ಬೆಂಗ​ಳೂರು [ಜ.05]: ಬಾಹ್ಯಾ​ಕಾಶದ ಕುರಿತು ವಿಶೇಷ ಆಸಕ್ತಿ, ಜ್ಞಾನ ಹೊಂದಿ​ರುವ ಆರು ವರ್ಷದ ಬಾಲ​ಕ​ನ ಹೆಸರು ಇದೀಗ ‘ಇಂಡಿಯಾ ಬುಕ್‌ ಆಫ್‌ ರೆಕಾ​ರ್ಡ್ಸ್’ನಲ್ಲಿ ದಾಖ​ಲಾ​ಗಿ​ದೆ.

ಮೈಸೂ​ರಿನ ಕೇಶವ ಕೌಂಡಿ​ನ್ಯ ಬಾಲಕ ಚಿಕ್ಕ ವಯ​ಸ್ಸಿ​ನಿಂದಲೂ ಓದು, ಅಭ್ಯಾ​ಸದ ಜತೆಗೆ ಬಾಹ್ಯಾ​ಕಾಶ ಕ್ಷೇತ್ರ​ದಲ್ಲಿ ವಿಶೇಷ ಆಸಕ್ತಿ ಹೊಂದಿ​ದ್ದು, ಬಾಹ್ಯಾ​ಕಾಶದ ಹತ್ತಾರು ಮಾಹಿ​ತಿ​ಗಳನ್ನು ಹೇಳು​ತ್ತಾನೆ. ಬಾಲ​ಕನ ಜ್ಞಾನ ಗುರು​ತಿ​ಸಿದ ಇಂಡಿಯಾ ಬುಕ್‌ ಆಫ್‌ ರೆಕಾ​ರ್ಡ್ಸ್ ಸಂಸ್ಥೆ ಆಗ​ಸ್ಟ್‌ 19 ರಂದು ‘ಪ್ರಶಂಸ​ನೀಯ ಪತ್ರ’ ನೀಡಿ ಪ್ರೋತ್ಸಾ​ಹಿ​ಸಿ​ದೆ.

​ಬಾ​ಹ್ಯಾ​ಕಾ​ಶದ ಜತೆಗೆ ವಿಶ್ವದ ಖಂಡ​ಗಳು, ಖಂಡದ ದೇಶ​ಗಳು, ದೇಶ​ಗಳ ರಾಜ​ಧಾನಿ, ಗ್ರಹ​ಗಳ ಹೆಸರು, ಸಂಸ್ಕೃತ ಶ್ಲೋಕ​ಗಳು, ಭಾರ​ತದ ರಾಜ್ಯ ಮತ್ತು ಅವು​ಗಳ ರಾಜ​ಧಾನಿ, ರಷ್ಯನ್‌ ವರ್ಣ​ಮಾ​ಲೆ​ಗಳ ಬಗ್ಗೆ ಹೇಳು​ತ್ತಾನೆ. ಆತನ ಆಸ​ಕ್ತಿಗೆ ತಕ್ಕಂತೆ ಪೋಷ​ಕರು ಉತ್ತಮ ವಾತಾ​ವ​ರಣ ಸೃಷ್ಟಿ​ಸಿದ್ದೇವೆ. ಬೆಂಬ​ಲಿ​ಸು​ತ್ತಿ​ದ್ದೇವೆ ಎಂದು ಬಾಲ​ಕನ ತಾಯಿ ಯಮುನಾ ಕಿರಣ್‌ ಸುದ್ದಿ​ಗೋ​ಷ್ಠಿ​ಯಲ್ಲಿ ತಿಳಿ​ಸಿ​ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂತ​ರಿಕ್ಷ ಕ್ಷೇತ್ರ​ದ ಪುಸ್ತಕ ಓದುವ, ಯುಟ್ಯೂ​ಬ್‌​ನಲಿ ಈ ಬಗೆ​ಗಿನ ವಿಡಿಯೋ ನೋಡಲು ಇಷ್ಟ​ಪ​ಡು​ತ್ತಾನೆ. ಭವಿ​ಷ್ಯ​ದಲ್ಲಿ ಕೇಶವ ಭಾರ​ತೀಯ ಬಾಹ್ಯಾ​ಕಾಶ ಸಂಶೋ​ಧನಾ ಕೇಂದ್ರದಲ್ಲಿ (ಇಸ್ರೋ) ಕೆಲಸ ಮಾಡುವ ಗುರಿ ಹೊಂದಿ​ದ್ದಾನೆ ಎಂದ​ರು.