Asianet Suvarna News Asianet Suvarna News

ಕರ್ನಾಟಕದಲ್ಲಿ ಮುಂಗಾರುಪೂರ್ವ ಮಳೆಗೆ ಮತ್ತೊಬ್ಬ ವ್ಯಕ್ತಿ ಸಾವು

ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಸಿಡಿಲಿಗೆ ಉ.ಪ್ರದೇಶ ಮೂಲದ ಕಾರ್ಮಿಕ ರಾಜ್ ಚೌಧುರಿ ಎಂಬುವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ತುಂಬೆ ಡ್ಯಾಂ ಭರ್ತಿಯಾಗಿದ್ದು, ಗುರುವಾರ ಒಂದು ಗೇಟ್ ತೆಗೆದು, ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

55 Year Old Man Dies Due to Thunderstorm in Mangaluru grg
Author
First Published May 24, 2024, 8:05 AM IST

ಬೆಂಗಳೂರು(ಮೇ.24):  ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಗುರುವಾರ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮಂಗಳೂರಿನಲ್ಲಿ ಸಿಡಿಲಬ್ಬರದ ಮಳೆಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಸಿಡಿಲಿಗೆ ಉ.ಪ್ರದೇಶ ಮೂಲದ ಕಾರ್ಮಿಕ ರಾಜ್ ಚೌಧುರಿ (55) ಎಂಬುವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ತುಂಬೆ ಡ್ಯಾಂ ಭರ್ತಿಯಾಗಿದ್ದು, ಗುರುವಾರ ಒಂದು ಗೇಟ್ ತೆಗೆದು, ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಕರ್ನಾಟಕದಲ್ಲಿ 26% ಹೆಚ್ಚು ಮುಂಗಾರುಪೂರ್ವ ಮಳೆ..!

ಕಲಬುರಗಿ ತಾಲೂಕಿನ ಸಿತನೂರಿನಲ್ಲಿ ಸಿಡಿಲಿಗೆ 1 ಎತ್ತು, ಉಡುಪಿ ಜಿಲ್ಲೆ ಕಾಂತಾವರಗಳಲ್ಲಿ ಸಿಡಿಲಿಗೆ 1 ಹಸು ಮೃತಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮದಲ್ಲಿ ಭೀಮನರಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಕಿರು ಸೇತುವೆ ಮಳೆಗೆ ಕುಸಿದು ಬಿದ್ದಿದೆ. ಯಾದಗಿರಿಯ ಹಲವೆಡೆ ಬಿರುಗಾಳಿ ಮಳೆಗೆ ಮರಗಳು ಉರುಳಿ ಬಿದ್ದು, ಆವಾಂತರ ಸೃಷ್ಟಿಯಾಗಿದೆ. ಬಾಗಲಕೋಟೆ, ಧಾರವಾಡದಲ್ಲಿ ಗುರುವಾರ ಸಂಜೆಯ ವೇಳೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಪರದಾಡುವಂತಾಯಿತು.

Latest Videos
Follow Us:
Download App:
  • android
  • ios