Asianet Suvarna News Asianet Suvarna News

ಒಗ್ಗರಣೆ ಕೊಡಲು ತಡವಾಗಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಬಿಸಿ ಎಣ್ಣೆ ಎರಚಿ ವಿಕೃತಿ ಮೆರೆದ ಗ್ರಾಹಕ!

ಒಗ್ಗರಣೆ ಕೊಡೋದಕ್ಕೆ ತಡವಾಯ್ತೆಂದು ಹೋಟೆಲ್ ಮಾಲೀಕನಿಗೆ ಬಿಸಿ ಎಣ್ಣೆ ಎರಚಿ ವಿಕೃತಿ ಮೆರೆದಿರುವು ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ನೆಡದಿದೆ. ಭೀಮಾ ನಾಯಕ್ ಎಣ್ಣೆ ಎರಚಿ ವಿಕೃತಿ ಮೆರೆದ ವ್ಯಕ್ತಿ. ರಂಗಯ್ಯ ಶೆಟ್ಟಿ ಗಾಯಗೊಂಡ ಹೋಟೆಲ್ ಮಾಲೀಕ.

A customer who threw hot oil on the hotel owner in manvi raichur rav
Author
First Published Nov 12, 2023, 1:28 PM IST

ರಾಯಚೂರು (ನ.12): ಒಗ್ಗರಣೆ ಕೊಡೋದಕ್ಕೆ ತಡವಾಯ್ತೆಂದು ಹೋಟೆಲ್ ಮಾಲೀಕನಿಗೆ ಬಿಸಿ ಎಣ್ಣೆ ಎರಚಿ ವಿಕೃತಿ ಮೆರೆದಿರುವು ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ನೆಡದಿದೆ.

ಭೀಮಾ ನಾಯಕ್ ಎಣ್ಣೆ ಎರಚಿ ವಿಕೃತಿ ಮೆರೆದ ವ್ಯಕ್ತಿ. ರಂಗಯ್ಯ ಶೆಟ್ಟಿ ಗಾಯಗೊಂಡ ಹೋಟೆಲ್ ಮಾಲೀಕ.

ಇಂದು ಬೆಳ್ಳಂಬೆಳಗ್ಗೆ ತಿಂಡಿ ತಿನ್ನಲು ಹೋಟೆಲ್‌ಗೆ ಹೋಗಿರುವ ಭೀಮಾ ನಾಯಕ್. ಇಡ್ಲಿ ಕೊಡುವಂತೆ ಕೇಳಿದ್ದಾನೆ. ಆದರೆ ಆ ವೇಳೆ ಇಡ್ಲಿ ಇಲ್ಲವೆಂದು ವಾಪಸ್ ಕಳಿಸಿರುವ ರಂಗಯ್ಯ ಶೆಟ್ಟಿ. ಮತ್ತೆ ಪುನಃ ಬಂದು ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದ ಭೀಮಾ ನಾಯಕ್. ಈ ವೇಳೆ ಒಗ್ಗರಣೆ ಕೊಡಲು ತಡವಾಗಿದ್ದಕ್ಕೆ ಕೋಪಗೊಂಡು ಉಪ್ಪಿಟ್ಟು ಮಾಡಲು ಮುಂದೆ ಕಾಯಿಸಲು ಇಟ್ಟಿದ್ದ ಬಿಸಿ ಎಣ್ಣೆ ರಂಗಯ್ಯ ಶೆಟ್ಟಿ ಮುಖಕ್ಕೆ ಎರಚಿ ವಿಕೃತಿ ಮೆರೆದಿರುವ ಭೀಮಾ ನಾಯಕ್ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. 

ಬೆಂಗಳೂರು: ವಿಲಾಸಿ ಜೀವನಕ್ಕೆ ಮನೆಗಳವು ಮಾಡುತ್ತಿದ್ದ ಕಳ್ಳ ಜೈಲು ಪಾಲು

ಮುಂಜಾನೆ ಚಳಿಯಲ್ಲಿ ಬಿಸಿ ಎಣ್ಣೆ ಮುಖಕ್ಕೆ ಎರಚಿದ್ದರಿಂದ ನೋವಿನಿಂದ ಒದ್ದಾಡಿರುವ ರಂಗಯ್ಯ ಶೆಟ್ಟಿ. ಮುಖದ ಚರ್ಮ ಸುಟ್ಟು ಗಾಯಗೊಂಡಿದ್ದು, ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Follow Us:
Download App:
  • android
  • ios