Asianet Suvarna News Asianet Suvarna News

65 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಇಂದು ರಾಜಭವನದಲ್ಲಿ ಪೊಲೀಸ್ ಇಲಾಖೆಯಲ್ಲಿ ಶೌರ್ಯ, ಶ್ಲಾಘನೀಯ ಹಾಗೂ ವಿಶಿಷ್ಠ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪದಕ‌ ನೀಡಿ ಗೌರವಿಸಲಾಯಿತು.

65 Police Officers Conferred With President Medal
Author
Bengaluru, First Published Jul 31, 2019, 8:58 PM IST
  • Facebook
  • Twitter
  • Whatsapp

ಬೆಂಗಳೂರು(ಜು.31): ಇಂದು ರಾಜಭವನದಲ್ಲಿ ಪೊಲೀಸ್ ಇಲಾಖೆಯಲ್ಲಿ ಶೌರ್ಯ, ಶ್ಲಾಘನೀಯ ಹಾಗೂ ವಿಶಿಷ್ಠ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪದಕ‌ ನೀಡಿ ಗೌರವಿಸಲಾಯಿತು. ಪೊಲೀಸ್ ಇಲಾಖೆಯ ವಿವಿದ ವಿಭಾಗದ 65 ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಾರಿ ಪದಕ್ಕೆ ಬಾಜನಾರಾದರು. 

ಎಡಿಜಿಪಿ ಎಎಸ್ ಎನ್ ಮೂರ್ತಿ, ಸಲೀಂ. ಮಾಲಿನಿ ಕೃಷ್ಣಮೂರ್ತಿ, ಮಂಡ್ಯ ಎಎಸ್’ಪಿ ಬಲರಾಮೇಗೌಡ, ಡಿವೈಎಸ್ಪಿ ಮರಿಯಪ್ಪ, ಬದ್ರಿನಾಥ್ ವೆಲೆಂಟೆನ್ ಡಿಸೋಜಾ. ಇನ್ಸ್ ಪೆಕ್ಟರ್ ಸಿದ್ದಲಿಂಗಯ್ಯ. ಪಿಎಸ್ ಐ ಸುನಿತಾ ಸೇರಿದಂತೆ. 65 ಅಧಿಕಾರಿಗಳಿಗೆ ಪದಕ ನೀಡಿ ಗೌರವಿಸಲಾಯಿತು.

ರಾಜಭವನದ ಗಾಜಿನ‌ ಮನೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲ ಪದಕ ವಿತಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಥಿಯಾಗಿ ಆಗಮಿಸಿದ್ದ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಮಾಣಪತ್ರ ವಿತರಿಸಿದರು.

"

ಡಿಜಿ ನೀಲಮಣಿರಾಜು ಸರ್ಕಾರದ ಅಪರ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios