ವಾಯುಸೇನೆಯ ನಿಷೇಧಿತ ತಾಂತ್ರಿಕ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ವ್ಯಕ್ತಿಯನ್ನು ಎಚ್‌ಎಎಲ… ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರ (ಆ.21) : ವಾಯುಸೇನೆಯ ನಿಷೇಧಿತ ತಾಂತ್ರಿಕ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ವ್ಯಕ್ತಿಯನ್ನು ಎಚ್‌ಎಎಲ… ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ರಾಜ್‌ಕುಮಾರ್ (50) ಬಂಧಿತ. ಆ.18ರಂದು ಸಂಜೆ ವಾಯುಸೇನಾ ಪ್ರದೇಶದ ತಡೆಗೋಡೆ ಏರಿ ಒಳ ಪ್ರವೇಶಿಸಿದ್ದಾನೆ. ಅಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಆರೋಪಿಯನ್ನು ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದು ಎಚ್‌ಎಎಲ್ ಪೊಲೀಸ್ ಠಾಣೆಗೆ ಕರೆತಂದು ಒಪ್ಪಿಸಿದ್ದಾರೆ. ಈ ವೇಳೆ ರಕ್ಷಣಾ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ರಾಜ್‌ಕುಮಾರ್ ಕೂಲಿ ಕಾರ್ಮಿಕನಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದಿಂದ ನಗರಕ್ಕೆ ಬಂದಿದ್ದ. ವಾಯುಸೇನಾ ಪ್ರದೇಶದ ತಡೆಗೋಡೆ ಹಿಂಭಾಗದ ಕಾರ್ಮಿಕರ ಶೆಡ್‌ನಲ್ಲಿ ನೆಲೆಸಿದ್ದ. ಆ.18ರಂದು ಮದ್ಯ ಸೇವಿಸಿದ್ದ ಆರೋಪಿಯು ಮದ್ಯದ ನಶೆಯಲ್ಲಿ ತಡೆಗೋಡೆ ಏರಿ ವಾಯುಸೇನೆಯ ನಿಷೇಧಿತ ಪ್ರದೇಶಕ್ಕೆ ಬಂದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Fake news ಸಿಕ್ಕಿಂ ಮೂಲದ ವ್ಯಕ್ತಿಗೆ ಚೈನೀಸ್ ಎಂದು ಹಲ್ಲೆ ಆರೋಪ ಸುಳ್ಳು ಸುದ್ದಿ
ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿದ್ದವರ ಮನೆಯಲ್ಲಿ ಚಿನ್ನ ಕಳ್ಳತನ:
ಬೆಂಗಳೂರು (ಆ.21) : ವ್ಯಕ್ತಿಯೊಬ್ಬರು ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿದ್ದ ಸಮಯದಲ್ಲಿ ಮನೆಯ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಇಎಂಎಲ್ ಲೇಔಟ್ 4ನೇ ಹಂತದ ನಿವಾಸಿ ಪ್ರಶಾಂತ್ ಶೇಟ್ ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು ಸುಮಾರು .4 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.
ಗಂಡ ವಿಪರೀತ ಕುಡಿದು ಹಿಂಸೆ ಕೊಟ್ರೆ ಹೆಂಡ್ತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್
ಪ್ರಶಾಂತ್ ಶೇಟ್ ಕುಟುಂಬ ಸಮೇತ ಆ.11ರಂದು ಧರ್ಮಸ್ಥಳಕ್ಕೆ ತೆರಳಿದ್ದರು. ಆ.13ರಂದು ಮನೆಗೆ ವಾಪಾಸಾದಾಗ ದುಷ್ಕರ್ಮಿಗಳು ಮನೆಯ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿ, ಬೆಡ್ ರೂಮ್‌ನ ಡ್ರಾಯರ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
