ಕರ್ನಾಟಕದಲ್ಲಿ 5 ತಿಂಗಳಲ್ಲಿ 26 ಜನ, 25 ಆನೆಗಳ ಸಾವು...!
ಅರಣ್ಯ ಇಲಾಖೆ ಮಾಹಿತಿಯಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿರುವ 25 ಆನೆಗಳ ಪೈಕಿ 23 ಆನೆಗಳು ಸ್ವಾಭಾವಿಕವಾಗಿ ಸಾವನ್ನಪ್ಪಿದ್ದರೆ, ಎರಡು ಆನೆಗಳು ಬೇಟೆ ಅಥವಾ ಬೇರೆ ಕಾರಣದಿಂದ ಅಸಹಜ ಸಾವನ್ನಪ್ಪಿವೆ. ಅದೇ ರೀತಿ ವನ್ಯಜೀವಿ ದಾಳಿಯಿಂದ 26 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಆನೆ ದಾಳಿಯಿಂದ 22 ಹಾಗೂ ಇತರ ಪ್ರಾಣಿಗಳ ದಾಳಿಯಿಂದ ನಾಲ್ಕು ಮಂದಿ ಮರಣ ಹೊಂದಿದ್ದಾರೆ.
ಬೆಂಗಳೂರು(ಮೇ.21): ಪ್ರಸಕ್ತ ವರ್ಷದ 5 ತಿಂಗಳಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ಆನೆಗಳ ಸಾವು ಹಾಗೂ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಸಾವನ್ನಪ್ಪಿದವರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವ ಅರಣ್ಯ ಇಲಾಖೆ, ಜನವರಿಯಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ 25 ಆನೆಗಳು ಹಾಗೂ 26 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಅರಣ್ಯ ಇಲಾಖೆ ಮಾಹಿತಿಯಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿರುವ 25 ಆನೆಗಳ ಪೈಕಿ 23 ಆನೆಗಳು ಸ್ವಾಭಾವಿಕವಾಗಿ ಸಾವನ್ನಪ್ಪಿದ್ದರೆ, ಎರಡು ಆನೆಗಳು ಬೇಟೆ ಅಥವಾ ಬೇರೆ ಕಾರಣದಿಂದ ಅಸಹಜ ಸಾವನ್ನಪ್ಪಿವೆ. ಅದೇ ರೀತಿ ವನ್ಯಜೀವಿ ದಾಳಿಯಿಂದ 26 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಆನೆ ದಾಳಿಯಿಂದ 22 ಹಾಗೂ ಇತರ ಪ್ರಾಣಿಗಳ ದಾಳಿಯಿಂದ ನಾಲ್ಕು ಮಂದಿ ಮರಣಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Mangaluru: ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್ ಬಲಿ!
ಆನೆ ಸಾವಿನ ವಿವರ: ತಿಂಗಳು ಸಾವನ್ನಪ್ಪಿದ ಆನೆಗಳು
ಜನವರಿ 02
ಫೆಬ್ರವರಿ 06
ಮಾರ್ಚ್ 08
ಏಪ್ರಿಲ್ 03
ಮೇ 06
ಒಟ್ಟು 25
ಸಾವನ್ನಪ್ಪಿದ ಜನರ ವಿವರ: ತಿಂಗಳು ಆನೆಯಿಂದ ಸಾವನ್ನಪ್ಪಿದವರ ಸಂಖ್ಯೆ ಇತರ ಪ್ರಾಣಿಗಳಿಂದ ಸಾವು
ಜನವರಿ 03 00
ಫೆಬ್ರವರಿ 04 00
ಮಾರ್ಚ್ 07 01
ಏಪ್ರಿಲ್ 07 02
ಮೇ 01 01
ಒಟ್ಟು 22 04