Asianet Suvarna News Asianet Suvarna News

ಕರ್ನಾಟಕದಲ್ಲಿ ಕೋವಿಡ್‌ ಮತ್ತಷ್ಟು ಹೆಚ್ಚಳ: 750 ಮಂದಿಗೆ ಸೋಂಕು

*  ಮೂರು ದಿನಗಳ ಬಳಿಕ ಶೂನ್ಯಕ್ಕೆ ತಲುಪಿದ ಸೋಂಕಿತರ ಸಾವು
*  ಶನಿವಾರ 750 ಜನರಲ್ಲಿ ಸೋಂಕು, 425 ಮಂದಿ ಗುಣಮುಖ
*  ಸದ್ಯ ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿರುವ 4825 ಸೋಂಕಿತರು 
 

750 New Coronavirus Cases on June 18th in Karnataka grg
Author
Bengaluru, First Published Jun 19, 2022, 5:15 AM IST

ಬೆಂಗಳೂರು(ಜೂ.19): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಮತ್ತೆ ಹೆಚ್ಚಳವಾಗಿದ್ದು, ಮೂರು ದಿನಗಳ ಬಳಿಕ ಸೋಂಕಿತರ ಸಾವು ಶೂನ್ಯಕ್ಕೆ ತಲುಪಿದೆ. ಶನಿವಾರ 750 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 425 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಸದ್ಯ 4825 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 

24,469 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3ರಷ್ಟು ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳನ್ನು 200 ಹೆಚ್ಚಾಗಿದ್ದು, ಹೀಗಾಗಿಯೇ ಹೊಸ ಪ್ರಕರಣಗಳು ಕೂಡಾ 116 ಏರಿಕೆಯಾಗಿವೆ. (ಶುಕ್ರವಾರ 634, ಸಾವು ಎರಡು). ಹೊಸ ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲಿಯೇ 716 ಪತ್ತೆಯಾಗಿವೆ. ಉಳಿದಂತೆ ಮೈಸೂರು 8, ದಕ್ಷಿಣ ಕನ್ನಡ 7, ಉಡುಪಿ 6, ಶಿವಮೊಗ್ಗ 5, ಧಾರವಾಡ 4, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ ಸೋಂಕು ತಗುಲಿದೆ. 22 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

COVID CRISIS: ಬೆಂಗಳೂರಿನಲ್ಲಿ 12 ದಿನದಲ್ಲಿ ಇಬ್ಬರು ಕೊರೋನಾ ಸೋಂಕಿನಿಂದ ಸಾವು

ವಾರದ ಆರಂಭದಲ್ಲಿ 400 ಇದ್ದ ಹೊಸ ಪ್ರಕರಣಗಳು ಸತತ ಐದು ದಿನಗಳ ಏರಿಕೆ ಬಳಿಕ 850 ಗಡಿದಾಟಿದ್ದವು. ಶುಕ್ರವಾರವಷ್ಟೇ 600ಕ್ಕೆ ತಗ್ಗಿದ್ದವು. ಕಳೆದ ಬುಧವಾರದಿಂದ ಸತತ ಮೂರು ದಿನ ಸೋಂಕಿತರ ಸಾವಾಗಿತ್ತು. ಸದ್ಯ ಮತ್ತೆ ಶೂನ್ಯಕ್ಕೆ ತಗ್ಗಿದೆ. ಸಕ್ರಿಯ ಸೋಂಕಿತರ ಪೈಕಿ 35 ಮಂದಿ ಮಾತ್ರ ಆಸ್ಪತೆಯಲ್ಲಿದ್ದು, ಉಳಿದಂತೆ 4790 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,070 ಮಂದಿ ಸಾವಿಗೀಡಾಗಿದ್ದಾರೆ.
 

Follow Us:
Download App:
  • android
  • ios