Asianet Suvarna News Asianet Suvarna News

ಕುಮಾರ ಪಾರ್ಕ್ ಬಳಿ ಇದ್ದ 3 ಬೀದಿನಾಯಿಗಳು ನಾಪತ್ತೆ; ಹುಡುಕಿಕೊಟ್ಟವರಿಗೆ 35 ಸಾವಿರ ಬಹುಮಾನ ಘೋಷಣೆ!

ದಿನಾ ಸಾಯೋರಿಗೆ ಅಳೋರಾರು ಎಂಬಂತೆ ಬೀದಿನಾಯಿಗಳ ಪಾಡು ಯಾರಿಗೂ ಬೇಕಿಲ್ಲ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಹೆಜ್ಜೆ ಹೆಜ್ಜೆಗೆ ಎದುರಾಗುವ ಬೀದಿನಾಯಿಗಳು ತೊಲಗಿದ್ರೆ ಸಾಕಪ್ಪ ಅಂತಾ ಹಿಡಿಶಾಪ ಹಾಕೋ ಜನರಿರುವಾಗ ಇಲ್ಲೊಬ್ಬ ಮೂರು ಬೀದಿನಾಯಿಗಳು ಇದ್ದಕ್ಕಿಂತೆ ನಾಪತ್ತೆಯಾಗಿರೋದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

3 stray dogs missing near Kumara Park File a complaint at sheshadripur police station bengaluru rav
Author
First Published Nov 2, 2023, 12:39 PM IST

ಬೆಂಗಳೂರು (ನ.2): ದಿನಾ ಸಾಯೋರಿಗೆ ಅಳೋರಾರು ಎಂಬಂತೆ ಬೀದಿನಾಯಿಗಳ ಪಾಡು ಯಾರಿಗೂ ಬೇಕಿಲ್ಲ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಹೆಜ್ಜೆ ಹೆಜ್ಜೆಗೆ ಎದುರಾಗುವ ಬೀದಿನಾಯಿಗಳು ತೊಲಗಿದ್ರೆ ಸಾಕಪ್ಪ ಅಂತಾ ಹಿಡಿಶಾಪ ಹಾಕೋ ಜನರಿರುವಾಗ ಇಲ್ಲೊಬ್ಬ ಮೂರು ಬೀದಿನಾಯಿಗಳು ಇದ್ದಕ್ಕಿಂತೆ ನಾಪತ್ತೆಯಾಗಿರೋದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳೆದ 9 ವರ್ಷಗಳಿಂದ ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಬಳಿ ವಾಸವಾಗಿದ್ದ ಮೂರು ಬೀದಿನಾಯಿಗಳು. ಕುಮಾರ ಪಾರ್ಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ ಎಂಬಾತ ಮನೆ ನಾಯಿಗಳಂತೆ ಪ್ರತಿನಿತ್ಯ ಆಹಾರ ನೀಡಿ ಆರೈಕೆ ಮಾಡುತ್ತಿದ್ದರು.  ಕಳೆದ ಹತ್ತು ವರ್ಷಗಳಿಂದ ನಾಯಿಗಳಿಗೆ ಊಟ ಹಾಕಿ ನೋಡಿಕೊಳ್ಳುತ್ತಿದ್ದ ಆದರೆ ಅಕ್ಟೋಬರ್ 4 ರಿಂದ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ. ಹತ್ತು ವರ್ಷಗಳಿಂದ ಎಲ್ಲೂ ಕದಲಾದ ಬೀದಿನಾಯಿ ಈಗ ದಿಢೀರ್ ನಾಪತ್ತೆಯಾಗಿವೆ. ಸುತ್ತಮುತ್ತ ಎಲ್ಲೆಡೆ ಹುಡುಕಾಡಿದರೂ ಸಿಗದ ನಾಯಿಗಳು. 

ಭಾರತದ ಬೀದಿ ನಾಯಿ ಜೊತೆ ಪ್ರೀತಿಯಲ್ಲಿ ಬಿದ್ದ ವಿದೇಶಿ ಮಹಿಳೆ: ವಿದೇಶಕ್ಕೆ ಹಾರಲಿದ್ದಾಳೆ 'ಜಯಾ'

ಬೀದಿನಾಯಿಗಳನ್ನು ಸ್ಥಳೀಯ ದುಷ್ಕರ್ಮಿಗಳು ಬೇರೆಡೆ ಬಿಟ್ಟುಬಂದಿರೋ ಶಂಕೆ. ಹೀಗಾಗಿ ನಾಪತ್ತೆಯಾಗಿರುವ ಬೀದಿನಾಯಿಗಳನ್ನು ಪತ್ತೆಹಚ್ಚಿ ರಕ್ಷಿಸುವಂತೆ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಕಾಶ. ದೂರು ದಾಖಲಿಸಿಕೊಂಡ ಪೊಲೀಸರು. ಕಳೆದುಹೋದ ಬೀದಿನಾಯಿಗಳನ್ನು ಪತ್ತೆ ಹಚ್ಚಲು ಮುಂದಾಗಿರೋ ಪೊಲೀಸರು.

ಹುಡುಕಿಕೊಟ್ಟವರಿ ಬಹುಮಾನ ಘೋಷಣೆ:

ಕಳೆದ ಮೂರು ವಾರದಿಂದ ನಾಪತ್ತೆಯಾಗಿರುವ ಬೀದಿನಾಯಿಗಳನ್ನು ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿರುವ ಮಾಲೀಕ. ಒಂದು ನಾಯಿ ಹುಡುಕಿಕೊಟ್ಟರೆ 10 ಸಾವಿರ ರೂ., ಮೂರು ನಾಯಿಗಳನ್ನು ಹುಡುಕಿಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ಕೊಡುವುದಾಗಿ ಘೊಷಣೆ ಮಾಡಿರುವ ಮಾಲೀಕ. ಈ ಬಗ್ಗೆ ಪಾಪ್ಲೆಟ್ ಮಾಡಿಸಿ ಎಲ್ಲ ಕಡೆ ಹಂಚಿ ಪ್ರಚಾರ ಮಾಡುತ್ತಿರುವ ಮಾಲೀಕ.

Follow Us:
Download App:
  • android
  • ios