ಬೆಂಗಳೂರು, (ಸೆ.07): ರಾಜ್ಯದಲ್ಲಿ ಇಂದು (ಸೋಮವಾರ) ಒಂದೇ ದಿನ 5773 ಹೊಸ ಕೊರೋನಾ ಕೇಸ್​​ ಪತ್ತೆಯಾಗಿದ್ದು, 141 ಮಂದಿ ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಒಟ್ಟು ಸೊಂಕಿತರ ಸಂಖ್ಯೆ 4,04,324 ಕ್ಕೆ ಏರಿಕೆಯಾಗಿದ್ರೆ, ಮಹಾಮಾರಿಗೆ ಬಲಿಯಾದವರ ಸಂಖ್ಯೆ 6534ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಅನ್‌ಲಾಕ್‌ 4.0 ಗೆ ಕರ್ನಾಟಕ ತೆರೆದುಕೊಂಡ ರೀತಿ

ಇನ್ನು ಕಳೆದು 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ  8015 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು 4,04,324 ಪ್ರಕರಣಗಳ ಪೈಕಿ 3,00,770 ಮಂದಿ ಕೋವಿಡ್​-19ನಿಂದ ಸಂಪೂರ್ಣ ಗುಣಮುಖರಾಗಿದ್ದು,  ಇನ್ನೂ ರಾಜ್ಯದಲ್ಲಿ 97,001 ಸಕ್ರಿಯ ಕೊರೋನಾ ಪ್ರಕರಣಗಳು ಇವೆ.

ಬೆಂಗಳೂರು ನಗರದಲ್ಲಿ ಸೋಮವಾರ 2942 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 48 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.