comscore

Kannada News LIVE: ಸರಕಾರಿ ನೌಕರಿ, SDA ಬಳಿ ಕೋಟಿ ಕೋಟಿ ಆಸ್ತಿ!

ACB Raids 21 Govt Officials over Disproportionate Assets Cases in Karnataka News Live Updates in Kannada

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬೆಳ್ಳಂ ಬೆಳಗ್ಗೆ ಶಾಕ್ ನಿಡಿದೆ. ಹೌದು ರಾಜ್ಯದ ಒಟ್ಟು 21 ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಇವರಿಗೆ ಸಂಬಂಧಿಸಿದ 80 ಸ್ಥಳಗಳ ಮೇಲೆ ಈ ರೇಡ್‌ ನಡೆದಿದೆ. ಶಿವಮೊಗ್ಗ, ಬೆಳಗಾವಿ,ಧಾರವಾಡಿ ಸೇರಿ ರಾಜ್ಯದ ಹಲವೆಡೆ ಭ್ರಷ್ಟ ಸರಕಾರಿ ಅಧಿಕಾರಿಗಳ ವಿರುದ್ಧ ದಾಳಿ ನಡೆಯುತ್ತಿದ್ದು, ಕೋಟ್ಯಾಂತರ ರೂ. ಮೌಲ್ಯದ ನಗದು, ಚಿನ್ನ, ವಾಹನಗಳು ಸೇರಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗುತ್ತಿವೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದು, ಪರಿಶೀಲನೆ ಮುಂದುವರಿದಿದೆ. ಬೆಳಗಾವಿ ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಬಿ.ವೈ.ಪವಾರ್  ಅವರ ನಿಪ್ಪಾಣಿ ಪಟ್ಟಣದ ಆಜಾದ ಗಲ್ಲಿಯ ಸಂಬಂಧಿಕರ ಮನೆ ಮತ್ತು ಶಿವಾಜಿ ನಗರದ ಬಿ.ವೈ.ಪವಾರ್ ಅವರ ಸ್ವಂತ ಮನೆಯಲ್ಲಿಯೂ ದಾಳಿ ನಡೆದಿದ್ದು ಆಸ್ತಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ 6 ಎಸಿಬಿ. ಧಾರವಾಡದಲ್ಲಿ ಆರ್‌ಟಿಒ ಅಧಿಕಾರಿ ಯಲ್ಲಪ್ಪ ಪಡಸಾಲಿಗೆ ನಿವಾಸದಲ್ಲಿ ನಗದು ರು 16 ಲಕ್ಷ.  250 ಗ್ರಾಂ ಚಿನ್ನಾಭರಣ ಪತ್ತೆ.ಕೊಪ್ಪಳದಲ್ಲಿ 4 ಕಡೆ, ಬಾಗಲಕೋಟೆಯಲ್ಲಿ 2 ಕಡೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. 

1:02 PM IST

ದ್ವಿತೀಯ ದರ್ಜೆಸಹಾಯಕನ ಬಳಿ ಕೋಟಿ ಕೋಟಿ ಆಸ್ತಿ

ಚಿಕ್ಕಮಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ. SDA ತಿಮ್ಮಯ್ಯ ನಿವಾಸದಲ್ಲಿ ಅಕ್ರಮ‌ ಸಂಪತ್ತು ಪತ್ತೆ. ಡಿವೈಎಸ್ಪಿ ಅನಿಲ್‌ ರಾಥೋಡ್ ನೇತೃತ್ವದಲ್ಲಿ ನಡೆದಿರುವ ದಾಳಿ. ಏಕಕಾಲದಲ್ಲಿ ಮನೆ, ಕಛೇರಿ, ಪೂರ್ವಿಕರ ನಿವಾಸದ ಮೇಲೂ ದಾಳಿ. ಕಡೂರು ಪಟ್ಟಣದಲ್ಲಿ ಮೂರು‌ ನಿವೇಶನ, 8 ಗುಂಟೆ ಜಮೀನು, ಬಸೂರು ಸಮೀಪ 80 ಲಕ್ಷ ಮೌಲ್ಯದ 20 ಎಕ್ರೆ ತೋಟ, ಬಸೂರಿನಲ್ಲಿ 5 ಎಕ್ರೆ ಖಾಲಿ ನಿವೇಶನ ಮತ್ತು 50 ಸಾವಿರ ನಗದು100 ಗ್ರಾಂ  ಬೆಳ್ಳಿ, 250 ಗ್ರಾಂ ಚಿನ್ನ ಪತ್ತೆ. ಎಸಿಬಿ ಅಧಿಕಾರಿಗಳಿಂದ ತೀವ್ರ ಶೋಧ. ದ್ವೀತಿಯ ದರ್ಜೆ ಸಹಾಯಕನ ಬಳಿ ಅಪಾರ ಪ್ರಮಾಣದ ಆಸ್ತಿ ,ನಿವೇಶನ
ಪತ್ತೆ.

12:26 PM IST

ರಾಜ್ಯದ 21 ಅಧಿಕಾರಿಗಳ ಮೇಲೆ ರೇಡ್

ಕಾರವಾರದಲ್ಲಿಯೂ ಎಸಿಬಿ ದಾಳಿ ನಡೆಯುತ್ತಿದೆ. ಬೆಂಗಳೂರಿನ ಟೀಮಿನಿಂದ ರೈಡ್ ಆಗುತ್ತಿದೆ. ನಿನ್ನೆ ತಡರಾತ್ರಿ ನಗರಕ್ಕೆ ಆಗಮಿಸಿತ್ತು ಈ ತಂಡ. ಇಂದು ಬೆಳಗ್ಗೆ ಪಿ ಡಬ್ಲು ಡಿ ಸಹಾಯಕ ಎಂಜನಿಯರ ರಾಜೀವ ಹಾಗೂ ನೋಂದಣಿ ಅಧಿಕ‌ಾರಿ ರಾಜೇಶ ನಿವಾಸದ‌ ಮೇಲೆ ದಾಳಿ ಮಾಡಲಾಗಿದೆ‌.

"

12:22 PM IST

ಸಿಪಿಐ ಉದಯ್ ರವಿ ಹಾಗೂ ಆಪ್ತರ ಮನೆ ಮೇಲೆ ಎಸಿಬಿ ದಾಳಿ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ದಾಳಿ ನಡೆಯುತ್ತಿದೆ. ಸಿಪಿಐ ಉದಯ್ ರವಿ ಹಾಗೂ ಆಪ್ತರ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, 35 ಜನರ ಎಸಿಬಿ ಟೀಂನಿಂದ ಸಿಪಿಐ ಉದಯ್ ರವಿ ಅತ್ತೆ ಗಿರಿಜಮ್ಮ ಹಾಗೂ ಆಪ್ತ ಡಾ.ಅಯ್ಯಪ್ಪ ಮನೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಎರಡು ಕಡೆ ತಲಾ 8 ಜನರ ಟೀಂನಿಂದ ಶೋಧನಾ ಕಾರ್ಯ ನಡೆಯುತ್ತಿದೆ. ಉಳಿದ ಟೀಂಗಳಿಂದ ನಡೆಯುತ್ತಿದೆಯಂತೆ ಸಿಕ್ರೀಟ್ ಆಪರೇಷನ್. ಸಿಪಿಐ ಉದಯರವಿ ಅವರ ಗುರುಗಳಾದ ಡಾ ಅಯ್ಯಪ್ಪ ಅವರ ಮನೆಯಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ಹಣ, ಒಡವೆ, ಸದ್ಯ ಇವೆರಡು ಕಡೆ ಅಪಾರ ಪ್ರಮಾಣದ ಚಿನ್ನಾಭರಣ,ನಗದು ಪತ್ತೆ.

10:54 AM IST

ಧಾರವಾಡ ಭ್ರಷ್ಟ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

ಧಾರವಾಡದಲ್ಲಿ ಎಸಿಬಿ ದಾಳಿ, ಭ್ರಷ್ಟ RTO ಇನ್ಸ್‌ಪೆಕ್ಟರ್ ಯಲ್ಲಪ್ಪ ಪಡಸಾಲೆ ಮನೆ ಮೇಲೆ ಎಸಿಬಿ ದಾಳಿ ನಡೆಯುತ್ತಿದ್ದು ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಮತ್ತೆ ಏನೇನು ಸಿಗುತ್ತೋ ಕಾದು ನೋಡಬೇಕಿದೆ.

"

10:51 AM IST

ಹಾವೇರಿ: UTP ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಅಪ್ಪರ್ ತುಂಗಾ ಯೋಜನಾ  ಕಚೇರಿಯ ಅಧಿಕಾರಿ ಮೇಲೆ ಎಸಿಬಿ ದಾಳಿ ನಡೆಯುತ್ತಿದೆ. ಎಇಇ ಚಂದ್ರಪ್ಪ ಓಲೇಕಾರ ಮನೆ ಇಂದು ಬೆಳಿಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು. ಸಿದ್ದಾರೂಢ ನಗರದ ಮನೆಯ ಮೇಲೆ ದಾಳಿ ಮಾಡಿದ ಎಸಿಬಿ‌ ಅಧಿಕಾರಿಗಳು. ಚಂದ್ರಪ್ಪ ಓಲೆಕಾರ್ ಬ್ಯಾಡಗಿ ತಾಲೂಕು ಆಣೂರು ಗ್ರಾಮದ ಸ್ವಂತ ಮನೆ ಮೇಲೂ ಕೂಡಾ ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಅಲ್ಲಿ ಪಿತ್ರಾರ್ಜಿತ ಆಸ್ತಿ ಮತ್ತು ಕೋಳಿ ಫಾರಂ ಇರೋದು ಪತ್ತೆ ಆಗಿದೆ. ರಾಣೆಬೆನ್ನೂರು ನಗರದಲ್ಲಿರುವ  ಮನೆಯಲ್ಲಿ 8 ಲಕ್ಷ ನಗದು ಪತ್ತೆ.
ಮನೆಯಲ್ಲಿನ ಆಭರಣಗಳ ಪರಿಶೀಲನೆ  ಮುಂದುವರೆಸಿರೋ ಎಸಿಬಿ.

10:49 AM IST

ಬೆಳಗಾವಿಯಲ್ಲಿ PWD ಸೂಪರಿಂಟೆಂಡೆಂಟ್ ನಿವಾಸ ಮೇಲೆ ಎಸಿಬಿ ದಾಳಿ

ಬೆಳಗಾವಿಯಲ್ಲಿ PWD ಸೂಪರಿಂಟೆಂಡೆಂಟ್ ನಿವಾಸ ಮೇಲೆ ಎಸಿಬಿ ದಾಳಿ ಪ್ರಕರಣ. ಎಸಿಬಿ ಎಸ್ ಪಿ ನ್ಯಾಮಗೌಡರ ನೇತೃತ್ವದಲ್ಲಿ ದಾಖಲ ಪರಿಶೀಲನೆ. ಜಕ್ಕೇರಿ ಹೊಂಡದ ನಿವಾಸದಲ್ಲಿ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಹಲವು ಮಹತ್ವದ ದಾಖಲೆ ಪತ್ತೆಯಾಗಿವೆ. ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಸರ್ಕಾರಿ ನಿವಾಸದಲ್ಲೂ ಪರಿಶೀಲನೆ ಮುಂದುರಿದಿದೆ. ಎಸಿಬಿ ಡಿವೈಎಸ್‌ಪಿ ಕರುಣಾಕರಶೆಟ್ಟಿ ನೇತೃತ್ವದಲ್ಲಿ ಸರ್ಕಾರಿ ನಿವಾಸದಲ್ಲಿ ಪರಿಶೀಲನೆ. ಬಿ.ವೈ.ಪವಾರ್ ಸರ್ಕಾರಿ ನಿವಾಸದಲ್ಲಿ 5 ಲಕ್ಷ ನಗದು ಪತ್ತೆ ಮಾಹಿತಿ. ಒಟ್ಟಾರೆ 6 ಕಡೆ ನಿರಂತರ ಪರಿಶೀಲನೆಯಲ್ಲಿ ತೊಡಗಿರುವ ಎಸಿಬಿ & ಟೀಮ್

10:47 AM IST

ಬೆಳಗಾವಿ ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಮನೆಯಲ್ಲಿ ಕೋಟಿ ಕೋಟಿ ರೂ.

ಬೆಳಗಾವಿ ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಬಿ.ವೈ.ಪವಾರ್ ನಿವಾಸದಲ್ಲಿ ಲಕ್ಷಾಂತರ ಹಣ ಪತ್ತೆ. ಜಕ್ಕೇರಿ ಹೊಂಡದಲ್ಲಿರುವ ಬಿ.ವೈ.ಪವಾರ್ ನಿವಾಸದಲ್ಲಿ ಲಕ್ಷಾಂತರ ಹಣ ಸಿಕ್ಕಿದೆ.  ಎಸಿಬಿ ಎಸ್‌ಪಿ ಬಿ.ಎಸ್.ನ್ಯಾಮಗೌಡರ ನೇತೃತ್ವದಲ್ಲಿ ಮುಂದುವರಿದ ಪರಿಶೀಲನೆ. ಬಿ.ವೈ.ಪವಾರ್ ನಿವಾಸದಲ್ಲಿ ಬೆಳ್ಳಿ, ಚಿನ್ನದ ಆಭರಣಗಳು ಪತ್ತೆ

ಯಾರ ಯಾರ ಮನೆಯಲ್ಲಿ ಎಸಿಬಿ ದಾಳಿ

1:02 PM IST:

ಚಿಕ್ಕಮಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ. SDA ತಿಮ್ಮಯ್ಯ ನಿವಾಸದಲ್ಲಿ ಅಕ್ರಮ‌ ಸಂಪತ್ತು ಪತ್ತೆ. ಡಿವೈಎಸ್ಪಿ ಅನಿಲ್‌ ರಾಥೋಡ್ ನೇತೃತ್ವದಲ್ಲಿ ನಡೆದಿರುವ ದಾಳಿ. ಏಕಕಾಲದಲ್ಲಿ ಮನೆ, ಕಛೇರಿ, ಪೂರ್ವಿಕರ ನಿವಾಸದ ಮೇಲೂ ದಾಳಿ. ಕಡೂರು ಪಟ್ಟಣದಲ್ಲಿ ಮೂರು‌ ನಿವೇಶನ, 8 ಗುಂಟೆ ಜಮೀನು, ಬಸೂರು ಸಮೀಪ 80 ಲಕ್ಷ ಮೌಲ್ಯದ 20 ಎಕ್ರೆ ತೋಟ, ಬಸೂರಿನಲ್ಲಿ 5 ಎಕ್ರೆ ಖಾಲಿ ನಿವೇಶನ ಮತ್ತು 50 ಸಾವಿರ ನಗದು100 ಗ್ರಾಂ  ಬೆಳ್ಳಿ, 250 ಗ್ರಾಂ ಚಿನ್ನ ಪತ್ತೆ. ಎಸಿಬಿ ಅಧಿಕಾರಿಗಳಿಂದ ತೀವ್ರ ಶೋಧ. ದ್ವೀತಿಯ ದರ್ಜೆ ಸಹಾಯಕನ ಬಳಿ ಅಪಾರ ಪ್ರಮಾಣದ ಆಸ್ತಿ ,ನಿವೇಶನ
ಪತ್ತೆ.

12:26 PM IST:

ಕಾರವಾರದಲ್ಲಿಯೂ ಎಸಿಬಿ ದಾಳಿ ನಡೆಯುತ್ತಿದೆ. ಬೆಂಗಳೂರಿನ ಟೀಮಿನಿಂದ ರೈಡ್ ಆಗುತ್ತಿದೆ. ನಿನ್ನೆ ತಡರಾತ್ರಿ ನಗರಕ್ಕೆ ಆಗಮಿಸಿತ್ತು ಈ ತಂಡ. ಇಂದು ಬೆಳಗ್ಗೆ ಪಿ ಡಬ್ಲು ಡಿ ಸಹಾಯಕ ಎಂಜನಿಯರ ರಾಜೀವ ಹಾಗೂ ನೋಂದಣಿ ಅಧಿಕ‌ಾರಿ ರಾಜೇಶ ನಿವಾಸದ‌ ಮೇಲೆ ದಾಳಿ ಮಾಡಲಾಗಿದೆ‌.

"

12:22 PM IST:

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ದಾಳಿ ನಡೆಯುತ್ತಿದೆ. ಸಿಪಿಐ ಉದಯ್ ರವಿ ಹಾಗೂ ಆಪ್ತರ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, 35 ಜನರ ಎಸಿಬಿ ಟೀಂನಿಂದ ಸಿಪಿಐ ಉದಯ್ ರವಿ ಅತ್ತೆ ಗಿರಿಜಮ್ಮ ಹಾಗೂ ಆಪ್ತ ಡಾ.ಅಯ್ಯಪ್ಪ ಮನೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಎರಡು ಕಡೆ ತಲಾ 8 ಜನರ ಟೀಂನಿಂದ ಶೋಧನಾ ಕಾರ್ಯ ನಡೆಯುತ್ತಿದೆ. ಉಳಿದ ಟೀಂಗಳಿಂದ ನಡೆಯುತ್ತಿದೆಯಂತೆ ಸಿಕ್ರೀಟ್ ಆಪರೇಷನ್. ಸಿಪಿಐ ಉದಯರವಿ ಅವರ ಗುರುಗಳಾದ ಡಾ ಅಯ್ಯಪ್ಪ ಅವರ ಮನೆಯಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ಹಣ, ಒಡವೆ, ಸದ್ಯ ಇವೆರಡು ಕಡೆ ಅಪಾರ ಪ್ರಮಾಣದ ಚಿನ್ನಾಭರಣ,ನಗದು ಪತ್ತೆ.

10:54 AM IST:

ಧಾರವಾಡದಲ್ಲಿ ಎಸಿಬಿ ದಾಳಿ, ಭ್ರಷ್ಟ RTO ಇನ್ಸ್‌ಪೆಕ್ಟರ್ ಯಲ್ಲಪ್ಪ ಪಡಸಾಲೆ ಮನೆ ಮೇಲೆ ಎಸಿಬಿ ದಾಳಿ ನಡೆಯುತ್ತಿದ್ದು ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಮತ್ತೆ ಏನೇನು ಸಿಗುತ್ತೋ ಕಾದು ನೋಡಬೇಕಿದೆ.

"

10:51 AM IST:

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಅಪ್ಪರ್ ತುಂಗಾ ಯೋಜನಾ  ಕಚೇರಿಯ ಅಧಿಕಾರಿ ಮೇಲೆ ಎಸಿಬಿ ದಾಳಿ ನಡೆಯುತ್ತಿದೆ. ಎಇಇ ಚಂದ್ರಪ್ಪ ಓಲೇಕಾರ ಮನೆ ಇಂದು ಬೆಳಿಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು. ಸಿದ್ದಾರೂಢ ನಗರದ ಮನೆಯ ಮೇಲೆ ದಾಳಿ ಮಾಡಿದ ಎಸಿಬಿ‌ ಅಧಿಕಾರಿಗಳು. ಚಂದ್ರಪ್ಪ ಓಲೆಕಾರ್ ಬ್ಯಾಡಗಿ ತಾಲೂಕು ಆಣೂರು ಗ್ರಾಮದ ಸ್ವಂತ ಮನೆ ಮೇಲೂ ಕೂಡಾ ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಅಲ್ಲಿ ಪಿತ್ರಾರ್ಜಿತ ಆಸ್ತಿ ಮತ್ತು ಕೋಳಿ ಫಾರಂ ಇರೋದು ಪತ್ತೆ ಆಗಿದೆ. ರಾಣೆಬೆನ್ನೂರು ನಗರದಲ್ಲಿರುವ  ಮನೆಯಲ್ಲಿ 8 ಲಕ್ಷ ನಗದು ಪತ್ತೆ.
ಮನೆಯಲ್ಲಿನ ಆಭರಣಗಳ ಪರಿಶೀಲನೆ  ಮುಂದುವರೆಸಿರೋ ಎಸಿಬಿ.

10:49 AM IST:

ಬೆಳಗಾವಿಯಲ್ಲಿ PWD ಸೂಪರಿಂಟೆಂಡೆಂಟ್ ನಿವಾಸ ಮೇಲೆ ಎಸಿಬಿ ದಾಳಿ ಪ್ರಕರಣ. ಎಸಿಬಿ ಎಸ್ ಪಿ ನ್ಯಾಮಗೌಡರ ನೇತೃತ್ವದಲ್ಲಿ ದಾಖಲ ಪರಿಶೀಲನೆ. ಜಕ್ಕೇರಿ ಹೊಂಡದ ನಿವಾಸದಲ್ಲಿ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಹಲವು ಮಹತ್ವದ ದಾಖಲೆ ಪತ್ತೆಯಾಗಿವೆ. ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಸರ್ಕಾರಿ ನಿವಾಸದಲ್ಲೂ ಪರಿಶೀಲನೆ ಮುಂದುರಿದಿದೆ. ಎಸಿಬಿ ಡಿವೈಎಸ್‌ಪಿ ಕರುಣಾಕರಶೆಟ್ಟಿ ನೇತೃತ್ವದಲ್ಲಿ ಸರ್ಕಾರಿ ನಿವಾಸದಲ್ಲಿ ಪರಿಶೀಲನೆ. ಬಿ.ವೈ.ಪವಾರ್ ಸರ್ಕಾರಿ ನಿವಾಸದಲ್ಲಿ 5 ಲಕ್ಷ ನಗದು ಪತ್ತೆ ಮಾಹಿತಿ. ಒಟ್ಟಾರೆ 6 ಕಡೆ ನಿರಂತರ ಪರಿಶೀಲನೆಯಲ್ಲಿ ತೊಡಗಿರುವ ಎಸಿಬಿ & ಟೀಮ್

10:48 AM IST: