Asianet Suvarna News Asianet Suvarna News

ಕರ್ನಾಟಕಕ್ಕೆ 941 ಕೋಟಿ ನೆರೆ ಪರಿಹಾರ ನಿಧಿ ಬಿಡುಗಡೆ

941 ಕೋಟಿ ಹಣ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧನ್ಯವಾದ ಹೇಳಿದ್ದಾರೆ. ಇದು ಪ್ರಧಾನಿಯವರಿಗೆ ಇರುವ ಕರ್ನಾಟಕದ ಬಗೆಗಿನ ಕಾಳಜಿಯನ್ನು ತೋರುತ್ತದೆ ಎಂದು ಬಣ್ಣಿಸಿದ್ದಾರೆ.
 

941 Crore Fund Released for Natural Disaster Management in Karnataka grg
Author
First Published Mar 14, 2023, 10:20 AM IST

ನವದೆಹಲಿ(ಮಾ.14):  ಪ್ರಾಕೃತಿಕ ವಿಪತ್ತು ನಿರ್ವಹಣೆಗಾಗಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1,816 ಕೋಟಿ ರು. ಪರಿಹಾರ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಪರಿಹಾರ ಬಿಡುಗಡೆಗೆ ಅನುಮತಿ ನೀಡಿದೆ.

ಕರ್ನಾಟಕ, ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ 2022ರಲ್ಲಿ ಸಂಭವಿಸಿದ ಪ್ರವಾಹ, ಭೂ ಕುಸಿತ ಮತ್ತು ಮೇಘಸ್ಪೋಟಗಳಿಗೆ ಸಂಬಂಧಿಸಿದಂತೆ ಈ ಪರಿಹಾರ ನೀಡಲಾಗುತ್ತಿದೆ. ಪ್ರಾಕೃತಿಕ ವಿಪತ್ತಿಗೆ ಸಿಲುಕಿದ ರಾಜ್ಯಗಳಿಗೆ ಪರಿಹಾರ ಒದಗಿಸುವ ಮೂಲಕ ಅವುಗಳ ಸಹಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಂತಿರುವುದನ್ನು ಇದು ತೋರಿಸುತ್ತದೆ ಎಂದು ಸಮಿತಿ ಹೇಳಿದೆ. ಕರ್ನಾಟಕಕ್ಕೆ 941.04 ಕೋಟಿ ರು., ಅಸ್ಸಾಂಗೆ 520.46 ಕೋಟಿ ರು., ಹಿಮಾಚಲ ಪ್ರದೇಶಕ್ಕೆ 239.31 ಕೋಟಿ ರು., ಮೇಘಾಲಯಕ್ಕೆ 47.32 ಕೋಟಿ ರು. ಮತ್ತು ನಾಗಾಲ್ಯಾಂಡ್‌ಗೆ 239.31 ಕೋಟಿ ರು. ಪರಿಹಾರ ಘೋಷಿಸಲಾಗಿದೆ. 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 25 ರಾಜ್ಯಗಳ ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಒಟ್ಟಾರೆ 15,770.4 ಕೋಟಿ ರು. ಹಣ ವರ್ಗಾಯಿಸಿದೆ.

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌..! ರೈಲ್ವೆ ಟಿಕೆಟ್‌ ರಿಯಾಯ್ತಿ ಶೀಘ್ರದಲ್ಲೇ ಪುನಾರಂಭ..?

ಬೊಮ್ಮಾಯಿ ಧನ್ಯವಾದ: 

941 ಕೋಟಿ ಹಣ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧನ್ಯವಾದ ಹೇಳಿದ್ದಾರೆ. ಇದು ಪ್ರಧಾನಿಯವರಿಗೆ ಇರುವ ಕರ್ನಾಟಕದ ಬಗೆಗಿನ ಕಾಳಜಿಯನ್ನು ತೋರುತ್ತದೆ ಎಂದು ಬಣ್ಣಿಸಿದ್ದಾರೆ.

Follow Us:
Download App:
  • android
  • ios