Asianet Suvarna News Asianet Suvarna News

ಕರ್ನಾಟಕದಲ್ಲಿ ಕೊರೋನಾ ಏರಿಳಿತ: 10 ಸಾವಿರಕ್ಕಿಂತ ಕೆಳಕ್ಕಿಳಿದ ಸಕ್ರಿಯ ಪ್ರಕರಣಗಳು

* ಕರ್ನಾಟಕದಲ್ಲಿ ಕೊರೋನಾ ಏರಿಳಿತ
* ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕೆಳಕ್ಕೆ
* ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 0.45

373 New Coronavirus and 10 deaths In Karnataka on October 11t rbj
Author
Bengaluru, First Published Oct 11, 2021, 7:19 PM IST

ಬೆಂಗಳೂರು, (ಅ.11): ರಾಜ್ಯದಲ್ಲಿ ಕೊರೋನಾ ಸೋಂಕು (Coronavrius) ಸಂಖ್ಯೆಯಲ್ಲಿ ಏರಿಳಿತವಾಗುತ್ತಿದೆ. ಒಂದು ದಿನ ಏರಿಕೆಯಾಗಿದ್ರೆ, ಮತ್ತೊಂದು ದಿನ ಇಳಿಕೆಯಾಗುತ್ತಿದೆ.

 ಇಂದು(ಅ.11) 373 ಜನರಿಗೆ ಕೊರೋನಾ ಪಾಸಿಟಿವ್ (Corona Passitive) ದೃಢಪಟ್ಟಿದ್ದು, 10 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ (deaths). 611 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೋವಿಡ್‌ ಬಗ್ಗೆ ಇನ್ನೂ 3 ತಿಂಗಳು ಎಚ್ಚರ

ಈ ಮೂಲಕ ಕೊರೋನಾ ಪ್ರಕರಣಗಳ ಒಟ್ಟು ಸಂಖ್ಯೆ 2981400ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 37895. ಈ ವರೆಗೆ 2933570 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕೆಳಗಿಳಿದಿದ್ದು, 9906 ಸಕ್ರಿಯ ಪ್ರಕರಣಗಳಿವೆ. 82,853 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.45 ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು (ಸೋಮವಾರ) 146 ಮಂದಿಗೆ ಸೋಂಕು ತಗುಲಿದ್ದು, 210 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5 ಸೋಂಕಿತರು ಮೃತಪಟ್ಟಿದ್ದಾರೆ. 6580 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಬಾಗಲಕೋಟೆ-0, ಬಳ್ಳಾರಿ-3, ಬೆಳಗಾವಿ-3, ಬೆಂಗಳೂರು ಗ್ರಾಮಾಂತರ-7, ಬೆಂಗಳೂರು ನಗರ-146, ಬೀದರ್-1, ಚಾಮರಾಜನಗರ-2, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-0, ಚಿತ್ರದುರ್ಗ-1, ದಕ್ಷಿಣ ಕನ್ನಡ-38, ದಾವಣಗೆರೆ-2, ಧಾರವಾಡ-2, ಗದಗ-0, ಹಾಸನ-38, ಹಾವೇರಿ-0, ಕಲಬುರಗಿ-0, ಕೊಡಗು-15, ಕೋಲಾರ-7, ಕೊಪ್ಪಳ-1, ಮಂಡ್ಯ-10, ಮೈಸೂರು-43, ರಾಯಚೂರು-2, ರಾಮನಗರ-1, ಶಿವಮೊಗ್ಗ-5, ತುಮಕೂರು-17, ಉಡುಪಿ-15, ಉತ್ತರ ಕನ್ನಡ-12, ವಿಜಯಪುರ-0, ಯಾದಗಿರಿ-0.

ದೇಶಾದ್ಯಂತ ಕೊರೋನಾ (corona) ಅಬ್ಬರ ತಗ್ಗಿರುವ ಬೆನ್ನಲ್ಲೇ, ಸೋಂಕು ನಿಯಂತ್ರಣಕ್ಕೆ ಇನ್ನೂ ಮೂರು ತಿಂಗಳ ಕಾಲ ನಿರ್ಣಾಯಕವಾಗಿದೆ ಎಂದಿರುವ ಕೇಂದ್ರ ಸರ್ಕಾರ, ಮುಂದಿನ ಹಬ್ಬ ಮತ್ತು ಮದುವೆ ಸಮಾರಂಭಗಳ ಮುಖಾಂತರ ಕೊರೋನಾ ವೈರಸ್‌ ಮತ್ತೆ ಉದಯವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಂದ ದೂರ ಇರುವಂತೆ ಮತ್ತು ಮನೆಯಲ್ಲೇ ಆಚರಿಸುವಂತೆ ತಿಳಿಹೇಳಿದೆ.

Follow Us:
Download App:
  • android
  • ios