Asianet Suvarna News

ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದ ಮೊದಲ ವರದಿಯ ಮುಖ್ಯಾಂಶಗಳು

* ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮೊದಲ ವರದಿ ಸಲ್ಲಿಕೆ
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ ಕರ್ನಾಟಕ ಆಡಳಿತ ಸುಧಾರಣಾ ಆಯೋ
* ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2

administration reform commission submits Report to CM BSY rbj
Author
Bengaluru, First Published Jul 3, 2021, 3:32 PM IST
  • Facebook
  • Twitter
  • Whatsapp

ಬೆಂಗಳೂರು, (ಜುಲೈ.03): ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಇಂದು (ಶನಿವಾರ) ತನ್ನ ಮೊದಲ ವರದಿಯನ್ನು ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿತು. 

ಆಯೋಗದ ಅಧ್ಯಕ್ಷರು ಹಾಗೂ ನಿವೃತ್ತ ಮುಖ್ಯಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ|| ಇ.ವಿ.ರಮಣರೆಡ್ಡಿ ಹಾಗೂ ಸಮಿತಿ ಸದಸ್ಯ ಎನ್.ಎಸ್.ಪ್ರಸನ್ನಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನು ವರದಿಯ ಮುಖ್ಯಾಂಶಗಳು ಈ ಕೆಳಗಿನಂತಿವೆ ಇಲ್ಲಿವೆ‌

ಕಂದಾಯ ಇಲಾಖೆ
* ಕಂದಾಯ ಆಹಾರ ಮತ್ತು ನಾಗರಿಕರ ಸರಬರಾಜು ಮತ್ತು ಸಾರಿಗೆ ಸಂಬಂಧಿಸಿದಂತೆ ಶಿಫಾರಸು...
* ನಾಗರಿಕಕರಿಗೆ ಒದಿಗಿಸುವ ಸುಮಾರು 800 ಅನ್ ಲೈನ್ ಸೇವೆಗಳಿಗೆ ಅಟಲ್ ಜೀ ಜನಸ್ಮೇಹಿ ಕೇಂದ್ರ ಏಕಗವಾಕ್ಷಿ ಏಜೆನ್ಸಿ ಆಗಬೇಕು...
* ಸಕಾಲ ಮತ್ತು ಸಕಾಲವಲ್ಲದ  ಸುಮಾರು 800 ಇ ಸೇವೆ ಗಳಿಗೆ ಸೇವಾ ಸಿಂಧೂ ಸಿಂಗಲ್ ಫ್ಲಾಟ್ ಫಾರಂ ಆಗಬೇಕು...
* ಎಲ್ಲಾ ಇ - ಸೇವೆ ಮೊಬೈಲ್ ಮುಲಕ ಒದಗಿಸಲು ಕರ್ನಾಟಕ ಮೊಬೈಲ್ ಒನ್ ಅಪ್ ಪುನಾರಾಭಿವೃದ್ದಿ ಮಾಡಬೇಕು...
* ಹೆಚ್ಚಿನ ಶುಲ್ಕದಲ್ಲಿ ತ್ವರಿತ ಸೇವೆ ಒದಗಿಸಲು ತತ್ಕಾಲ ಸೇವಾ ಸೌಲಭ್ಯ ಲಭ್ಯವಾಗಬೇಕು..
* ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಭೂಮಿ ಅದಾಯ ಮತ್ತು ಜಾತಿ ಇವಗಳಿಗೆ ಸಂಬಂಧಿಸದ ವಂಶವೃಕ್ಷ ವಾಸು ಸ್ಥಳ ಮುಂತಾದ ಕಂದಾಯ ಸೇವೆಗಳ ಪ್ರಮಾಣ ಪತ್ರಗಳನ್ನ ಒದಗಿಸಲು ಅಧಿಕೃತಗೊಳಿಸಬಹುದು..
* ಮೊಜಣಿ ಭೂಮಿ ಮತ್ತು ಡಾಟಬೇಸ್  ಕಂದಾಯ ಸೇವೆಗಳ ತಡ ರಹಿತ ವಿತರಣೆಗೆ ಸಂಯೋಜಿಸಬೇಕು...
* ವಿವಿಧ ಇಲಾಖೆಯ ಎಲ್ಲಾ ಪಿಂಚಣಿ ಯೋಜನೆಗಳನ್ನ ನವೋದಯ ಅಪ್  ಬಳಿ ತರಬಹುದು...
* ಸೇವಾ ಪೊರ್ಟಲ್ ಗಳು ಅನ್ ಲೈನ್ ವಾಲೆಟ್ ಬಳಿಸಿಕೊಂಡು ಅರ್ಜಿ ಶುಲ್ಕ ಸಂಗ್ರಹಿಸಲು UPI/ QR ಕೋಡ್ ಪಾವತಿ ವಿಧಾನ ಹೊಂದಿರಬೇಕು..
* ಅನುಪಯುಕ್ತ ಪ್ರಮಾಣ ಪತ್ತಗಳಾದ ಜನಸಂಖ್ಯೆ ಪ್ರಮಾಣ ಪತ್ರ ವಾಸು ಸ್ಥಳ ಪ್ರಮಾಣ ಪತ್ರ ಬೆಳೆ ಪ್ರಮಾಣ ಪತ್ರ ಮತ್ತು ಕೃಷಷಿಕ ಪ್ರಮಾಣ ಪತ್ರಗಳನ್ನ ತಗೆದುಹಾಕಿ ಸರ್ಕಾರಿ ಅದೇಶವನ್ನ ಹೊರಡಿಸಬೇಕು.....

* ಭೂಸ್ವಾದಿನ ನಿರ್ವಹಣಾ ಸಾಫ್ಟ್‌ವೇರ್ ವ್ಯವಸ್ಥೆಯನ್ನ ಅಭಿವೃದ್ಧಿಪಡಿಸಿ kiadb, BDA, NHAI ಸೇರಿದಂತೆ ಭೂಸ್ವಾಧಿನ ಪಡಸಿಕೊಳ್ಳುವ ಸಂಸ್ಥೆಗಳು ಬಳಸುವುದನ್ನು ಕಡ್ಡಾಯಗೊಳಿಸಿ ಸರ್ಕಾರಿ ಆದೇಶ ಹೊರಡಿಸಬೇಕು...
* ಅಡಮಾನ ನೊಂದಾವಣೆ ಭೂಮಿ ಅಥಾವ ನಿವೇಶನಗಳ ಅಡಮಾನ ಬಿಡುಗಡೆ ,ಎನ್ ಕಂಬ್ರೆನ್ಸ್ ಅನ್ ಲೈನ್ ಗೊಳಿಸಬೇಕು...
* ಕಾವೇರಿ 2 ಮತ್ತು ಆನ್ ಲೈನ್ ಸೇವೆಯನ್ನೂ ಅಭಿವೃದ್ಧಿ ಪಡಿಸಬೇಕು..
* ಎಜ್ ಎಸ್  ಕೆ , ತಹಶಿಲ್ದಾರ್ , ಎಡಿಎಲ್ ಆರ್ ಸಬ್ ರಿಜಿಸ್ಟರ್ ಕಚೇರಿಗಳಿಂದ ಮೇಲ್ಪಟ್ಟ ಎಲ್ಲಾ ಕಚೇರಿಗಳಿ ಇ ಅಫೀಸ್ ಕಡ್ಡಾಯಗೊಳಸಬೇಕು....
* ಗ್ರಾಮ ಲೆಕ್ಕಾಧಿಕಾರಿಯನ್ನ ಗ್ರಾಮಾಧಿಕಾರಿಯಾಗಿ ಮರುಪದನಾಪಕರಣ ಮಾಡಬಹುದು...
* ಗ್ರಾಮ ಲೆಕ್ಕಾಧಿಕಾರಿಯ ಕಾರ್ಯವ್ಯಪ್ತಿ ,ಗ್ರಾಮ ಪಂಚಾಯತ್ ಕಾರ್ಯವ್ಯಪ್ತಿಯೊಂದಿಗೆ ಸಮನ್ವಯಗೊಳ್ಳಬೇಕು..
* ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನ ರದ್ದು ಪಡಿಸಬಹುದು
* ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯದ ಸ್ಥಾಪಿಸಬಹುದು...

ಅಹಾರ ಇಲಾಖೆ
* ಪಡಿತರ ಕಾರ್ಡ್ ದಾರರು ಮತ್ತು ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿತ ಶುಲ್ಕ ಪಾವತಿಸಿ ಮನೆ ಬಾಗಲಿಗೆ ಪಡಿತರ ಪಡೆದುಕೊಳ್ಳಲು ಅನುಮತಿ ನೀಡಬಹುದು....
* ಜನನ ಮರಣ ನೋಂದಣಿ ಪ್ರಕ್ರಿಯೆವನ್ನ ಪಡಿತರ ಚೀಟಿ ಡಾಟಾ ಬೇಸ್ ನೊಂದಿಗೆ ಸಂಯೋಜಿಸಬೇಕು..
* ಕಾನೂನು ಮಾಪಾನ ಶಾಸ್ತ್ರ ಇಲಾಖೆ‌ ನೀಡುವ ಪರವಾನಿಗೆ ಮೂರರಿಂದ ಐದು ವರ್ಷಗಳವರೆಗೆ ಸ್ವಯಂಚಾಲಿತ ಅನ್ ಲೈನ್ ಮೂಲಕ ನವೀಕರಣ ವ್ಯವಸ್ಥೆ ಜಾರಿ ಮಾಡಬಹುದು.

ಸಾರಿಗೆ
* ಎಲ್ಲಾ ಆರ್ ಟಿ ಓ ಸೇವೆಗಳನ್ನ ಕಾಗದ ರಹಿತ ಮಾಡಬಹುದು
* ಬೆಂಗಳೂರು ನಗರದ ಯಾವುದೇ ಆರ್ ಟಿ ಓ ಕಚೇರಿಗಳನ್ನ ಆಯ್ಕೆ ಮಾಡಿಕೊಳ್ಳುವಂತೆ ಇರಬೇಕು...
* ಆರ್ ಟಿ ಓ ಮತ್ತು ಸಾರಿಗೆ ಕಚೇರಿ ಇ ಅಫೀಸ್ ಬಳಿಕೆಯನ್ನ ಬಳಸಬೇಕು..
* ವಶಪಡಿಸಿಕೊಂಡ ವಾಹನಗಳಿಗೆ ನಿಗದಿತ ಸಮಯಲದಲ್ಲಿ ದಂಡ ಪಾವತಿಸದಿದ್ದರೆ ಇ ಹರಾಜು ಹಾಕಲು ಮೋಟಾರು ವಾಹನ ತಿದ್ದುಪಡಿಗೆ ಪ್ರಸ್ತಾಪಿಸಬಹುದು...
* ಸರ್ಕಾರಿ ವಾಹನಗಳ ರಿಪೇರಿ ಕಂಪನಿಯ ಅಧಿಕೃತ ದುರಸ್ತಿ ಕೇಂದ್ರಗಳಿಂದ ಮಾತ್ರ ಮಾಡಿದ್ದಾರೆ ಮೋಟಾರು ವಾಹನ ನಿರಿಕ್ಷಕರು ಪರಿಶೀಲನೆ ಮಾಡೋದನ್ನ ತೆಗೆದುಹಾಕಬಹುದು...
* ಆರ್ ಟಿ ಓ ಕಚೇರಿಗಳಲ್ಲಿ QR ಕೋಡ್ ಆಧಾರಿತ ಕ್ರಿಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿ ಯಂತ್ರ ಸ್ಥಾಪಿಸಬಹುದು...
* ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿಯಲ್ಲಿರುವ ೨ ಐಟಿ ನಿರ್ದೇಶಕರ ಪೈಕಿ ಒಂದು ಹುದ್ದೆ ರದ್ದು ಪಡಿಸಿ ೨ ಐಟಿ ವ್ಯವಸ್ಥೆಗಳ ಉಸ್ತುವಾರಿಗೆ ಒಬ್ಬರೇನ್ನೇ ನಿರ್ದೇಶಕರನ್ನಾಗಿ ಮಾಡುವುದು ಉತ್ತಮ

Follow Us:
Download App:
  • android
  • ios