Corona-Omicron: ಕರ್ನಾಟಕದಲ್ಲಿ ಕೊರೋನಾ, ಒಮಿಕ್ರಾನ್ ಭೀತಿ,ಇಲ್ಲಿದೆ ಅಂಕಿ-ಸಂಖ್ಯೆ

* ಕರ್ನಾಟಕದಲ್ಲಿ ಕೊರೋನಾ, ಒಮಿಕ್ರಾನ್ ಭೀತಿ
* ಇಂದು (ಡಿ.26) ಹೊಸದಾಗಿ 348 ಕೊರೋನಾ  ಪಾಸಿಟಿವ್ ಕೇಸ್ ಪತ್ತೆ
* ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ವೈರಸ್ ಸಂಖ್ಯೆ 38ಕ್ಕೆ ಏರಿಕೆ

348 New Coronavirus and total 38 Omicron Cases In Karnataka rbj On Dec 26 rbj

ಬೆಂಗಳೂರು, (ಡಿ.26): ರಾಜ್ಯದಲ್ಲಿ ಇಂದು (ಡಿ.26) ಹೊಸದಾಗಿ 348 ಕೊರೋನಾ (Coronavirus) ಪಾಸಿಟಿವ್ ಕೇಸ್ ಪತ್ತೆಯಾಗಿದ್ದು,  3 ಜನ ಮಾಹಾಮಾರಿಗೆ ಬಲಿಯಾಗಿದ್ದರೆ. ಇನ್ನು 198 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

 ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30,04,587 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ ಸೋಂಕಿಗೆ  38,312 ಜನ ಸಾವನ್ನಪ್ಪಿದ್ದಾರೆ.  ಸೋಂಕಿತರ ಪೈಕಿ 29,58,828 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. 

Omicron Crisis Karnataka : ಸಿಎಂ ಮಹತ್ವದ ಸಭೆ - ರಾಜ್ಯದಲ್ಲಿ ಟಫ್ ರೂಲ್ಸ್

ಇದರೊಂದಿಗೆ ರಾಜ್ಯದಲ್ಲಿ 7,418 ಕೊರೋನಾ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ರೇಟ್ ಶೇ.0.47 ರಷ್ಟಿದ್ರೆ, ಮರಣ ಪ್ರಮಾಣ 0.86% ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಭಾನುವಾರ ಒಂದೇ ದಿನ 248 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಪೀಡಿತರ ಸಂಖ್ಯೆ 12,61,556 ಕ್ಕೆ ಏರಿಕೆಯಾಗಿದೆ. 12,61,556 ಸೋಂಕಿತರ ಪೈಕಿ 12,39,122 ಜನರು ಗುಣಮುಖರಾಗಿದ್ದಾರೆ. ನಗರದಲ್ಲಿ ಕೊರೋನಾದಿಂದ ಈವರೆಗೆ 16,385 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 6,048 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೊರೋನಾ ಕೇಸ್ 
ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 248, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 8, ದಾವಣಗೆರೆ 2, ಧಾರವಾಡ 6, ಗದಗ 0, ಹಾಸನ 8, ಹಾವೇರಿ 0, ಕಲಬುರಗಿ 0, ಕೊಡಗು 18, ಕೋಲಾರ 6, ಕೊಪ್ಪಳ 0, ಮಂಡ್ಯ 5, ಮೈಸೂರು 6, ರಾಯಚೂರು 0, ರಾಮನಗರ 0, ಶಿವಮೊಗ್ಗ 1, ತುಮಕೂರು 11, ಉಡುಪಿ 3, ಉತ್ತರ ಕನ್ನಡ 11, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಇನ್ನು ರಾಜ್ಯದಲ್ಲಿ ಇದುವರೆಗೆ ಕೊರೋನಾ ರೂಪಾಂತರಿ ಒಮಿಕ್ರಾನ್ 38 ಜನರಲ್ಲಿ ಕಂಡುಬಂದಿದೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬಹಳಷ್ಟು ವೇಗವಾಗಿ ಹರುವುದರಿಂದ ರಾಜ್ಯ ಸರ್ಕಾರ ಇದೇ ಡಿ. 28ರಿಂದ ನೈಟ್ ಕರ್ಫ್ಯೂ ಜಾರಿಗೆ ತಂದಿದೆ.

ರಾಜ್ಯದಲ್ಲಿ ಇಂದು(ಭಾನುವಾರ) ಒಟ್ಟು 33,346 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 73,894 ಸ್ಯಾಂಪಲ್ (ಆರ್‌ಟಿ-ಪಿಸಿಆರ್ 56,921 + 14,973 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

‘ಭಾರತದಲ್ಲಿ(India) ಒಮಿಕ್ರೋನ್‌(Omicron) ರೂಪಾಂತರಿ ತಳಿಯ ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವುದು ನಿಶ್ಚಿತ. ಆದರೆ, ದಕ್ಷಿಣ ಆಫ್ರಿಕಾದಲ್ಲಾದಂತೆ ಇಲ್ಲೂ ಒಮಿಕ್ರೋನ್‌ ಪೀಡಿತರಲ್ಲಿ ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಜಗತ್ತಿಗೆ ಮೊಟ್ಟ ಮೊದಲ ಬಾರಿ ಒಮಿಕ್ರೋನ್‌ ರೂಪಾಂತರಿ ತಳಿಯನ್ನು ಪತ್ತೆಹಚ್ಚಿದ ದಕ್ಷಿಣ ಆಫ್ರಿಕಾದ ತಜ್ಞೆ ಡಾ. ಏಂಜೆಲಿಕ್‌ ಕೋಯೆತ್ಜೀ(Dr Angelique Coetzee) ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ(South Africa) ವೈದ್ಯಕೀಯ ಸಂಘದ ಅಧ್ಯಕ್ಷರೂ ಆಗಿರುವ ಅವರು, ‘ಈಗಿರುವ ಲಸಿಕೆಗಳಿಂದಲೇ ಒಮಿಕ್ರೋನ್‌ ಹರಡುವ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಆದರೆ, ಲಸಿಕೆ ಪಡೆಯದ ವ್ಯಕ್ತಿಗಳು ಮಾತ್ರ ಈ ತಳಿಯಿಂದ 100% ಅಪಾಯಕ್ಕೆ ತುತ್ತಾಗುತ್ತಾರೆ’ ಎಂದೂ ಎಚ್ಚರಿಸಿದ್ದಾರೆ.

ಮೊದಿ ಮಹತ್ವದ ಘೋಷಣೆ : 
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ತಲೆನೋವು ಕೊಡಲಾರಂಭಿಸಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ಹೊಸ ವರ್ಷಾಚರಣೆ ಮತ್ತೊಂದು ಹೊಸ ಅಲೆಗೆ ಕಾರಣವಾಗುತ್ತಾ ಎಂಬ ಭೀತಿ ಹುಟ್ಟಿಕೊಂಡಿದೆ. ಈಗಾಗಲೇ ಕರ್ನಾಟಕ ಸೇರಿ ಅನೇಕ ರಾಜ್ಯಗಳು ನ್ಯೂ ಇಯರ್ ಆಚರಣೆಗೆ ಬ್ರೇಕ್ ಹಾಕಿವೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ಆರಂಭಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. 

Latest Videos
Follow Us:
Download App:
  • android
  • ios