Asianet Suvarna News Asianet Suvarna News

ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವಿಟಿ ದರ ಮತ್ತೆ ಏರಿಕೆ: 329 ಹೊಸ ಕೇಸ್‌ ದಾಖಲು

ಭಾನುವಾರ ಒಟ್ಟು 329 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1181 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 177 ಹೊಸದಾಗಿ ಕೋವಿಡ್ ಪ್ರಕರಣ ಪತ್ತೆಯಾಗಿವೆ. 

329 New Coronavirus Case on January 7th in Karnataka grg
Author
First Published Jan 8, 2024, 4:00 AM IST

ಬೆಂಗಳೂರು(ಜ.08): ಕೋವಿಡ್ ಪಾಸಿಟಿವಿಟಿ ದರದಲ್ಲಿ ಮತ್ತೆ ಏರಿಕೆಯಾಗಿದೆ. ಹೌದು,  ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 8.61 ರಷ್ಟು ಏರಿಕೆಯಾಗಿದೆ. ಇನ್ನು ಗದಗದಲ್ಲಿ ಕೊವಿಡ್‌ಗೆ ಒಂದು ಬಲಿಯಾಗಿದೆ. 

ಭಾನುವಾರ ಒಟ್ಟು 329 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1181 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 177 ಹೊಸದಾಗಿ ಕೋವಿಡ್ ಪ್ರಕರಣ ಪತ್ತೆಯಾಗಿವೆ. 

ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಸಚಿವ ಶರಣ ಪ್ರಕಾಶ್‌

297 ಮಂದಿಗೆ ಕೋವಿಡ್‌: ಸಕ್ರಿಯ ಕೇಸು 1136ಕ್ಕೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮತ್ತೆ 297 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಸೋಂಕು ಪ್ರಕರಣ 1,136ಕ್ಕೆ ಏರಿಕೆಯಾಗಿತ್ತು. ಶನಿವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 7,356 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಶೇ.4.03ರಷ್ಟು ಪಾಸಿಟಿವಿಟಿ ದರವಿದೆ. ಸಕ್ರಿಯ ಸೋಂಕಿತರಲ್ಲಿ 1,070 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 66 ಮಂದಿ ಆಸ್ಪತ್ರೆ ಆಸ್ಪತ್ರೆಗೆ ದಾಖಲಾಗಿದ್ದು ಇದರಲ್ಲಿ 18 ಮಂದಿ ಐಸಿಯು, 5 ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ವರದಿಯಾಗಿರುವ ಸೋಂಕಿನಲ್ಲಿ ಬೆಂಗಳೂರು 171, ಮೈಸೂರು 26, ಬೆಂಗಳೂರು ಗ್ರಾಮಾಂತರ 12, ಧಾರವಾಡ, ಕೊಪ್ಪಳ ತಲಾ 8, ರಾಮನಗರ, ಮಂಡ್ಯ, ದಕ್ಷಿಣ ಕನ್ನಡ ತಲಾ 6, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರಗಿ ತಲಾ 5, ವಿಜಯನಗರ, ತುಮಕೂರು, ಶಿವಮೊಗ್ಗ, ಹಾವೇರಿ ತಲಾ 4, ಕೋಲಾರ 3, ಚಾಮರಾಜನಗರ, ಗದಗ, ರಾಯಚೂರು ತಲಾ 2, ವಿಜಯಪುರ, ಕೊಡಗು, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿತ್ತು. 

Follow Us:
Download App:
  • android
  • ios