ದೇವಸ್ಥಾನ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ: ಸಚಿವ ದರ್ಶನಾಪೂರ್
ಮುಂಬರುವ ದಿನಗಳಲ್ಲಿ ಮತ ಕ್ಷೇತ್ರದಲ್ಲಿನ ಸರ್ವ ಸಮುದಾಯಗಳ ದೇವಸ್ಥಾನಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಕಲ್ಪಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪಗೌಡ ದರ್ಶನಾಪೂರ್ ಭರವಸೆ ನೀಡಿದರು.
ಶಹಾಪುರ (ಜು.17) : ಮುಂಬರುವ ದಿನಗಳಲ್ಲಿ ಮತ ಕ್ಷೇತ್ರದಲ್ಲಿನ ಸರ್ವ ಸಮುದಾಯಗಳ ದೇವಸ್ಥಾನಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಕಲ್ಪಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪಗೌಡ ದರ್ಶನಾಪೂರ್ ಭರವಸೆ ನೀಡಿದರು.
ವಿದ್ಯಾ ನಗರದಲ್ಲಿನ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮುದಾಯದವರ ಬಹುದಿನಗಳ ಬೇಡಿಕೆ ಈಡೇರಿಸಲು ಬದ್ಧನಾಗಿದ್ದೇನೆಂದು ಹೇಳಿದರು.
ಯಾದಗಿರಿ: ಕೈಗಾರಿಕೆಗಳಿಗೆ ಬೇಕಿದೆ ಸಚಿವರ ಇಚ್ಛಾಶಕ್ತಿ ‘ದರ್ಶನ’
ನಗರದಲ್ಲಿನ ಸಮುದಾಯ ಹಿಂಗುಲಾಂಬಿಕಾ ದೇವಸ್ಥಾನಕ್ಕೆ ಈಗಾಗಲೇ 10 ಲಕ್ಷ ರು.ಗಳ ಅನುದಾನ ಕಲ್ಪಿಸಲಾಗಿತ್ತು. ಅದರಂತೆ ಬಾಕಿ ಉಳಿದಿರುವ ಇನ್ನಷ್ಟುಕಾಮಗಾರಿಗಳನ್ನು ಕೈಗೊಳ್ಳಲು ಸಮುದಾಯದ ಮನವಿಯಂತೆ ದೇವಸ್ಥಾನದ ಅಭಿವೃದ್ಧಿಗೆ ಇನ್ನು 10 ಲಕ್ಷ ರು.ಗಳ ಅನುದಾನ ಕಲ್ಪಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಚಂದ್ರಶೇಖರ ಆರಬೋಳ, ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಗಿ, ಸಮುದಾಯದ ಮುಖಂಡರಾದ ಗೋಪಾಲರಾವ್ ಭಾಸುತ್ಕರ್, ನಾಗೇಂದ್ರ ಭಾಸುತ್ಕರ್, ತುಳಜಾರಾಮ್ ಭಾಸುತ್ಕರ್, ಅಮರ್ ಮಹೇಂದ್ರಕರ್, ಆನಂದ ಮಹೇಂದ್ರಕರ್, ಚಿದಾನಂದ ಭಾಸುತ್ಕರ್, ಸುರೇಶ ಭಾಸುತ್ಕರ್ ಇತರರಿದ್ದರು.
ಯಾದಗಿರಿ ಜಿಲ್ಲೆಗೆ ಒಲಿದ ಸಚಿವ ಸ್ಥಾನದ ಗರಿ: ಸಣ್ಣ ಕೈಗಾರಿಕಾ ಸಚಿವರಾಗಿ ದರ್ಶನಾಪುರ