ಶಕ್ತಿ ಯೋಜನೆ: ನಿತ್ಯ 60 ಲಕ್ಷ ಮಹಿಳೆಯರ ಪ್ರಯಾಣ, ಸಚಿವ ರಾಮಲಿಂಗಾ ರೆಡ್ಡಿ
ನಾಲ್ಕು ನಿಗಮಗಳಲ್ಲಿ ಕೆಕೆಆರ್‌ಟಿಸಿ ಆರ್ಥಿಕವಾಗಿ ಸ್ವಲ್ಪ ಸದೃಢವಾಗಿದೆ. ನಷ್ಟ ಅನುಭವಿಸಿದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ. ನಿಗಮ ಲಾಭದಲ್ಲಿ ನಡೆಯಬೇಕಿದ್ದರೆ, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರದಿಂದ ಕೆಲಸ ಮಾಡಬೇಕು ಎಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಕಲಬುರಗಿ(ಫೆ.10): ಕರ್ನಾಟಕದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪರಿಣಾಮ ಪ್ರತಿನಿತ್ಯ 60 ಲಕ್ಷದಂತೆ ಇದುವರೆಗೆ 150 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನಾಲ್ಕು ನಿಗಮಗಳಲ್ಲಿ ಕೆಕೆಆರ್‌ಟಿಸಿ ಆರ್ಥಿಕವಾಗಿ ಸ್ವಲ್ಪ ಸದೃಢವಾಗಿದೆ. ನಷ್ಟ ಅನುಭವಿಸಿದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ. ನಿಗಮ ಲಾಭದಲ್ಲಿ ನಡೆಯಬೇಕಿದ್ದರೆ, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರದಿಂದ ಕೆಲಸ ಮಾಡಬೇಕು ಎಂದರು.
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ಸರ್ಕಾರಿ ಶಾಲೆ ವಿದ್ಯಾರ್ಥಿನಿ! ವಿಡಿಯೋ ವೈರಲ್!
ಕಳೆದ 8 ವರ್ಷದಲ್ಲಿ 14,000 ಸಿಬ್ಬಂದಿ ನಿವೃತ್ತರಾದರೂ ನೇಮಕಾತಿ ಆಗಿರಲಿಲ್ಲ. ಆದರೆ ಇದೀಗ 371 (ಜೆ) ಅಡಿಯಲ್ಲಿ ಆಯ್ಕೆಯಾದ 1614 ಸಿಬ್ಬಂದಿಗೆ ನೇಮಕಾತಿ ಆದೇಶವನ್ನು ಫೆ.18ರಂದು ಹಸ್ತಾಂತರಿಸಲಾಗುವುದು. 2024-25 ಸಾಲಿನ ಬಜೆಟ್‌ನಲ್ಲಿ ರು. 6600 ಕೋಟಿ ಅನುದಾನವನ್ನು ಶಕ್ತಿ ಯೋಜನೆಗೆ ನೀಡಲು ಉದ್ದೇಶಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ 630 ನೂತನ ಬಸ್ ನೀಡಲಾಗಿದೆ. ಮತ್ತೇ ಈಗ ರಾಜ್ಯಕ್ಕೆ 5800 ಹಾಗೂ ಕಲ್ಯಾಣ ಕರ್ನಾಟಕಕ್ಕೆ 475 ನೂತನ ಬಸ್ ನೀಡಲಾಗುವುದು. ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲರ ಬೇಡಿಕೆಯಂತೆ ಸ್ಥಳ ಕೊಟ್ಟರೆ ಕಲಬುರಗಿ ನಗರಕ್ಕೆ ಎರಡು ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.
ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೆಕೆಆರ್ ಟಿಸಿ ಎಂಡಿ ರಾಚಪ್ಪ, ಚಂದ್ರಕಾಂತ ಗದ್ದಿಗಿ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಹಲವರಿದ್ದರು.