Asianet Suvarna News Asianet Suvarna News

ಸಂಡೇ ಲಾಕ್‌ಡೌನ್‌ಗೆ ಕೊರೋನಾ ಡೋಂಟ್‌ ಕೇರ್: ಕರುನಾಡಲ್ಲಿ ಮಾಹಾಮಾರಿ ಅಟ್ಟಹಾಸ

ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಪೋಟವೇ ಉಂಟಾಗಿದ್ದು, ಕಳೆದ 4 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹಾಗಾದ್ರೆ, ಭಾನುವಾರ ಪತ್ತೆಯಾದ ಕೇಸ್‌ಗಳೆಷ್ಟು...? ಎನ್ನುವ ಸಂಡೇ ಅಂಕಿ-ಅಂಶ ಈ ಕೆಳಗಿನಂತಿದೆ.

2627 fresh COVID19 cases in Karnataka July 12 Total number rises to 38843
Author
Bengaluru, First Published Jul 12, 2020, 8:27 PM IST

ಬೆಂಗಳೂರು, (ಜುಲೈ.12): ರಾಜ್ಯದಲ್ಲಿ ಕೊರೋನಾ ರಣಕೇಕೆಯನ್ನು ಮಟ್ಟಹಾಕಲು ಭಾನುವಾರ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದ್ರೆ, ಕೊರೋನಾ ಸಂಡೇ ಲಾಕ್‌ಡೌನ್‌ಗೆ ಡೋಂಟ್ ಕೇರ್ ಎಂದಿದೆ.  ರಾಜ್ಯದಲ್ಲಿಂದು (ಭಾನುವಾರ) 2 ಜಿಲ್ಲೆಗಳನ್ನ ಹೊರತುಪಡಿಸಿ ಇನ್ನುಳಿದ 28 ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ.

ರಾಜ್ಯದಲ್ಲಿ ಇಂದು (ಭಾನುವಾರ) 2,627 ಜನರಿಗೆ ಕೊರೋನಾ ಸೋಂಕು ಹೊಸದಾಗಿ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 38,843ಕ್ಕೆ ಏರಿಕೆಯಾಗಿದೆ.  ಅಲ್ಲದೇ ಕಳೆದ 24 ಗಂಟೆಗಳಲ್ಲಿ 71 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 684ಕ್ಕೇರಿದೆ. 

ವಿಶ್ವದ ಮೊದಲ ಕೊರೋನಾ ಚುಚ್ಚುಮದ್ದು ಸಿದ್ಧ, ರಷ್ಯಾದಿಂದ ಅಧಿಕೃತ!

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ ತಿಳಿಸಲಾಗಿದೆ.  ಒಟ್ಟು 38,843ರ ಪೈಕಿ 15,409  ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಸದ್ಯ 22,746 ಸಕ್ರೀಯ ಕೇಸ್‌ಗಳಿವೆ. 

ಜಿಲ್ಲಾ ಅಂಕಿ-ಸಂಖ್ಯೆ
 ಬೆಂಗಳೂರು ನಗರ 1525, ದಕ್ಷಿಣ ಕನ್ನಡ 196, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 63, ಬೀದರ್ 62, ರಾಯಚೂರು 48, ಉಡುಪಿ 43, ಮೈಸೂರು ಮತ್ತು ಶಿವಮೊಗ್ಗ ತಲಾ 42, ಚಿಕ್ಕಬಳ್ಳಾಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20, ಬೆಂಗಳೂರು ಗ್ರಾಮಾಂತರ 19, ಕೊಡಗು15, ಗದಗ 14, ಚಾಮರಾಜನಗರ 13, ಉತ್ತರ ಕನ್ನಡ ಮತ್ತು ಹಾವೇರಿ 12, ಚಿಕ್ಕಮಗಳೂರು 10, ಬಾಗಲಕೋಟೆ 07, ಮಂಡ್ಯ 04, ರಾಮನಗರ  03 ಮತ್ತು ಬೆಳಗಾವಿ 2, ವಿಜಯಪುರ 0, ಚಿತ್ರದುರ್ಗ 0 .

Follow Us:
Download App:
  • android
  • ios