ತುಮಕೂರು: ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗುವ ದಿನ 10 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸುವ ಅಂದಾಜಿದ್ದರಿಂದ ಒಂದು ತಿಂಗಳ ಮೊದಲೇ ದಾಸೋಹಕ್ಕೆ ಸಿದ್ಧಗಂಗಾ ಮಠ ಸಿದ್ಧತೆ ಮಾಡಿಕೊಂಡಿತ್ತು. 

ಒಂದು ತಿಂಗಳ ಮೊದಲೇ ಧವಸ ಧಾನ್ಯಗಳನ್ನು ಸಂಗ್ರಹಿಸಿಡಲಾಗಿತ್ತು. ಅಲ್ಲದೇ ಮಠದ ಆವರಣದಲ್ಲಿ ಸುಮಾರು 60 ಕಡೆ ದಾಸೋಹಕ್ಕೆ ಏರ್ಪಾಟು ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 

ತಮ್ಮ ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು

ಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತನೂ ಹಸಿದಿರಬಾರದೆಂಬುದು ಶ್ರೀಗಳ ಇಚ್ಛೆಯಾಗಿತ್ತು. ಹೀಗಾಗಿ 1 ತಿಂಗಳ ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು