ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಮೇಡಂ: ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಅನ್ನದಾತ!

ಜಿಲ್ಲೆಯ ಶಿರಾ ನಗರದ ಮಿನಿ ವಿಧಾನ ಸೌಧ ಆವರಣದಲ್ಲಿ ಇಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ಹೆಣ್ಣು ಕೊಡಿಸಬೇಕು ಅಲ್ಲದೇ ತಮ್ಮ ಮಗಳಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಪ್ರಸಂಗ ನಡೆಯಿತು.
 

a farmer different demand in front of district collector at tumakuru gvd

ತುಮಕೂರು (ಡಿ.16): ಜಿಲ್ಲೆಯ ಶಿರಾ ನಗರದ ಮಿನಿ ವಿಧಾನ ಸೌಧ ಆವರಣದಲ್ಲಿ ಇಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ಹೆಣ್ಣು ಕೊಡಿಸಬೇಕು ಅಲ್ಲದೇ ತಮ್ಮ ಮಗಳಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಪ್ರಸಂಗ ನಡೆಯಿತು. ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಮೇಡಂ ಎಂದು ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರಾಮಣ್ಣ ಅಹವಾಲು ಸಲ್ಲಿಸಿದ್ದರು. ರಾಮಣ್ಣ ಅವರಿಂದ ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ ಕೆಲಕಾಲ ಅವರಿಗೆ ವಿಚಿತ್ರವೆನಿಸಿತು. ಆದರೂ ಅರ್ಜಿಯನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅದನ್ನು ವರ್ಗಾಯಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾವು ನೀಡಿದ ಅರ್ಜಿ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಮಣ್ಣ, ನನ್ನ ಮಕ್ಕಳಿಗೆ ಹೆಣ್ಣು ಕೊಡುವವರು ಇಲ್ಲ ನನ್ನ ಮಗ ಅನಕ್ಷರಸ್ಥನಾಗಿದ್ದಾನೆ. ಹೀಗಾಗಿ ಹೆಣ್ಣುಗಳನ್ನು ಕೊಡುತ್ತಿಲ್ಲ. ಓದಿದವರಿಗೆ ಮಾತ್ರ ಹೆಣ್ಣುಗಳನ್ನು ಕೊಡುತ್ತಿದ್ದಾರೆ ಎಂದು ಹೇಳಿದರು. ನನ್ನ ಮಕ್ಕಳಿಗೆ ಜೀವನ ಹೇಗೆ ಭವಿಷ್ಯದಲ್ಲಿ ಎಂಬುದು ಚಿಂತೆಯಾಗಿದೆ ಅಲ್ಲದೆ ನನ್ನ ಮನೆತನ ಬೆಳೆಯಬೇಕಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಶುಭಕಲ್ಯಾಣವರಿಗೆ ನನ್ನ ಸಮಸ್ಯೆ ಬಗೆಹರಿಸುವಂತೆ ಅರ್ಜಿಯನ್ನು ಕೊಟ್ಟಿದ್ದೇನೆ ಎಂದು ಹೇಳಿದರು. ಜಿಲ್ಲಾಧಿಕಾರಿ ಹಾಗೂ ಅವರು ಅಧಿಕಾರದಲ್ಲಿದ್ದಾರೆ ಕಾನೂನು ಮಾಡಲು ಆಗುತ್ತದೆ ಆದರೆ ನನ್ನ ಮಗನಿಗೆ ಹೆಣ್ಣು ಕೊಡಿಸಲು ಸಾಧ್ಯವಿಲ್ಲವೇ ಎಂದು ಹೇಳಿದರು.

ರಾಜ್‌ಕುಮಾರ್ ಅಪಹರಣ ವೇಳೆ ವೀರಪ್ಪನ್ ಹಿಡಿಯಲು ನಡೆದಿತ್ತು ಸಿದ್ಧತೆ: ಶಂಕರ್ ಬಿದರಿ

ತುಮಕೂರು ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ  ಶುಭಾ ಕಲ್ಯಾಣ್ ಇಂದು ಶಿರಾ ತಾಲ್ಲೂಕು ಅಡಳಿತ  ಜನತಾದರ್ಶನದಲ್ಲಿ ಭಾಗಿಯಾಗಿದರು. ಈ ಸಂದರ್ಭದಲ್ಲಿ ಜನರ ಅಹ್ವಾಲುಗಳನ್ನು ಕರ್ನಾಟಕ ಸರ್ಕಾರದ ವಿಶೇಷ ನವದೆಹಲಿ ಪ್ರತಿನಿಧಿ ಹಾಗೂ ಶಿರಾ ಶಾಸಕರಾದ ಟಿ.ಬಿ.ಜಯಚಂದ್ರ ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ತಹಶಿಲ್ದಾರರ ದತ್ತಾತ್ರೇಯ ಸೇರಿದಂತೆ ತಾಲೂಕಿನ ಅಧಿಕಾರಿ ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದ ಆರಂಭದ ವೇದಿಕೆ ಕಾರ್ಯಕ್ರಮದಲ್ಲಿ ಈ ಬಾಗಧ ವಿಧಾನ ಪರಿಷತ್ ಸದಸ್ಯರ ಭಾವಚಿತ್ರವನ್ನು ಹಾಕಲಾಗಿಲ್ಲ ಶಿಷ್ಟಾಚಾರ ಪಾಲನೆ  ಮಾಡಿರುವುದಿಲ್ಲ ಎಂದು ಚಿದಾನಂದ್ ಆರೋಪ ಮಾಡಿದರು.

Latest Videos
Follow Us:
Download App:
  • android
  • ios