Asianet Suvarna News Asianet Suvarna News

ಬುಧವಾರದ ವರದಿ: ಕರುನಾಡಿನ ಎಲ್ಲಾ ಜಿಲ್ಲೆಗಳಿಗೂ ಕೊರೋನಾ ದಾಳಿ, ಎಲ್ಲೆಲ್ಲಿ ಎಷ್ಟು ಕೇಸ್..?

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ಕೇಸ್‌ಗಳಿ ಪತ್ತೆಯಾಗಿವೆ ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

4764 new corona cases found in Karnataka On July 22 Total rises to 75833
Author
Bengaluru, First Published Jul 22, 2020, 7:56 PM IST

ಬೆಂಗಳೂರು, (ಜುಲೈ.22): ರಾಜ್ಯದಲ್ಲಿ ಇಂದು (ಬುಧವಾರ) 4764 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 75833ಕ್ಕೆ ಏರಿಕೆಯಾಗಿದೆ. 

ಅಸೋಂಕಿನ ಜತೆಗೆ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಒಂದೇ ದಿನ ಬರೋಬ್ಬರಿ 55 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,518ಕ್ಕೆ ಏರಿಕೆಯಾಗಿದೆ.

ಲಕ್ಷಣವೇ ಇಲ್ಲದೆ 18 ಕೋಟಿ ಮಂದಿಗೆ ಬಂದು ಹೋಗಿದೆ ಕೊರೊನಾ; ಏನಿದು ಚಮತ್ಕಾರ?

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 15 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 55 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ.

ಇನ್ನು ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು ಬೆಂಗಳೂರಿನಲ್ಲಿ 812 ಜನ ಚೇತರಿಕೆ ಸೇರಿ ರಾಜ್ಯದಲ್ಲಿ 1780 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲಾವಾರು ಕೇಸ್
 ಬೆಂಗಳೂರು ನಗರ 2050, ಉಡುಪಿ 281, ಬೆಳಗಾವಿ 219, ಕಲಬುರಗಿ 175, ದಕ್ಷಿಣಕನ್ನಡ 162, ಧಾರವಾಡ 158, ಮೈಸೂರು 145, ಬೆಂಗಳೂರು ಗ್ರಾಮಾಂತರ 139, ರಾಯಚೂರು 135, ಬಳ್ಳಾರಿ 134, ಚಿಕ್ಕಬಳ್ಳಾಪುರ 110, ದಾವಣಗೆರೆ 96, ಕೋಲಾರ 88, ಚಿಕ್ಕಮಗಳೂರು 82, ಬೀದರ್ 77, ಹಾಸನ 72, ಗದಗ 71, ಬಾಗಲಕೋಟೆ 70, ಉತ್ತರಕನ್ನಡ 63, ಶಿವಮೊಗ್ಗ 59, ವಿಜಯಪುರ 52, ತುಮಕೂರು 52, ಹಾವೇರಿ 50, ರಾಮನಗರ 45, ಯಾದಗಿರಿ 43, ಚಿತ್ರದುರ್ಗ 40, ಮಂಡ್ಯ 37, ಚಾಮರಾಜನಗರ 31, ಕೊಪ್ಪಳ 21, ಕೊಡಗು ಜಿಲ್ಲೆಯಲ್ಲಿ 7 ಜನರಿಗೆ ಸೋಂಕು ತಗುಲಿದೆ.

Follow Us:
Download App:
  • android
  • ios