ರಾಜ್ಯದಲ್ಲಿ 9 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಬರೋಬ್ಬರಿ 9 ಲಕ್ಷ ಕೊರೋನಾ ಪ್ರಕರಣಗಳು ವರದಿಯಾಗಿವೆ. 9 ತಿಂಗಳಲ್ಲಿ 9 ಲಕ್ಷ ಕೊರೋನಾ ಕೇಸ್ ಆಗಿವೆ.
ಬೆಂಗಳೂರು (ಡಿ.13): ರಾಜ್ಯದಲ್ಲಿ ಶನಿವಾರ ಹೊಸದಾಗಿ 1203 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ತನ್ಮೂಲಕ ರಾಜ್ಯದಕ್ಕೆ ಮಹಾಮಾರಿ ಕಾಲಿಟ್ಟಒಂಬತ್ತು ತಿಂಗಳ ಬಳಿಕ ಒಟ್ಟು ಸೋಂಕಿತರ ಸಂಖ್ಯೆ 9 ಲಕ್ಷ ದಾಟಿದೆ.
ಶನಿವಾರ ಒಂದೇ ದಿನ ಸೋಂಕಿನಿಂದ ಚೇತರಿಸಿಕೊಂಡ 1531 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, 11 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ವರೆಗಿನ ಒಟ್ಟು ಸೋಂಕಿತರ ಸಂಖ್ಯೆ 9,00,214 ತಲುಪಿದರೆ, ಇದರಲ್ಲಿ ಬಿಡುಗಡೆಯಾದವರ ಸಂಖ್ಯೆ 8,70,002 ಆಗಿದೆ. ಇನ್ನು ಒಟ್ಟು 11,939 ಮಂದಿ (19 ಸೋಂಕಿತರ ಅನ್ಯ ಕಾರಣದ ಸಾವು ಪ್ರಕರಣ ಬಿಟ್ಟು) ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದ 18,254 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರೋಗ್ಯ ಸ್ಥಿತಿ ಗಂಭೀರವಾಗಿರುವ 224 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜನದಟ್ಟಣೆ ಸ್ಥಳದಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ..! ...
ಶನಿವಾರ ಕೂಡ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಕೋವಿಡ್ 19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ 88,503 ಆರ್‌ಟಿಪಿಸಿಆರ್, 13,726 ಆ್ಯಂಟಿಜನ್ ಪರೀಕ್ಷೆಗಳಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ನಡೆಸಲಾದ ಕೊರೋನಾ ಪರೀಕ್ಷೆಗಳ ಸಂಖ್ಯೆ 1.22 ಕೋಟಿ ದಾಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲಾವಾರು ಮಾಹಿತಿ: ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ 606 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಮೈಸೂರು 59, ದಕ್ಷಿಣ ಕನ್ನಡ 53, ಚಿತ್ರದುರ್ಗ 51, ಚಿಕ್ಕಬಳ್ಳಾಪುರ 39, ತುಮಕೂರು 30, ಬೆಳಗಾವಿ, ಹಾಸನ ತಲಾ 26, ಮಂಡ್ಯ 25, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ತಲಾ 23, ಉಡುಪಿ 21, ಉತ್ತರ ಕನ್ನಡ, ಚಾಮರಾಜ ನಗರ ತಲಾ 20, ಕೊಡಗು 19, ಶಿವಮೊಗ್ಗ, ವಿಜಯಪುರ ತಲಾ 18, ಬೀದರ್ 16, ದಾವಣಗೆರೆ, ಕಲಬುರಗಿ ತಲಾ 13, ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿ ತಲಾ 12, ಧಾರವಾಡ, ಕೋಲಾರ ತಲಾ 10, ಬಾಗಲಕೋಟೆ 8, ಹಾವೇರಿ 7, ಗದಗ 6, ರಾಯಚೂರು 5, ರಾಮನಗರದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.