Asianet Suvarna News Asianet Suvarna News

ಕೊರೊನಾ ನಿರ್ವಹಣೆಗೆ ಸಿಎಂ 6 ಖಡಕ್ ಸೂತ್ರಗಳು: ಸೂಚನೆ ಪಾಲಿಸಬೇಕು ಅಷ್ಟೇ.!

ಲಾಕ್‌ಡೌನ್‌ ಮಧ್ಯೆ ಜನರು ಗುಂಪು ಗುಂಪಾಗಿ ಸೇರಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಅಷ್ಟದಿಕ್ಪಾಲಕರ ಸಭೆಯಲ್ಲಿ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.ಹೆಚ್ಚಿನ ಪೊಲೀಸ್ ನಿಯೋಜಿಸಲು ಸೂಚನೆ ನೀಡಿದ್ದಾರೆ.

Act Against Lockdown Violators BSY tells Police
Author
Bengaluru, First Published Jul 17, 2020, 7:08 PM IST

ಬೆಂಗಳೂರು (ಜು. 17): ಬೆಂಗಳೂರಿನಲ್ಲಿ ಕೋವಿಡ್19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಚಿವರು ಹಾಗೂ ಸಂಸದರ ಸಭೆ ನಡೆಸಿದರು.

 

ಲಾಕ್‌ಡೌನ್‌ ಮಧ್ಯೆ ಜನರು ಗುಂಪು ಗುಂಪಾಗಿ ಸೇರಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಅಷ್ಟದಿಕ್ಪಾಲಕರ ಸಭೆಯಲ್ಲಿ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.ಹೆಚ್ಚಿನ ಪೊಲೀಸ್ ನಿಯೋಜಿಸಲು ಸೂಚನೆ ನೀಡಿದ್ದಾರೆ.

ಮನೆಯಲ್ಲಿ ಜಾಗ ಇಲ್ಲದವರಿಗೆ ಕಲ್ಯಾಣ ಮಂಟಪಗಳೇ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗುತ್ತದೆ. ಪ್ರತಿ ವಾರ್ಡ್‌ಗಳಲ್ಲಿ ಕಲ್ಯಾಣ ಮಂಟಪಗಳನ್ನು ಗುರುತಿಸಿ ಜೊತೆಗೆ ಕೊರೊನಾ ಪರೀಕ್ಷೆಯನ್ನೂ ಹೆಚ್ಚಿಸುವಂತೆ ಅಷ್ಟದಿಕ್ಪಾಲಕರಿಗೆ ಸೂಚನೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮೇಲೆ ನಿಗಾ ಇರಲಿ. ಚಿಕಿತ್ಸೆ ಸೌಲಭ್ಯ ದೊರಕಿಸಲು ಖಾತ್ರಿಪಡಿಸಬೇಕು.ಲಕ್ಷಣವಿಲ್ಲದ ಸೋಂಕಿತರಿಗೆ ಆಸ್ಪತ್ರೆ ಚಿಕಿತ್ಸೆ ಬೇಡ. ಹೋಂ ಕ್ವಾರಂಟೈನ್ ಸಾಕು. ಯಾವುದೇ ಕಾರಣಕ್ಕೂ ಖಾಸಗಿ ಅಸ್ಪತ್ರೆಗಳು ಉದ್ಧಟತನ ಮಾಡದಂತೆ ನಿಗಾ ವಹಿಸಿ ಎಂದು ಸೂಚನೆ ನೀಡಿದ್ದಾರೆ.

ಬೆಡ್‌ ನೀಡದ ಖಾಸಗಿ ಆಸ್ಪತ್ರೆಗಳಿಗೆ ವಾರ್ನಿಂಗ್ ನೀಡಲಾಗಿದೆ. ತಪ್ಪಿತಸ್ಥ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ಖಾಸಗಿ ಅಸ್ಪತ್ರೆಗಳಲ್ಲಿ ಬೆಡ್‌ ಬಗ್ಗೆ ನಿಗಾ ವಹಿಸಿ ಎಂದು ಉಸ್ತುವಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.

ಮೃತದೇಹಗಳ ತ್ವರಿತ ವಿಲೇವಾರಿಯಾಗಲಿ. ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಆಂಟಿಜೆನ್ ಟೆಸ್ಟ್‌ ಆಗಲಿ ಎಂದು ಸಿಎಂ ಸೂಚನೆ ನೀಡಿದ್ದಾರೆ.

ಕೋವಿಡ್ ಎಂದು ಗೊತ್ತಾದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಬೇಕು. ಸೋಂಕಿತರು 2 ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದಿದ್ದಾರೆ. 


 

Follow Us:
Download App:
  • android
  • ios