Karnataka Hijab Verdict: ಹಿಜಾಬ್ ತೀರ್ಪು ನ್ಯಾಯುತವಾಗಿದೆ: ನಟಿ ತಾರಾ ಅನುರಾಧಾ
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋಟ್ ನೀಡಿದ ತೀರ್ಪು ನ್ಯಾಯುತವಾಗಿದೆ ಎಂದು ಚಿತ್ರನಟಿ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ ಹೇಳಿದರು.
ಗದಗ (ಮಾ.16): ಹಿಜಾಬ್ ಪ್ರಕರಣಕ್ಕೆ (Hijab Verdict) ಸಂಬಂಧಿಸಿದಂತೆ ಹೈಕೋಟ್ (High Court) ನೀಡಿದ ತೀರ್ಪು ನ್ಯಾಯುತವಾಗಿದೆ ಎಂದು ಚಿತ್ರನಟಿ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ (Tara Anuradha) ಹೇಳಿದರು. ಮಂಗಳವಾರ ನಗರದಲ್ಲಿ ಈ ಕುರಿತು ಮಾತನಾಡಿದರು. ಸಮವಸ್ತ್ರ ಅನ್ನೋದು ಶಾಲೆಗಳಲ್ಲಿ ಇರಬೇಕು, ಧರ್ಮವನ್ನು ಮನೆಯಲ್ಲಿ ಪಾಲನೆ ಮಾಡೋದು ತಪ್ಪಿಲ್ಲ. ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ಕಾಣುವ ದೇಶ ಭಾರತ. ಬೇರೆ ಧರ್ಮೀಯರಿಗೆ ಹಲವು ದೇಶಗಳಿವೆ. ಹಿಂದೂ ಧರ್ಮಕ್ಕೆ ಇರುವುದು ಭಾರತ ದೇಶ ಒಂದೇ. ಶ್ರೀಮಂತ, ಬಡವ, ಜಾತಿ, ಮತ ಇಲ್ಲದೇ ಕೂತು ಪಾಠ ಕಲೆಯುವ ದೇವಾಲಯ ಶಾಲೆಗಳು. ಆ ದೇವಾಲಯದಲ್ಲಿ ಧರ್ಮ ಪಾಲಿಸದೇ ಸಮನಾಗಿ ಕಾಣಲು ಸಮವಸ್ತ್ರ ಬೇಕು ಎಂದರು.
ಪುನೀತ್ ನೆನೆದು ಭಾವುಕ: ಮಾ. 17ರಂದು ಕಲಾವಿದನಾಗಿ ಪುನೀತ್ ರಾಜ್‌ಕುಮಾರ್ (Puneeth Rajkumar) ಮತ್ತೊಮ್ಮೆ ನಮ್ಮ ಜತೆಗೆ ಇರುತ್ತಾರೆ. 'ಜೇಮ್ಸ್' (James) ಚಿತ್ರದ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೆ. 'ಜೇಮ್ಸ್' ಪುನೀತ್ ರಾಜಕುಮಾರ ಅವರ ಕೊನೆಯ ಸಿನಿಮಾ ಅಂತಾ ಹೇಳಲು ಇಷ್ಟಇಲ್ಲ. ಅವರ ಬಹುವರ್ಷದ ಕನಸು 'ಜೇಮ್ಸ್' ಚಿತ್ರವಾಗಿತ್ತು. ನಮ್ಮ ಜತೆಗೆ ಈಗ ಪುನೀತ್ ಇಲ್ಲ. ಇಂಥ ದಿನಗಳನ್ನು ನೋಡ್ತೀನಿ ಅನ್ಕೊಂಡಿರಲಿಲ್ಲ. ಕಲಾವಿದನಿಗೆ ಸಾವಿಲ್ಲ, ಅವರ ಕೆಲಸ ಸದಾ ನೆನಪಿಸುತ್ತಿರುತ್ತದೆ ಎಂದ ಚಿತ್ರ ನಟಿ ಅನುರಾಧಾ ಭಾವುಕರಾದರು.
ಈಗೀಗ ಹೆಸರೂ ನೆನಪಿರೋಲ್ಲ, ವಿಪರೀತ ಮರೆವು ಶುರುವಾಗಿದೆ: Tara Anuradha
'ದಿ ಕಾಶ್ಮೀರ ಫೈಲ್ಸ್' ಸಿನಿಮಾ ನೋಡಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದೇನೆ: ಅಲ್ಲಿ ಭಯೋತ್ಪಾದಕರು ಎಷ್ಟೊಂದು ಕ್ರೂರವಾಗಿ ನಡೆದುಕೊಂಡಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಸಿನಿಮಾದಲ್ಲಿ ಇದನ್ನೆಲ್ಲ ನೋಡಿದಾಗ ಅಲ್ಲಿ ಎಷ್ಟೊಂದು ಕ್ರೂರತನ ತಾಂಡವವಾಡುತ್ತಿತ್ತು ಎನ್ನುವುದು ತಿಳಿಯುತ್ತದೆ. ಚಿತ್ರ ನೋಡಿದಾಗ ಮೈ ಜುಂ ಎನ್ನಿಸಿತು. ಒಂದು ರೀತಿಯ ಆಕ್ರೋಶ ದುಃಖ. ಈ ರೀತಿಯಾದ ಪರಿಸ್ಥಿತಿ ನಮ್ಮ ದೇಶದ ಕಾಶ್ಮೀರದಲ್ಲಿ ಪಂಡಿತರ ಹತ್ಯೆ ನಡೆದ ಸಮಯದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕೈ ಕಟ್ಟಿಕುಳಿತ್ತಿದ್ದವಾ ಎಂದು ಅನ್ನಿಸುತ್ತದೆ.
ಹಿಂದೂಗಳನ್ನು ಮತಾಂತರ ಮಾಡಿ ಮುಸ್ಲಿಂ ಧರ್ಮೀಯರು ಕಾಶ್ಮೀರ ಪಂಡಿತರ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನುವುದನ್ನು ವಿವೇಕ ಅಗ್ನಿಹೋತ್ರಿ ಅವರು ಚಿತ್ರದಲ್ಲಿ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. 'ದಿ ಕಾಶ್ಮೀರ ಫೈಲ್ಸ್' (The Kashmir Files) ಸಿನಿಮಾವನ್ನು ರಾಜಕೀಯ ಮಾಡಬೇಡಿ. ಸಮಗ್ರ ಕಲೆ ಸಾಹಸ, ಸಂಗೀತ, ನೃತ್ಯ ಸೇರಿದಾಗ ಒಂದು ಸಿನಿಮಾ ಆಗುತ್ತದೆ. ಎಲ್ಲರನ್ನ ಒಟ್ಟುಗೂಡಿಸುವ ಶಕ್ತಿ ಸಿನಿಮಾಗೆ ಇದೆ. ಇದು ರಾಜಕೀಯ ಸಿನಿಮಾ ಅಲ್ಲ, ಸತ್ಯ ಘಟನೆಯ ನೈಜ ಚಿತ್ರಣ ತೋರಿಸಿರುವ ಸಿನಿಮಾ ಆಗಿದೆ. ಗೂಂಡಾ ಆ್ಯಕ್ಟ್ನಲ್ಲಿ ಪೈರಸಿ ತಂದರೂ ಸಂಪೂರ್ಣ ನಿರ್ನಾಮ ಆಗಿಲ್ಲ. ಪೈರಸಿ ತಡೆಗೆ ಸರ್ಕಾರ ಮತ್ತಷ್ಟುಕಠಿಣ ನಿಯಮ ತರಲಿ ಅಂತಾ ಕೇಳಿಕೊಳ್ಳುತ್ತೇನೆ ಎಂದರು.
ಹಿಜಾಬ್, ಕೇಸರಿ ಯಾವುದೂ ಇಲ್ಲ, ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ: ಭಾರಿ ವಿವಾದಕ್ಕೆ ಕಾರಣವಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆದ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳವಾರ ಬೆಳಗ್ಗೆ ತೀರ್ಪು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದಿದೆ. ಅಲ್ಲದೇ ಶಾಲೆಗೆ ಕೇಸರಿ ಶಾಲು, ಹಿಜಾಬ್ ಆಗಲಿ ಯಾವುದೂ ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸರ್ಕಾರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ಹಿಜಾಬ್ ಧರಿಸಿ ಶಾಲಾ-ಕಾಲೇಜಿನ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸುವ ಮತ್ತು ಸಮವಸ್ತ್ರವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ವಹಿಸಿ ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿತ್ತು.
Hijab Verdict ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ!
ಈ ಆದೇಶ ರದ್ದು ಕೋರಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಮತ್ತಿತರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳ ಕುರಿತು ಸತತ 11 ದಿನ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿರುವ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ.ಜೆ.ಎಂ. ಖಾಜಿ ಅವರನ್ನು ಒಳಗೊಂಡ ಪೀಠ ಸರ್ಕಾರದ ಆದೆಶ ಕಾನೂನು ಬದ್ಧವಾಗಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸರ್ಕಾರದ ಆದೇಶ ಪಾಲನೆ ಮಾಡಬೇಕು, ಇದು ಕಾನೂನು ಬದ್ಧವಾಗಿದೆ ಎಂದಿದೆ.