100 ಕೋಟಿ ಲಸಿಕೆ ವಿತರಣೆಗೆ ಖರ್ಚಾಗಿದ್ದು ಎಷ್ಟು?: ಇಲ್ಲಿದೆ ಕಂಪ್ಲೀಟ್ ಮಾಹಿತಿ
* ಮೂರನೇ ಡೋಸ್ ನೀಡಿಕೆ ಬಗ್ಗೆ ಚರ್ಚೆಯಾಗಿಲ್ಲ
* 3ನೇ ಡೋಸ್ ಬಗ್ಗೆ ತಜ್ಞರು ಸಲಹೆ ಕೊಟ್ಟಿಲ್ಲ
* ಮೊದಲ, ಎರಡನೇ ಡೋಸ್ ಬಗ್ಗೆ ಗಮನ
ಬೆಂಗಳೂರು(ಅ. 23): ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಎರಡನೇ ಹಂತದ ಲಸಿಕೆಯನ್ನು(Vaccine) ನೀಡುವ ಗುರಿ ಹಾಕಿಕೊಳ್ಳಲಾಗಿದ್ದು, ಮೂರನೇ ಡೋಸ್ ನೀಡುವ ಬಗ್ಗೆ ಚರ್ಚೆಯಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ(CN Ashwathnarayan) ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ(Bengaluru) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಮತ್ತು ಎರಡನೇ ಡೋಸ್ ಲಸಿಕೆ ನೀಡುವ ಬಗ್ಗೆ ಗಮನಹರಿಸಲಾಗಿದೆ. ಮೂರನೇ ಡೋಸ್(Third Dose) ನೀಡುವ ಬಗ್ಗೆ ಯಾವೊಬ್ಬ ತಜ್ಞರು(Experts) ಸಲಹೆಯನ್ನು ಕೊಟ್ಟಿಲ್ಲ. ಹೀಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಕೋವಿಡ್(Covid19) ನಿಯಂತ್ರಣ ಮತ್ತು ಜನರ ಜೀವನ ರಕ್ಷಣೆ ವಿಚಾರದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು(Doctor), ವೈದ್ಯಕೀಯ ಸಿಬ್ಬಂದಿಯ ಶ್ರಮ ಮತ್ತು ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಲಸಿಕೆ(100 Crore Vaccine)ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶದಲ್ಲಿ ಶೇ.20ರಷ್ಟು ಲಸಿಕೆ ನೀಡುವ ಸಾಧನೆಯೂ ಆಗಿಲ್ಲ ಎಂದು ಹೇಳಿದರು.
ಲಸಿಕಾಕರಣದ ಶತಕೋಟಿ ಸಾಧನೆ: ಇನ್ನು 2ನೇ ಡೋಸ್ ಮೇಲೆ ಕೇಂದ್ರದ ಗಮನ!
ಪ್ರಧಾನಿ ನರೇಂದ್ರ ಮೋದಿ(Narendra Modi) ನಾಯಕತ್ವದ ಬಲಿಷ್ಠ ಭಾರತ(India) ಎಂದು ವಿಶ್ವಕ್ಕೆ ಪ್ರದರ್ಶನ ಮಾಡಲಾಗಿದೆ. ಇದು ಯಶಸ್ವಿಯಾಗಲು ನಮ್ಮ ನಾಗರಿಕರು ಕಾರಣ. ಬೇರೆ ಬೇರೆ ರಾಷ್ಟ್ರಗಳಲ್ಲಿ ಶೇ.20ರಷ್ಟು ಪೂರ್ಣಗೊಂಡಿಲ್ಲ. ಆತ್ಮನಿರ್ಭರ ಭಾರತ್ ಪರಿಕಲ್ಪನೆಯಡಿ ನಮ್ಮದೇ ಲಸಿಕೆಯನ್ನು ನಮ್ಮ ಜನರಿಗೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಅರ್ಹ 90 ಕೋಟಿ ಜನರ ಪೈಕಿ 70 ಕೋಟಿ ಜನರಿಗೆ ಈಗಾಗಲೇ ಮೊದಲನೇ ಲಸಿಕೆ ನೀಡಲಾಗಿದೆ. ಸುಮಾರು 30 ಕೋಟಿ ಜನರಿಗೆ ಎರಡೂ ಲಸಿಕೆ ನೀಡಲಾಗಿದೆ. 34,515 ಕೋಟಿ ರು. ಒಟ್ಟು ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.
135 ಕೋಟಿ ಜನರಿರುವ ದೇಶದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಮತ್ತು ಸೋಂಕಿತರ ಸಂಖ್ಯೆ ಬೇರೆ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಬಿಜೆಪಿ(BJP) ಸರ್ಕಾರಗಳ ಸಾಧನೆಗಳಲ್ಲಿ ಒಂದಾಗಿದೆ. ಮಾಸ್ಕ್(Mask), ಕಿಟ್, ವೆಂಟಿಲೇಟರ್, ಆಕ್ಸಿಜನ್(Oxygen) ಎಲ್ಲದರ ಸವಾಲುಗಳಿತ್ತು. ದೇಶದಲ್ಲಿ ಎಲ್ಲವನ್ನೂ ತಯಾರು ಮಾಡುವ ಕೆಲಸ ಮಾಡಲಾಯಿತು. ಲಸಿಕೆಯಿಂದ ಹಿಡಿದು, ಎಲ್ಲವನ್ನೂ ವಿದೇಶಕ್ಕೆ ರಫ್ತು ಮಾಡುವ ಕೆಲಸವನ್ನೂ ಮಾಡಲಾಗಿದೆ. ರಾಜ್ಯದಲ್ಲಿಯೂ(Karnataka) ಉತ್ತಮ ಸಾಧನೆ ಮಾಡಲಾಗಿದೆ ಎಂದರು.
ಇದೇ ವೇಳೆ ಕೋವಿಡ್ ವಾರಿಯರ್‌ಗಳಾಗಿ(Covid Warriors) ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಾದ ಡಾ. ಅಂಕಿತ್, ಡಾ. ಶಶಿ, ಡಾ. ಆದೀಶ್ವರ ಮತ್ತು ಪೌರಕಾರ್ಮಿಕರಾದ ರಮ್ಯಾ ಮತ್ತು ಸೆಲ್ವಿ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಶಂಕರಪ್ಪ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾರಾಯಣ, ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಇತರರು ಉಪಸ್ಥಿತರಿದ್ದರು.