ಕರ್ನಾಟಕದಲ್ಲಿ ಮತ್ತೆ ಕೊರೋನಾ ಕೊಂಚ ಏರಿಕೆ: ಇಲ್ಲಿದೆ ಜೂನ್.29ರ ಅಂಕಿ-ಸಂಖ್ಯೆ

* ರಾಜ್ಯದಲ್ಲಿ ಕೊರೋನಾ ಕೊಂಚ ಏರಿಕೆ
* ಜೂನ.29ರಂದು 3222 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ
* ಜೂನ್28ರಂದು ಪತ್ತೆಯಾಗಿದ್ದು 2576  ಪ್ರಕರಣ

3222 New Cases and 93 deaths In Karnataka On June 29 rbj

ಬೆಂಗಳೂರು, (ಜೂನ್.29): ರಾಜ್ಯದಲ್ಲಿ ಕಳೆದ ಇಂದು (ಮಂಗಳವಾರ) 3222 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 93 ಮಂದಿ ಸೋಂಕಿಕಿತರು ಮೃತಪಟ್ಟಿದ್ದಾರೆ.

ನಿನ್ನೆಗೆ (ಜೂನ್.28) ಹೋಲಿಸಿದರೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಮಾಣ ಮತ್ತೆ ಹೆಚ್ಚಾಗಿದೆ. ಜೂನ್28ರಂದು 2576 ಸೋಂಕು ಪ್ರಕರಣಗಳು ದೃಢಪಟ್ಟಿದ್ದವು.ಆದ್ರೆ, ಇಂದು ಪಾಸಿಟಿವ್ ಕೇಸ್‌ನಲ್ಲಿ ಕೊಂಚ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಕೊರೋನಾ ರಿಲೀಫ್: 3 ಸಾವಿರಕ್ಕಿಂತ ಕಡಿಮೆ ಕೇಸ್!

ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 753 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 16 ಮಂದಿ ಅಸುನೀಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕಳೆದ 24  ಗಂಟೆಗಳಲ್ಲಿ 14,724 ಮಂದಿ ಸೋಂಕಿನಿಂದ ಗುಣಮುಖತರಾಗಿದ್ದು, ಬೆಂಗಳೂರಿನಲ್ಲಿ 10,722 ಮಂದಿ ಗುಣಮುಖತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಈವರೆಗೆ ಒಟ್ಟಾರೆ ಗುಣಮುಖರಾದವರ  ಸಂಖ್ಯೆ 27,19,479ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 28,40,428ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 34,929ಕ್ಕೇರಿದೆ. ಇನ್ನು ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 85,997. ಸಾಸಿಟಿವಿಟ್ ಪ್ರಮಾಣದ ದರ ಶೇ. 2.54 ಇದ್ರೆ, ಸಾವಿನ ದರ ಶೇ.2.88 ಇದೆ. 

Latest Videos
Follow Us:
Download App:
  • android
  • ios