಭಿಪ್ರಾಯ ಕೇಳಿ.
  • ನಗರದಲ್ಲಿ ಪಾದಚಾರಿ ಮಾರ್ಗ (ಫುಟ್‌ಪಾತ್‌) ಒತ್ತುವರಿ ತೆರವು ಮಾಡಿ.
  • ಐಟಿ ಸಿಟಿ ಆಗಿದ್ದರೂ ಇತ್ತೀಚೆಗೆ ವಿದ್ಯುತ್‌ ಕಡಿತ ಆಗುತ್ತಿದೆ.
  • ಆಸ್ತಿ ತೆರಿಗೆ ಪಾವತಿಗೆ ದರ ಹೆಚ್ಚಳ ಮಾಡದಂತೆ ಮನವಿ.
  •  ಮಕ್ಕಳ ಅಭಿಪ್ರಾಯ ಪಡೆಯುವಂತೆ ಸಲಹೆ.
  • ಬಿಬಿಎಂಪಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ಮನವಿ.
  • ಬ್ರ್ಯಾಂಡ್‌ ಬೆಂಗಳೂರಿಗೆ ಶಾಲಾ-ಕಾಲೇಜು ಮಕ್ಕಳ ಐಡಿಯಾ ಪಡೆಯಲು ಸಲಹೆ.