Asianet Suvarna News Asianet Suvarna News

ಕರ್ನಾಟಕದಲ್ಲಿ 83% ರಾಸುಗಳಿಗೆ ಕಾಲು ಬಾಯಿ ಜ್ವರ ಲಸಿಕೆ

ಕಳೆದ ಸಾಲಿನಲ್ಲಿ ಚರ್ಮ ಗಂಟು ರೋಗದಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ರಾಸುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಶುಪಾಲಕರು ರಾಸುಗಳಿಗೆ ಕಾಲು ಬಾಯಿಜ್ವರದ ಲಸಿಕೆ ಹಾಕಿಸಲು ಉತ್ಸಾಹ ತೋರಿದ್ದು, ಶೇ.83ಕ್ಕೂ ಅಧಿಕ ಸಾಧನೆಯಾಗಿದೆ.

83 Percent of Cows Vaccinated in Karnataka grg
Author
First Published May 23, 2024, 9:40 AM IST

ಬೆಂಗಳೂರು(ಮೇ.23):  ರಾಸುಗಳಿಗೆ ಹಾಕುವ ಕಾಲು ಬಾಯಿ ಜ್ವರ ಲಸಿಕೀಕರಣಕ್ಕೆ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದಲ್ಲಿ 1.14 ಕೋಟಿಗೂ ಅಧಿಕ ರಾಸುಗಳಿದ್ದು 95.62 ಲಕ್ಷಕ್ಕೂ ಅಧಿಕ ರಾಸುಗಳಿಗೆ ಲಸಿಕೆ ಹಾಕಲಾಗಿದೆ.

ಕಳೆದ ಸಾಲಿನಲ್ಲಿ ಚರ್ಮ ಗಂಟು ರೋಗದಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ರಾಸುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಶುಪಾಲಕರು ರಾಸುಗಳಿಗೆ ಕಾಲು ಬಾಯಿಜ್ವರದ ಲಸಿಕೆ ಹಾಕಿಸಲು ಉತ್ಸಾಹ ತೋರಿದ್ದು, ಶೇ.83ಕ್ಕೂ ಅಧಿಕ ಸಾಧನೆಯಾಗಿದೆ.

ಮರಿಗಳ ಫೋಟೋ ತೆಗೆಯಲು ಪೊದೆಯಲ್ಲಿ ಇಣುಕಿದ ವ್ಯಕ್ತಿಯ ಕೊಂದ ಅಮೆರಿಕನ್ ಕಡವೆ

ಲಸಿಕೆ ಹಾಕಿಸಿದರೆ ಪಶುಗಳಲ್ಲಿ ಹಾಲು ಕಡಿಮೆಯಾಗುತ್ತದೆ, ಗರ್ಭ ಕಟ್ಟುವಲ್ಲಿ ವಿಫಲ, ಉಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಮೂಢನಂಬಿಕೆಯಿಂದಾಗಿ ರೈತರು ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬರುತ್ತಿರಲಿಲ್ಲ. ಆದರೆ ಇದೀಗ ಉತ್ತಮ ಪ್ರತಿಕ್ರಿಯೆ ಬಂದಿದೆ. 4 ತಿಂಗಳು ಮೇಲ್ಪಟ್ಟ ರಾಸುಗಳಿಗೆ ಏಪ್ರಿಲ್‌ ತಿಂಗಳಿನಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಲಾಗಿತ್ತು. ಅವಧಿ ವಿಸ್ತರಣೆಗೆ ಒತ್ತಾಯ ಕೇಳಿಬಂದಿದ್ದರಿಂದ ಇದೀಗ ಈ ತಿಂಗಳಾಂತ್ಯದವರೆಗೂ ಲಸಿಕೆ ಹಾಕಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದಲ್ಲಿ ಮಾತ್ರ 5 ನೇ ಸುತ್ತು:

‘ಕೆಲ ರಾಜ್ಯಗಳಲ್ಲಿ 2, 3 ಮತ್ತು 4 ನೇ ಸುತ್ತಿನಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ 5 ನೇ ಸುತ್ತಿನ ಲಸಿಕೆ ಹಾಕುತ್ತಿರುವುದು ಹೆಗ್ಗಳಿಕೆಯಾಗಿದೆ. ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಿದ್ದರಿಂದ ಲಸಿಕೀಕರಣಕ್ಕೆ ಪಶುಪಾಲಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಪ್ರತಿಕ್ರಿಯಿಸಿದ್ದಾರೆ.

Latest Videos
Follow Us:
Download App:
  • android
  • ios