ಸ್ವಚ್ಚತೆಗಾಗಿ ಮೋದಿಗೆ ನಟ ಅನಿರುದ್ಧ ಪತ್ರ, ಶೌಚಾಲಯಕ್ಕಾಗಿ ವಿದ್ಯಾರ್ಥಿನಿ ಪತ್ರ!
ಉದ್ಯಾನಗರಿ ಬೆಂಗಳೂರು ಅಂದಗೆಡಿಸದಿರಲು ಪತ್ರದಲ್ಲಿ ಪ್ರಧಾನಿ ಮೋದಿಗೆ ಮನವಿ ಮಾಡಿದ ನಟ ಅನಿರುದ್ಧ. ಇನ್ನೊಂದೆಡೆ ಶೌಚಾಲಯ ಕಟ್ಟಿಸಿಕೊಡುವಂತೆ ಆಗ್ರಹಿಸಿ ಹಾವೇರಿ ಜಿ.ಪಂ ಸಿ.ಇ.ಒ ಗೆ ಪತ್ರ ಬರೆದ ವಿದ್ಯಾರ್ಥಿನಿ.
ವರದಿ; ಮಮತಾ ಮರ್ಧಾಳ, ಪವನ್ ಕುಮಾರ್ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜೂನ್.11); ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರವಾಸಿತಾಣಗಳನ್ನು ವೀಕ್ಷಿಸಲೆಂದೆ ನಿತ್ಯ ಸಾವಿರಾರು ಜನ ಲಗ್ಗೆಯಿಡ್ತಾರೆ. ಹೊರರಾಜ್ಯ, ವಿದೇಶದಿಂದ ಬರುವ ಜನರು ಉದ್ಯಾನನಗರಿಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತಾರೆ. ಆದ್ರೆ ಹೀಗೆ ಅಂದ ಹೆಚ್ಚಿಸುತ್ತಿರುವ ಮರ ಗಿಡಗಳಿಗೆ ಕೇಬಲ್ ಗಳನ್ನು ಸುತ್ತಿ ಸಿಲಿಕಾನ್ ಸಿಟಿ ಅಂದ ಹಾಳಾಗ್ತಿದೆ.
ಹೀಗಂತಾ ನಟ ಅನಿರುದ್ಧ (actor Aniruddha) ಜಾಟ್ಕರ್ ಪ್ರಧಾನಿ ನರೆಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ರಸ್ತೆ, ಮರಗಿಡಗಳು ಸೇರಿದಂತೆ ಎಲ್ಲೆಂದರಲ್ಲಿ ತಂತಿ, ಕೇಬಲ್ಗಳನ್ನು ಸುತ್ತಿ ಬಿಡುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗ್ತಿದೆ. ಈ ರೀತಿ ಕೇಬಲ್ಗಳನ್ನು ಎಲ್ಲೆಂದರಲ್ಲಿ ಹಾಕುವ ಬದಲು ಈ ಕೇಬಲ್ ಹಾಗೂ ತಂತಿಗಳನ್ನು ನೆಲದೊಳಗೆ ಸೇರಿಸಬೇಕು. ಇಲ್ಲದಿದ್ದಲ್ಲಿ ಈ ಪರಿಸ್ಥಿತಿಗೆ ಕಾರಣರಾದ ಕೇಬಲ್ ಆಪರೇಟರ್ ಗಳು, ಇಂಟರ್ನೆಟ್ ಸೇವೆಗಳನ್ನು ಒದಗಿಸುವವರು ಹಾಗೂ ಇನ್ನಿತರರ ಮೇಲೆ ಭಾರಿ ದಂಡ ವಿಧಿಸಬೇಕೆಂದು ನಟ ಅನಿರುದ್ಧ ಪ್ರದಾನಿಗೆ ಬರೆದಿರೋ ಬಪತ್ರದಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲೆಡೆ ಕೇಬಲ್ ಹಾಕಿರೋದ್ರಿಂದ ಪಾದಚಾರಿಗಳು, ವಾಹನ ಸವಾರರು ಭಾರೀ ಕಿರಿಕಿರಿ ಅನುಭವಿಸ್ತಿದ್ದಾರೆ. ಜೋತು ಬಿದ್ದ ಕೇಬಲ್ ಗಳಿಂದ ಎಷ್ಟೋ ಜನರಿಗೆ ಅಪಘಾತಗಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಯಾರೂಬಕೂಡ ಕ್ಯಾರೇ ಅನ್ನುತ್ತಿಲ್ಲ. ತಮಗೂ ಅದಕ್ಕು ಸಂಬಂಧವೇ ಇಲ್ಲವೇನೊ ಎಂಬಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಈ ಅವೈಜ್ಞಾನಿಕ ಕೇಬಲ್ ಗಳನ್ನ ತೆರವುಗೊಳಿಸಬೇಕು.
Udupi; 16 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ
ಮರಗಳಿಗೆ ಕೇಬಲ್ ಗಳನ್ನ ಸುತ್ತೋದನ್ನ ಮೊದಲು ನಿಲ್ಲಿಸಬೇಕು. ತೀರಾ ಅವಶ್ಯಕತೆ ಇದ್ರೆ, ಒಂದು ಕಂಬ ನೆಟ್ಟು ಅಲ್ಲಿ ಸುತ್ತಬೇಕು. ಮರಗಳಿದ್ರೆ ನಾವು ಉಸಿರಾಡಬಹುದು. ಅವುಗಳಿಗೂ ಜೀವವಿದೆ. ಕೇಬಲ್ ಸುತ್ತಿ ಮರಗಳನ್ನು ಸಾಯಿಸುವ ಘನಂಧಾರಿ ಕೆಲಸ ಬೇಕಾಗಿಲ್ಲ. ಈಗಾಗಲೇ ಮರಗಳ ಮಾರಣ ಹೋಮವಾಗ್ತಿದೆ. ಅದರ ಜೊತೆಗೆ ಅಲ್ಲೊ ಇಲ್ಲೊ ಉಳಿದಿರುವ ಮರಗಳನ್ನು ಬದುಕಲು ಬಿಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೂ ಮನವಿ ಮಾಡಿಕೊಂಡಿದ್ದಾರೆ.
ಸ್ವಚ್ಚತೆಗಾಗಿ ನಾನೂ ಭಾಗಿ: ನಟ ಅನಿರುದ್ಧ ಕೇವಲ ನಟನಾಗಿ ಮಾತ್ರ ಜನರ ಮೆಚ್ಚುಗೆ ಗಳಿಸಿಲ್ಲ. ಅದರ ಜೊತೆಗೆ ಸ್ವಚ್ಚತೆಗಾಗಿ ನಾನೂ ಭಾಗಿ ಎಂಬ ಅಭಿಯಾನದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉದ್ಯಾನನಗರದಲ್ಲಿ ಕಾಣಿಸುತ್ತಿರುವ ಕಸದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸಲು ಅನಿರುದ್ಧ ಸದಾ ತುಡಿಯುತ್ತಿದ್ದಾರೆ. ನಗರದಲ್ಲಿ ಎತ್ತ ನೋಡಿದ್ರೂ ಕಸದ ರಾಶಿ ಕಣ್ಣಿಗೆ ರಾಚುತ್ತೆ. ಗಬ್ಬು ನಾರುತ್ತಿರುವ ಕಸದ ಸಮಸ್ಯೆಯಿಂದ ಮುಕ್ತಿ ದೊರಕಿಸಲು ನಿತ್ಯ ಪ್ರತಿ ಏರಿಯಾಗಳಿಗೆ ತೆರಳಿ ವೀಡಿಯೋ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರ್ತಿದ್ದಾರೆ. ಅಲ್ಲದೆ ಹೂಳು ತುಂಬಿರೋ ಕೆರೆ, ಕಸದ ರಾಶಿಯಿಂದ ತುಂಬಿ ಗಬ್ಬು ನಾರುತ್ತಿರುವ ರಸ್ತೆಗಳ ಸ್ವಚ್ಚತೆಗಾಗಿ ಅಭಿಯಾನ ಮಾಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಇನ್ನೂ ಒಂದೂವರೆ ವರ್ಷ ಕೊರೋನಾ ಕಾಟ; ಕೋಡಿಹಳ್ಳಿ ಶ್ರೀ ಭವಿಷ್ಯ
ಶೌಚಾಲಯ ಕಟ್ಟಿಸಿಕೊಡುವಂತೆ ಆಗ್ರಹಿಸಿ ಹಾವೇರಿ ಜಿ.ಪಂ ಸಿ.ಇ.ಒ ಗೆ ಪತ್ರ ಬರೆದ ವಿದ್ಯಾರ್ಥಿನಿ: ಶಾಲೆಗಳೇನೋ ಶುರುವಾದವು. ಆದರೆ ಮೂಲಭೂತ ಸೌಕರ್ಯಗಳಿಂದ ಶಾಲಾ ಮಕ್ಕಳು ಪರದಾಡೋದೇನು ತಪ್ಪಿಲ್ಲ.ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿ ಅಂತಾ ಹಾವೇರಿ ಜಿಲ್ಲಾ ಪಂಚಾಯತ್ ಸಿ.ಇ.ಓ ಗೆ ವಿದ್ಯಾರ್ಥಿನಿ ಪತ್ರ ಬರೆದಿದ್ದಾಳೆ.
ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ಹಿರೇಹುಳ್ಯಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ಕಮ್ಮಾರಳಿಂದ ಜಿ.ಪಂ.ಸಿಇಒ ಮಹ್ಮದ ರೋಷನ್ ಗೆ ಪತ್ರ ಬರೆದಿದ್ದಳು.ಇನ್ನೂ ವಿದ್ಯಾರ್ಥಿನಿ ಯ ಪತ್ರಕ್ಕೆ ಸ್ಪಂದಿಸಿದ ಸಿ.ಇ.ಒ ಮಹಮ್ಮದ್ ರೋಷನ್ ಇಂದು ಶಾಲೆಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣ ಕ್ಕೆ ಸ್ಥಳ ಪರಿಶೀಲನೆ ನಡೆಸಿ ಶೌಚಾಲಯ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ರು.