ಬೆಂಗಳೂರು(ಜು.20): ರಾಜಧಾನಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದ ಅಂದರೆ ಕಳೆದ ನಾಲ್ಕೂವರೆ ತಿಂಗಳಿಂದ ಸೋಂಕು ಹಾಗೂ ಇತರೆ ಕಾರಣಗಳಿಂದ 7232 ಮಂದಿ ಮೃತಪಟ್ಟಿದ್ದಾರೆ.

"

ಬಿಬಿಎಂಪಿಯ ಎಂಟು ವಲಯಗಳ ಪೈಕಿ ಯಲಹಂಕ, ರಾಜರಾಜೇಶ್ವರಿನಗರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಸಾವಿನ ಪ್ರಕರಣಗಳು ಕಂಡುಬಂದಿಲ್ಲ. ದಾಸರಹಳ್ಳಿ ವಲಯದ ಮಾಹಿತಿ ಲಭ್ಯವಿಲ್ಲ. ಯಲಹಂಕ ವಲಯದಲ್ಲಿ 747 ಪುರುಷರು, 514 ಮಹಿಳೆಯರು ಸೇರಿದಂತೆ 1261 ಮಂದಿ ಮೃತಪಟ್ಟಿದ್ದಾರೆ.

ನೂತನ ಬಿಬಿಎಂಪಿ ಆಯುಕ್ತರ ಖಡಕ್ ವಾರ್ನಿಂಗ್‌ಗೆ ಪತರುಗುಟ್ಟಿದ ಖಾಸಗಿ ಆಸ್ಪತ್ರೆಗಳು

ಮಹದೇವಪುರ ವಲಯದಲ್ಲಿ 156 ಪುರುಷರು, 108 ಮಹಿಳೆಯರು ಸೇರಿ 264 ಮಂದಿ, ರಾಜರಾಜೇಶ್ವರಿ ವಲಯದಲ್ಲಿ 1,000 ಮಂದಿ ಪುರುಷರು, 773 ಮಹಿಳೆಯರು ಸೇರಿ 1773 ಮಂದಿ, ಬೊಮ್ಮನಹಳ್ಳಿ ವಲಯದಲ್ಲಿ 70 ಪುರುಷರು, 40 ಮಹಿಳೆಯರು ಸೇರಿ 110 ಮಂದಿ, ದಕ್ಷಿಣ ವಲಯದಲ್ಲಿ 1,180 ಪುರುಷರು, 907 ಮಹಿಳೆಯರು ಸೇರಿ 2,087 ಮಂದಿ, ಪಶ್ಚಿಮ ವಲಯದಲ್ಲಿ 366 ಪುರುಷರು, 345 ಮಹಿಳೆಯರು ಸೇರಿ 711 ಮಂದಿ, ಪೂರ್ವ ವಲಯದಲ್ಲಿ 596 ಪುರುಷರು, 429 ಮಹಿಳೆಯರು ಸೇರಿ 1026 ಮಂದಿ ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ.