ಮಂಗಳವಾರ ರಾಜ್ಯದಲ್ಲಿ ಕೊರೋನಾ ನರ್ತನ: 3 ಲಕ್ಷ ಗಡಿಯತ್ತ ಸೋಂಕಿತ ಸಂಖ್ಯೆ

ಕಳೆದ ಎರಡು ದಿನಗಳ ಕಾಲ 6 ಸಾವಿರ ಒಳಗೆ ಪತ್ತೆಯಾಗಿದ್ದ ಕೊರೋನಾ ಕೇಸ್, ಇಂದು (ಮಂಗಳವಾರ) ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.
.

8161 fresh COVID19 cases And 148 Deaths in Karnataka On August 25

ಬೆಂಗಳೂರು, (ಆ.25): ರಾಜ್ಯದಲ್ಲಿ ಇಂದು (ಮಂಗಳವಾರ) 8161 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,91,826 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 148 ಮಂದಿ ಮೃತಪಟ್ಟಿದ್ದು ಇದುವರೆಗೆ 4958 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

BJP ಸೇರಿದ ಅಣ್ಣಾಮಲೈಗೆ ಹೊಸ ಜವಾಬ್ದಾರಿ, IPL ವೇಳಾಪಟ್ಟಿಗೆ ಅಂತಿಮ ತಯಾರಿ: ಆ.25ರ ಟಾಪ್ 10 ಸುದ್ದಿ!

ಇನ್ನು ಕಳೆದ 24 ಗಂಟೆಗಳಲ್ಲಿ 6814 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 2,04,439 ಜನ ಡಿಸ್ಚಾರ್ಜ್ ಆದಂತಾಗಿದೆ.

ರಾಜ್ಯದಲ್ಲಿ ಇದೀಗ ಒಟ್ಟು 82,410 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿದ್ದು, ಈ ಪೈಕಿ 751 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಬಾಗಲಕೋಟೆ (83), ಬಳ್ಳಾರಿ (551), ಬೆಳಗಾವಿ (298), ಬೆಂಗಳೂರು ಗ್ರಾಮಾಂತರ (63), ಬೆಂಗಳೂರು ನಗರ (2294), ಬೀದರ್ (61), ಚಾಮರಾಜ ನಗರ (17 ), ಚಿಕ್ಕಬಳ್ಳಾಪುರ (93 ), ಚಿಕ್ಕಮಗಳೂರು (88 ), ಚಿತ್ರದುರ್ಗ ( 114), ದಕ್ಷಿಣ ಕನ್ನಡ (247), ದಾವಣಗೆರೆ (318), ಧಾರವಾಡ (204), ಗದಗ (175) , ಹಾಸನ (205 6 ) , ಹಾವೇರಿ (78 ), ಕಲಬುರುಗಿ (227 ), ಕೊಡಗು (8 ), ಕೋಲಾರ ( 47), ಕೊಪ್ಪಳ (238), ಮಂಡ್ಯ (153 ), ಮೈಸೂರು (1331) , ರಾಯಚೂರು (88), ರಾಮನಗರ (56), ಶಿವಮೊಗ್ಗ (276 ), ತುಮಕೂರು (223 ), ಉಡುಪಿ (2171), ಉತ್ತರ ಕನ್ನಡ (141 ), ವಿಜಯಪುರ (135 ), ಯಾದಗಿರಿ (132 ) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಕೊರೋನಾ ಕೇಸ್ ಪತ್ತೆಯಾಗಿವೆ.

Latest Videos
Follow Us:
Download App:
  • android
  • ios