ದೇಶದಲ್ಲಿ ಶೇ.70 ರಷ್ಟು ಕೋವಿಡ್ ಲಸಿಕೀಕರಣ ಕಂಪ್ಲೀಟ್ : ಜೋಷಿ
- ಪ್ರಧಾನಮಂತ್ರಿಗಳ ಹುಟ್ಟುಹಬ್ಬದ ಅಂಗವಾಗಿ ಇಡೀ ದೇಶದಲ್ಲಿ ಎರಡೂವರೆ ಕೋಟಿ ಲಸಿಕೆ
- ದೇಶದಲ್ಲಿ ಮೊದಲ ಹಂತದಲ್ಲಿ ಶೇ. 70 ಲಸಿಕೆ ಕೊಡಲಾಗಿದೆ
- ಸ್ಪೆಶಲ್ ಡ್ರೈವ್ ಗಿಂತ ಮುಂಚೆ 60 ಕೋಟಿ ಲಸಿಕೆ
ದಾವಣಗೆರೆ (ಸೆ.19): ಪ್ರಧಾನಮಂತ್ರಿಗಳ ಹುಟ್ಟುಹಬ್ಬದ ಅಂಗವಾಗಿ ಇಡೀ ದೇಶದಲ್ಲಿ ಎರಡೂವರೆ ಕೋಟಿ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿಂದು ಮಾತನಾಡಿದ ಜೋಷಿ ನಿನ್ನೆ ಒಂದೇ ದಿನ 80 ಲಕ್ಷ ಪುನಃ ಲಸಿಕೆ ಆಗಿದೆ. ಕರ್ನಾಟಕದಲ್ಲಿ 28 ಲಕ್ಷ ಲಸಿಕೆ ಆಗಿದೆ. ದೇಶದಲ್ಲಿ ಮೊದಲ ಹಂತದಲ್ಲಿ ಶೇ. 70 ಲಸಿಕೆ ಕೊಟ್ಟಿದ್ದೇನೆ ಎರಡನೇ ಹಂತದಲ್ಲಿ 30 % ಲಸಿಕೆ ನೀಡುತ್ತೇವೆ ಎಂದು ಹೇಳಿದರು.
'ಈವರೆಗೆ ರಾಜ್ಯದ 73% ಜನಕ್ಕೆ ಕೋವಿಡ್ ಲಸಿಕೆ'
ಅತ್ಯಂತ ಮುಂದುವರಿದ ದೇಶಗಳು ಈ ಸಾಧನೆಯನ್ನು ಮಾಡಿಲ್ಲ. ಪ್ಯಾಂಡಮಿಕ್ ಸನ್ನಿವೇಶದಲ್ಲಿ ಭಾರತದಲ್ಲಿ ಒಬ್ಬನು ಹಸಿವಿನಿಂದ ಸತ್ತಿಲ್ಲ. ಅದು ಭಾರತದ ಸಾಧನೆ ಎಂದು ಕಾಂಗ್ರೆಸ್ ಲಸಿಕೆ ಆರೋಪಕ್ಕೆ ತಿರುಗೇಟು ಪ್ರಹ್ಲಾದ್ ಜೋಷಿ ತಿರುಗೇಟು ನೀಡಿದರು.
ವಿರೋಧ ಪಕ್ಷ ಕಾಂಗ್ರೇಸ್ ಗೆ ಲಸಿಕೆ ಜ್ವರ ಬಂದಿದೆ. ಸ್ಪೆಶಲ್ ಡ್ರೈವ್ ಗಿಂತ ಮುಂಚೆ 60 ಕೋಟಿ ಲಸಿಕೆ ಹಾಕಿದ್ದೇವೆ. ಅದನ್ನು ಸೋನಿಯಾ ರಾಹುಲ್ ಗಾಂಧಿ ಹಾಕಿದ್ದಾರಾ..? ಇದ್ದ ಒಬ್ಬ ಮುಖ್ಯಮಂತ್ರಿ ಯನ್ನು ತೆಗೆದು ಹಾಕಿ ಕಾಂಗ್ರೆಸ್ ಹೈ ಕಮಾಂಡ್ ಗೊಂದಲದಲ್ಲಿದೆ. ಇದ್ದುದರಲ್ಲಿ ಒಬ್ಬ ಸಮರ್ಥ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಇದ್ದರು. ಅವರು ಈಗ ಹೊರನಡೆದರು ಎಂದು ವಾಗ್ದಾಳಿ ನಡೆಸಿದರು.
ದೇವಾಲಯ ತೆರವು ವಿಚಾರ : ದೇವಾಲಯ ತೆರವು ವಿಚಾರದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶ ಇತ್ತು. ಆದರೆ ಅಧಿಕಾರಿಗಳಿಂದ ತಪ್ಪಾಗಿದೆ. ದೇವಾಲಯ ತೆರವುಗೊಳಿಸದಂತೆ ನಿರ್ಣಯ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ನಾಳೆ ಕ್ಯಾಬಿನೆಟ್ ಮಿಟಿಂಗ್ ನಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇನ್ಮುಂದೆ ಒಂದೂ ದೇವಾಲಯ ತೆರವುಗೊಳಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆದೇಶ ಕೂಡ ಮಾಡಲಿದ್ದಾರೆ ಎಂದು ಹೇಳಿದರು.