Asianet Suvarna News Asianet Suvarna News

Booster Dose in Karnataka: ಲಸಿಕೆ ಪಡೆಯಲು 5.25 ಲಕ್ಷ ಜನರಿಗೆ ಅರ್ಹತೆ

*   ಏ.10ರೊಳಗೆ ಎರಡೂ ಡೋಸ್‌ ಪಡೆದವರು ಜ.10ರಿಂದ ಲಸಿಕೆ ಪಡೆಯಲು ಅರ್ಹ
*  ಮುಂಚೂಣಿ ಕಾರ್ಯಕರ್ತರು, ಸಹ ಅಸ್ವಸ್ಥತೆ ಹೊಂದಿರುವ ವೃದ್ಧರಿಗೆ 3ನೇ ಲಸಿಕೆ
*  ಲಸಿಕೆಯನ್ನೇ ಪಡೆಯದ 1 ಲಕ್ಷ ಕಾರ್ಯಕರ್ತರು
 

5.25 lakh people eligible for the Booster Dose in Karnataka grg
Author
Bengaluru, First Published Dec 29, 2021, 4:50 AM IST

ರಾಕೇಶ್‌ ಎನ್‌.ಎಸ್‌

ಬೆಂಗಳೂರು(ಡಿ.29):  ಕೊರೋನಾದ(Coronavirus) ಹೊಸ ರೂಪಾಂತರಿ ಒಮಿಕ್ರೋನ್‌(Omicron) ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಮೂರನೇ ಅಲೆಯಿಂದ ರಕ್ಷಿಸಿಕೊಳ್ಳಲು ಕೇಂದ್ರ ಸರ್ಕಾರ(Central Government) ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌(Booster Dose) (ಮುಂಜಾಗ್ರತಾ ಡೋಸ್‌) ನೀಡಲು ನಿರ್ಧರಿಸಿರುವ ಪರಿಣಾಮ ರಾಜ್ಯದ(Karnataka) ಸುಮಾರು 18 ಲಕ್ಷ ಜನರು ಈ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಎರಡನೇ ಡೋಸ್‌ ಪಡೆದ 9 ತಿಂಗಳು ಪೂರ್ಣಗೊಂಡವರಿಗೆ ಬೂಸ್ಟರ್‌ ಡೋಸ್‌ ನೀಡುವುದರಿಂದ ಈ ವರ್ಷದ ಏಪ್ರಿಲ್‌ 10ರೊಳಗೆ ಲಸಿಕೆ ಪಡೆದ 5.25 ಲಕ್ಷ ಮಂದಿ ಜನವರಿ 10ರಿಂದಲೇ ಬೂಸ್ಟರ್‌ ಡೋಸ್‌ ಪಡೆಯಲು ಅರ್ಹರಾಗಿದ್ದಾರೆ.

ಕೋವಿನ್‌ನಿಂದ ಬರಲಿದೆ ಸಂದೇಶ:

2021ರ ಜನವರಿ 16ರಿಂದ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‌ ಲಸಿಕೆ ಪಡೆಯಲು ಅವಕಾಶ ಸಿಕ್ಕಿತ್ತು. ಆ ಬಳಿಕ 60 ವರ್ಷ ಮೇಲ್ಪಟ್ಟ ‘ಸಹ-ಅಸ್ವಸ್ಥತೆ’ ಹೊಂದಿದ್ದವರು ಕೂಡ ಲಸಿಕಾ(Vaccine) ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಕೋವ್ಯಾಕ್ಸಿನ್‌(Covaxin) ಲಸಿಕೆಗೆ ಮೊದಲ ಹಾಗೂ ಎರಡನೇ ಡೋಸ್‌ ನಡುವೆ ನಾಲ್ಕು ವಾರದ ಅಂತರವಿದ್ದರೆ, ಕೋವಿಶೀಲ್ಡ್‌(Covishield) ಲಸಿಕೆಗೆ ನಾಲ್ಕರಿಂದ ಆರು ವಾರಗಳ ಅಂತರ ನಿಗದಿ ಮಾಡಲಾಗಿತ್ತು. ಹೀಗಾಗಿ ಈ ಮೂರು ವರ್ಗದ ಜನರು ಲಸಿಕೆ ಪಡೆದುಕೊಂಡಿದ್ದರು.

Vaccination: ವಯೋವೃದ್ಧರು ಬೂಸ್ಟರ್‌ ಡೋಸ್‌ ಪಡೆಯಲು ಮೆಡಿಕಲ್‌ ಸರ್ಟಿಫಿಕೆಟ್‌ ಕಡ್ಡಾಯ!

ಏಪ್ರಿಲ್‌ 10ರ ಹೊತ್ತಿಗೆ 3.54 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು 1 ಲಕ್ಷ ಮಂದಿ ಮತ್ತು 60 ವರ್ಷ ಮೇಲ್ಪಟ್ಟ 70,498 ಮಂದಿ ಹೀಗೆ ಒಟ್ಟು 5.25 ಲಕ್ಷ ಮಂದಿ ಎರಡೂ ಡೋಸ್‌ ಪೂರ್ಣಗೊಳಿಸಿದ್ದರು. ಇವರಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕಾ ಡೋಸ್‌ ಬಗ್ಗೆ ಕೋವಿನ್‌ ಪೋರ್ಟಲ್‌ನಿಂದಲೇ ನೇರವಾಗಿ ಸಂದೇಶ ಬರಲಿದೆ. ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ವೈದ್ಯರ ಸಲಹೆಯ ಮೇರೆಗೆ ಮೂರನೇ ಡೋಸ್‌ ಪಡೆಯುವ ಅವಕಾಶ ಇದೆ.

ಮುಂಚೂಣಿ ಕಾರ್ಯಕರ್ತರು ಈವರೆಗೆ ಒಟ್ಟು 9.43 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದು 8.91 ಲಕ್ಷ ಮಂದಿ ಎರಡನೇ ಡೋಸ್‌ ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ 60 ವರ್ಷ ಮೇಲ್ಟಟ್ಟ76 ಲಕ್ಷ ಮಂದಿ ಇದ್ದು 70 ಲಕ್ಷಕ್ಕಿಂತ ಹೆಚ್ಚು ಮಂದಿ ಎರಡನೇ ಡೋಸ್‌ ಪೂರ್ಣಗೊಳಿಸಿದ್ದಾರೆ.

Covid Booster Dose: ನನ್ನ ಸಲಹೆ ಎಂದ ರಾಹುಲ್ ಗಾಂಧಿ

ಲಸಿಕೆಯನ್ನೇ ಪಡೆಯದ 1 ಲಕ್ಷ ಕಾರ್ಯಕರ್ತರು!

ಲಸಿಕಾ ಅಭಿಯಾನ ಆರಂಭಗೊಂಡ ಮೂರು ತಿಂಗಳಲ್ಲೇ ಶೇ.50ರಷ್ಟು ಆರೋಗ್ಯ ಕಾರ್ಯಕರ್ತರ ಲಸಿಕೀಕರಣ ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರದ 9 ತಿಂಗಳಲ್ಲಿ 3.65 ಲಕ್ಷ ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಈವರೆಗೆ ಒಟ್ಟು 7.64 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್‌ ಮತ್ತು 7.19 ಲಕ್ಷ ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಕೋವಿನ್‌ ಪೋರ್ಟಲ್‌ ಪ್ರಕಾರ ಇನ್ನೂ 1 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್‌ ಪಡೆಯುವುದು ಬಾಕಿ ಇದೆ.

ಆದರೆ ಮೂಲಗಳ ಪ್ರಕಾರ ಆರೋಗ್ಯ ಕಾರ್ಯಕರ್ತರೆಂದು ಗುರುತಿಸಲ್ಪಟ್ಟ ಅಂತಿಮ ವರ್ಷದ ನರ್ಸಿಂಗ್‌ ವಿದ್ಯಾರ್ಥಿಗಳು ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ ಕೆಲವರು ತಮ್ಮ ಊರಿಗೆ ಹೋಗಿದ್ದಾರೆ, ಇನ್ನೂ ಕೆಲವರು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಆದರೂ ಇವರನ್ನು ಆರೋಗ್ಯ ಕಾರ್ಯಕರ್ತರೆಂದೇ ಪರಿಗಣಿಸಿ ‘ಲಸಿಕೆ ಪಡೆದಿಲ್ಲ’ ಎಂದು ದಾಖಲೆಯಲ್ಲಿ ಹೇಳಲಾಗುತ್ತಿದೆ ಎನ್ನಲಾಗಿದೆ.
 

Follow Us:
Download App:
  • android
  • ios