ಬೆಂಗಳೂರು, (ಸೆ.20): ರಾಜ್ಯದಲ್ಲಿ ಇಂದು (ಭಾನುವಾರ) 8191 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 101 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.  

ಇನ್ನು ಕಳೆದ 24 ಗಂಟೆಗಳಲ್ಲಿ 8611 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನಿಡಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,19,537ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ 4,13,452 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೋನಾ ಹೋರಾಟ: ಮೊಝಂಬಿಕ್‌ಗೆ ಭಾರತದಿಂದ 13 ಬಗೆಯ ಔಷಧ ನೆರವು

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ 98,043 ಸಕ್ರೀಯ ಕೇಸ್‌ಗಳಿದ್ದು, ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8023ಕ್ಕೇರಿದೆ.

ಜಿಲ್ಲಾವಾರು ಕೊರೋನಾ ಕೇಸ್
ಬಾಲಕೋಟೆ - 90, ಬಳ್ಳಾರಿ - 298, ಬೆಳಗಾವಿ - 151, ಬೆಂಗಳೂರು ಗ್ರಾಮಾಂತರ - 179, ಬೆಂಗಳೂರು ನಗರ - 3322, ಬೀದರ್ - 77, ಚಾಮರಾಜನಗರ - 69, ಚಿಕ್ಕಬಳ್ಳಾಪುರ - 81, ಚಿಕ್ಕಮಗಳೂರು - 129, ಚಿತ್ರದುರ್ಗ - 0, ದಕ್ಷಿಣ ಕನ್ನಡ - 380, ದಾವಣಗೆರೆ - 130, ಧಾರವಾಡ - 305, ಗದಗ - 75, ಹಾಸನ - 277, ಹಾವೇರಿ - 44, ಕಲಬುರ್ಗಿ - 136, ಕೊಡಗು - 32, ಕೋಲಾರ - 105, ಕೊಪ್ಪಳ - 337, ಮಂಡ್ಯ - 165, ಮೈಸೂರು - 481, ರಾಯಚೂರು - 132, ರಾಮನಗರ - 57, ಶಿವಮೊಗ್ಗ - 295, ತುಮಕೂರು - 244, ಉಡುಪಿ - 295, ಉತ್ತರ ಕನ್ನಡ - 108, ವಿಜಯಪುರ - 81 ಮತ್ತು ಯಾದಗಿರಿ - 116