ಕರ್ನಾಟಕದಲ್ಲಿ ಶನಿವಾರವೂ ಕೊರೋನಾ ಸೋಂಕಿತರಿಗಿಂತ ಗುಣಮುಖರಾವರ ಸಂಖ್ಯೆಯೇ ಜಾಸ್ತಿ
ಕರ್ನಾಟಕದಲ್ಲಿ ಶನಿವಾರವೂ ಕೊರೋನಾ ಸೋಂಕಿತರಿಗಿಂತ ಗುಣಮುಖರಾವರ ಸಂಖ್ಯೆಯೇ ಜಾಸ್ತಿಯಾಗಿರುವುದು ನೆಮ್ಮದಿಯ ಸಂಗತಿ. ಹಾಗಾದ್ರೆ ಕಳೆದ 24 ಗಂಟೆಗಳಲ್ಲಿ ಎಷ್ಟು ಹೊಸ ಕೇಸ್? ಎಷ್ಟು ಗುಣಮುಖ? ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಸೆ.12): ರಾಜ್ಯದಲ್ಲಿ ಇಂದು (ಶನಿವಾರ) 9,140 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹಾಗೇ 9,557 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 94 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 4,49,551ಕ್ಕೆ ಏರಿಕೆಯಾಗಿದ್ದು, ಗುಣಮುಖರಾದವರ ಸಂಖ್ಯೆ 3,44,556. ಇನ್ನು ಮೃತಪಟ್ಟವರ ಸಂಖ್ಯೆ 7161ಕ್ಕೇರಿದೆ.
ಸದ್ಯ 97,815 ಸಕ್ರಿಯ ಪ್ರಕರಣಗಳು ಇದ್ದು, ಈ ಪೈಕಿ 795 ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಕೊರೋನಾ ಕೇಸ್
ಬೆಂಗಳೂರು ನಗರ (3552) , ಮೈಸೂರು (636), ಬಳ್ಳಾರಿ (366), ದಾವಣಗೆರೆ (267), ಹಾಸನ (324), ಶಿವಮೊಗ್ಗ (155), ಬೆಳಗಾವಿ (201), ದಕ್ಷಿಣ ಕನ್ನಡ (401), ರಾಯಚೂರು (131), ಧಾರವಾಡ (239), ಕಲಬುರಗಿ (222), ಚಿಕ್ಕಮಗಳೂರು (159), ಉಡುಪಿ (169), ಮಂಡ್ಯ (193), ಚಿತ್ರದುರ್ಗ (227), ಉತ್ತರ ಕನ್ನಡ (130), ಕೊಪ್ಪಳ (183), ತುಮಕೂರು (304), ವಿಜಯಪುರ (58), ಬಾಗಲಕೋಟೆ (175), ಹಾವೇರಿ (213), ಗದಗ (49), ಬೆಂಗಳೂರು ಗ್ರಾಮಾಂತರ (211), ಚಿಕ್ಕಬಳ್ಳಾಪುರ (101), ಕೋಲಾರ (53), ರಾಮನಗರ (81), ಯಾದಗಿರಿ (151), ಬೀದರ್ (101), ಚಾಮರಾಜನಗರ (60) ಮತ್ತು ಕೊಡಗು (27)