ಬೆಂಗಳೂರು, (ಡಿ.26): ರಾಜ್ಯದಲ್ಲಿ ಇಂದು (ಶನಿವಾರ) 857 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 9,15,345ಕ್ಕೆ ಏರಿಕೆಯಾಗಿದೆ.

 ಕಳೆದ 24 ಗಂಟೆಯಲ್ಲಿ 7 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,050ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಶನಿವಾರ 964 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ 8,98,881 ಜನರು ಗುಣಮುಖರಾದಂತಾಗಿದೆ. 

ಹೊಸ ವರ್ಷಾಚರಣೆ: ಬೆಂಗ್ಳೂರಿಗೆ ಪ್ರತ್ಯೇಕ ರೂಲ್ಸ್‌..!

ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 13,394ಕ್ಕೆ ಇಳಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ 471 ಸೋಂಕು ಪ್ರಕರಣಗಳು ವರದಿಯಾಗಿದ್ದು, 4 ಮಂದಿ ಬಲಿಯಾಗಿದ್ದಾರೆ.

 ಒಟ್ಟಾರೆ ಸಾವಿನ ಸಂಖ್ಯೆ 4291ಕ್ಕೆ ಏರಿಕೆಯಾಗಿದ್ದು, 8,795 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.