Asianet Suvarna News Asianet Suvarna News

Corona Update: ಜ.19ರಂದು ಕರ್ನಾಟಕದಲ್ಲಿ 40 ಸಾವಿರ ದಾಟಿದ ಸೋಂಕಿತರ ಸಂಖ್ಯೆ

*  ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಳ
* ಶೇಕಡಾ 18.80ಕ್ಕೆ ಏರಿದ ಕೊರೋನಾ ಪಾಸಿಟಿವಿಟಿ ದರ
*ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ 

40499  New Coronavirus cases and 21 deaths In Karnataka On Jan 19 rbj
Author
Bengaluru, First Published Jan 19, 2022, 9:21 PM IST

ಬೆಂಗಳೂರು, (ಜ.19): ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 40,499 ಜನರಿಗೆ ಸೋಂಕು ತಗುಲಿದ್ದು, 21 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 33,29,199 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ರೆ,  ಈವರೆಗೆ ಒಟ್ಟು 38,486 ಮಂದಿ ಮೃತಪಟ್ಟಿದ್ದಾರೆ. 30,23,034 ಮಂದಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಪ್ರಸ್ತುತ 2,67,650  ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Coronavirus ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಸ್ಫೋಟ, ಅಶ್ವಥ್ ನಾರಾಯಣ ಆತಂಕ

ಕೊರೋನಾ ಪಾಸಿಟಿವಿಟಿ ದರ ಶೇಕಡಾ 18.80 ಇದ್ರೆ, ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಶೇ 0.05 ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಬುಧವಾರ 24,135 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ 14,82,484 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,81,636 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 1,84,377 ಸಕ್ರಿಯ ಪ್ರಕರಣಗಳಿವೆ. ಒಟ್ಟು 16,479 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬಾಗಲಕೋಟೆ 56, ಬಳ್ಳಾರಿ 736, ಬೆಳಗಾವಿ 390, ಬೆಂಗಳೂರು ಗ್ರಾಮಾಂತರ 785, ಬೆಂಗಳೂರು ನಗರ 24,135, ಬೀದರ್ 291, ಚಾಮರಾಜನಗರ 261, ಚಿಕ್ಕಬಳ್ಳಾಪುರ 863, ಚಿಕ್ಕಮಗಳೂರು 355, ಚಿತ್ರದುರ್ಗ 382, ದಕ್ಷಿಣ ಕನ್ನಡ 983, ದಾವಣಗೆರೆ 171, ಧಾರವಾಡ 637, ಗದಗ 100, ಹಾಸನ 1785, ಹಾವೇರಿ 55, ಕಲಬುರಗಿ 872, ಕೊಡಗು 165, ಕೋಲಾರ 491, ಕೊಪ್ಪಳ 162, ಮಂಡ್ಯ 1340, ಮೈಸೂರು 1341, ರಾಯಚೂರು 153, ರಾಮನಗರ 367, ಶಿವಮೊಗ್ಗ 382, ತುಮಕೂರು 1804, ಉಡುಪಿ 683, ಉತ್ತರ ಕನ್ನಡ 522, ವಿಜಯಪುರ 151, ಯಾದಗಿರಿ 81.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 5, ಮೈಸೂರು 4, ದಕ್ಷಿಣ ಕನ್ನಡ 3, ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ, ಗದಗ, ಹಾಸನ, ರಾಯಚೂರು, ವಿಜಯಪುರ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

 ದಕ್ಷಿಣ ಕನ್ನಡದ ನಾಲ್ಕು ಶಾಲೆಗಳು ಬಂದ್
ಮಂಗಳೂರು: ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ನಾಲ್ಕು ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ.

ದಕ್ಷಿಣ ಕನ್ನಡದ ಬಂಗ್ರೆ ಕಸಬದ ಸರ್ಕಾರಿ ಪ್ರೌಢಶಾಲೆ, ಡೊಂಗರಕೇರಿಯ ಕೆನರಾ CBSE ಶಾಲೆ, ಬಜ್ಪೆಯ ಅನ್ಸರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಲ್ಕಿಯ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮಿಕ ಪ್ರೌಢಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಬಂದ ಶಾಲೆಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕ ಸ್ಥಗಿತಗೊಳಿಸಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಇದೀಗ ನಾಲ್ಕು ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ.

Follow Us:
Download App:
  • android
  • ios