ಬೆಂಗಳೂರು, (ಜು.10): ರಾಜ್ಯದಲ್ಲಿ ಕೋವಿಡ್ ಕಂಟಕ ಮುಂದುವರಿದಿದೆ. ಇಂದು (ಶುಕ್ರವಾರ)  ರಾಜ್ಯದಲ್ಲಿ 2313 ಜನರಿಗೆ ಕೋವಿಡ್ 19 ಸೋಕು ದೃಢವಾಗಿದ್ದು, 1004 ಮಂದಿ ಗುಣಮುಖರಾಗಿದ್ದಾರೆ.

ಇಂದಿನ ಹೊಸ 2313 ಸೋಂಕು ಪ್ರಕರಣಗಳಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 57 ಮಂದಿ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 543ಕ್ಕೇರಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಇಡೀ ಬೆಂಗ್ಳೂರು ಸೀಲ್‌ಡೌನ್? BBMP ಕಮಿಷನರ್ ಹೇಳಿದ್ದಿಷ್ಟು..

ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಶುಕ್ರವಾರ ಒಂದೇ ದಿನ 1004 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 472 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 1447 ಮಂದಿಗೆ ಕೋವಿಡ್-19 ಸೋಂಕು ತಾಗಿರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 134 ಸೋಂಕು ಪ್ರಕರಣಗಳೂ, ಉಡುಪಿ ಜಿಲ್ಲೆಯಲ್ಲಿ 34, ಚಾಮರಾಜನಗರದಲ್ಲಿ 13 ಮಂದಿಗೆ ಸೋಂಕು ದೃಢಪಟ್ಟಿವೆ.