ರೇಣುಕಾಸ್ವಾಮಿ ಪ್ರಕರಣ ಪ್ರಕಟಿಸದಂತೆ ಮಾಧ್ಯಮಕ್ಕೆ ನಿರ್ಬಂಧ ಹೇರಲು ಹೈಕೋರ್ಟ್‌ಗೆ ದರ್ಶನ್ ಅರ್ಜಿ
32 ಇಂಚಿನ ಟಿವಿಯಲ್ಲಿ ಎಲ್ಲಿ ನೋಡಿದರೂ ರೇಣುಕಾಸ್ವಾಮಿ ಕೊಲೆ ಪ್ರಕರಣ ಚಾರ್ಜ್‌ಶೀಟ್ ಮಾಹಿತಿಗಳೇ ಅಬ್ಬರಿಸುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡದಂತೆ ನಿರ್ಬಂಧ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು(ಸೆ.09) ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಕೋಲಾಹಲವೇ ಸೃಷ್ಟಿಯಾಗಿದೆ. ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಕೃತ್ಯದ ಇಂಚಿಂಚು ಮಾಹಿತಿ ಬಯಲಾಗಿದೆ. ಮಾಧ್ಯಮಗಳು ಈ ಮಾಹಿತಿಯನ್ನು ಬಹಿರಂಗಪಡಿಸುತ್ತಿದ್ದಂತೆ ಜೈಲಿನಲ್ಲಿರುವ ನಟ ದರ್ಶನ್ ಅಲರ್ಟ್ ಆಗಿದ್ದಾರೆ. 32 ಇಂಚಿನ ಟಿವಿಯಲ್ಲಿ ಮೂಲೆ ಮೂಲೆಯಲ್ಲಿ ಚಾರ್ಜ್‌ಶೀಟ್ ಮಾಹಿತಿಗಳೇ ಅಬ್ಬರಿಸುತ್ತಿದೆ. ಇದರಿಂದ ರೋಸಿ ಹೋಗಿರುವ ದರ್ಶನ್ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡದಂತೆ ಹೈಕೋರ್ಟ್ ನಿರ್ದೇಶ ನೀಡಬೇಕು ಎಂದು ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.
ನಟ ದರ್ಶನ್ ಹೈಕೋರ್ಟ್ ಸಲ್ಲಿಸಿದ ಅರ್ಜಿಯಲ್ಲಿ ಪ್ರಮುಖವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯ ಚಾರ್ಜ್ ಶೀಟ್ ವರದಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ. ಮಾಧ್ಯಮಗಳು ಈ ಮಾಹಿತಿ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಲು ಕೋರಿ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿಗೆ ಒಂಟಿ ವೃಷಣ, ತನಿಖೆ ವೇಳೆ ಅಂಗಾಂಗ ವೈಕಲ್ಯ ಬಯಲು!
ಬರೋಬ್ಬರಿ 3991 ಪುಟಗಳ ಚಾರ್ಚ್ ಶೀಟ್‌ನ ಪ್ರಮುಖ ಮಾಹಿತಿಗಳನ್ನು ಬಹುತೇಕ ಮಾಧ್ಯಮಗಳು ಪ್ರಕಟಿಸಿದೆ. ಈ ಪೈಕಿ ಕೊಲೆಗೆ ಕಾರಣ, ರೇಣುಕಾಸ್ವಾಮಿ ಕಿಡ್ನಾಪ್, ನಕಲಿ ಖಾತೆ ಹೊಂದಿದ್ದ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿದ ರೋಚಕ ಘಟನೆ, ಬೆಂಗಳೂರಿಗೆ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ, ನಟ ದರ್ಶನ್ ಹಾಗೂ ಪವಿತ್ರಾ ಗೌಡರಿಂದ ಹಲ್ಲೆ, ಕ್ರೌರ್ಯ, ರೇಣುಕಾಸ್ವಾಮಿ ಕೊಲೆ, ಮೃತದೇಹ ಎಸೆದು ಸಾಕ್ಷ್ಯ ನಾಶಕ್ಕೆ ಮಾಡಿದ ಪ್ರಯತ್ನ, ಪೊಲೀಸರ ಎದರು ಇತರರನ್ನು ಸರೆಂಡರ್ ಮಾಡಿಸುವ ಪ್ರಯತ್ನ, ಕೊಲೆ ಪ್ರಕರಣದ ವೈಜ್ಞಾನಿಕ ಸಾಕ್ಷ್ಯಗಳು, ಸಾಕ್ಷಿಗಳು ಸೇರಿದಂತೆ ಎಲ್ಲಾ ಮಾಹಿತಿಗಳು ಚಾರ್ಜ್‌ಶೀಟ್‌ನಲ್ಲಿದೆ. ಈ ಪೈಕಿ ಬಹುತೇಕ ಮಾಹಿತಿಗಳನ್ನು ಮಾಧ್ಯಮಗಳು ಪ್ರಕಟಿಸಿದೆ. ಇದೀಗ ಮಾಧ್ಯಮಗಳು ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ನಟ ದರ್ಶನ್ ಸಂಬಂದ ಯಾವುದೇ ಮಾಹಿತಿ ಪ್ರಸಾರ ಹಾಗೂ ಪ್ರಕಟಿಸದಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇತ್ತ ನಟ ದರ್ಶನ್ ಜಾಮೀನಿಗಾಗಿ ಹೋರಾಟ ಆರಂಭಿಸುವ ಸಾಧ್ಯತೆ ಇದೆ. ನ್ಯಾಯಾಂಗ ಬಂಧನ ಅವಧಿ ಅಂತ್ಯಗೊಳ್ಳುತ್ತಿದ್ದಂತೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇತ್ತ ಪೊಲೀಸರು ಪ್ರಬಲ ಸಾಕ್ಷ್ಯಗಳನ್ನು ಮುಂದಿಟ್ಟಿದ್ದಾರೆ. ಇದರ ಜೊತೆಗೆ ನಟ ದರ್ಶನ್ ಹಾಗೂ ಗ್ಯಾಂಗ್ ಸಾಕ್ಷ್ಯ ನಾಶಕ್ಕೆ ನಡೆಸಿದ ಪ್ರಯತ್ನಗಳನ್ನು ಈಗಾಗಲೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯೆತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ.
ದರ್ಶನ್ ನನಗೆ ಶತ್ರು ಅಲ್ಲ, ಯಾವಾಗಲೂ ಎತ್ತರದಲ್ಲಿ ಇರಲ್ಲ ತಗ್ಗಿಬಗ್ಗಿ ನಡೆಯಬೇಕು: ಉಮಾಪತಿ ಶ್ರೀನಿವಾಸ್