Asianet Suvarna News Asianet Suvarna News

9 ಐಎಎಸ್‌, ಐಪಿಎಸ್‌, ಐಎಫ್‌ಎಸ್‌ನ ಅಧಿಕಾರಿಗಳ ವರ್ಗ

  • ಇಬ್ಬರು ಐಎಎಸ್‌, ಮೂವರು ಐಎಫ್‌ಎಸ್‌ ಮತ್ತು ನಾಲ್ವರು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ
  • ರಾಜ್ಯ ಸರ್ಕಾರ ಬುಧವಾರ ಆದೇಶ ಮಾಡಿದೆ
9 IAS IPS IFS Officers Transferred in Karnataka snr
Author
Bengaluru, First Published Sep 15, 2021, 9:05 AM IST

ಬೆಂಗಳೂರು (ಸೆ.15): ಅಂಜುಂ ಪರ್ವೇಜ್‌, ರಾಜೇಂದರ್‌ ಕುಮಾರ್‌ ಕಟಾರಿಯಾ ಸೇರಿ ಇಬ್ಬರು ಐಎಎಸ್‌, ಮೂವರು ಐಎಫ್‌ಎಸ್‌ ಮತ್ತು ನಾಲ್ವರು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಮಾಡಿದೆ. 

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಂಜುಂ ಪರ್ವೇಜ್‌ ಅವರನ್ನು ಬೆಂಗಳೂರು ಮೆಟ್ರೋ ಕಾರ್ಪೊರೇಷನ್‌ ಲಿ.(ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರನ್ನು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. 

ಶಿಷ್ಯೆಗಾಗಿ ಸರ್ವೆಗೆ ಮುಂದಾದ IAS ಅಧಿಕಾರಿ : ಸಾ.ರಾ ರಾಜಕೀಯ ನಿವೃತ್ತಿ ಸವಾಲ್

ಐಪಿಎಸ್‌ ಅಧಿಕಾರಿಗಳ ಪೈಕಿ ರಾಜ್ಯ ಅಪರಾಧ ದಾಖಲಾತಿ ಕೇಂದ್ರದ ಎಸ್‌ಪಿ ಆಗಿದ್ದ ವರ್ತಿಕ ಕತಿಯಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲಾ ಎಸ್‌ಪಿಯಾಗಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ ಆಗಿದ್ದ ಜಿ.ಸಂಗೀತ ಅವರನ್ನು ಚಾಮರಾಜನಗರ ಎಸ್‌ಪಿ ಹುದ್ದೆಗೆ, ಆಂತರಿಕ ಭದ್ರತಾ ವಿಭಾಗದ(ಪ್ರಧಾನ ಕಚೇರಿ) ಎಸ್‌ಪಿಯಾಗಿದ್ದ ಎಚ್‌.ಡಿ. ಆನಂದ ಕುಮಾರ್‌ ಅವರನ್ನು ವಿರಾಜಪೇಟೆ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ ಐಎಫ್‌ಎಸ್‌ ಅಧಿಕಾರಿಗಳಾದ ಮಾಲತಿ ಪ್ರಿಯಾ ಅವರನ್ನು ಬೆಂಗಳೂರು ಗ್ರಾಮಾಂತರ ಉಪ ಅರಣ್ಯ ಸಂರಕ್ಷಕರಾಗಿ, ಡಾ.ಪಿ.ಪರಮೇಶ್‌ ಕುಮಾರ್‌ ಅವರನ್ನು ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಕ ಹುದ್ದೆಗೆ, ಡಾ.ಕರಿಕಲನ್‌ ಅವರನ್ನು ಕಾಡುಗೋಡಿಯ ಎಫ್‌ಟಿಎಟಿಐ ಉಪ ಅರಣ್ಯ ಸಂರಕ್ಷಕ ಹುದ್ದೆಗೆ, ಸೂರ್ಯ ಸೆನ್‌ ಅವರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ಪ್ರಧಾನ ಕಚೇರಿ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

Follow Us:
Download App:
  • android
  • ios