ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಜುಲೈ 8ರ ಅಂಕಿ-ಸಂಖ್ಯೆ
* ಕರ್ನಾಟಕದಲ್ಲಿನ ಕೊರೋನಾ ಅಂಕಿ-ಸಂಖ್ಯೆ
* 2530 ಜನರಿಗೆ ಕೊರೋನಾ ಪಾಸಿಟಿವ್, 62 ಜನರು ಸಾವು
* ಕೋವಿಡ್ ಪಾಸಿಟಿವಿಟಿ ದರ ಶೇಕಡಾ 1.60
ಬೆಂಗಳೂರು, (ಜುಲೈ.08): ಕರ್ನಾಟಕದಲ್ಲಿ ಇಂದು(ಗುರುವಾರ) 2,530 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 62 ಜನರು ಸಾವನ್ನಪ್ಪಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ 514 ಜನರಿಗೆ ಸೋಂಕು ತಗುಲಿದ್ದು, 9 ಜನರು ಮೃತಪಟ್ಟಿದ್ದಾರೆ.
ಮತ್ತೆ ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಯಡಿಯೂರಪ್ಪ
ಇನ್ನು ಕಳೆದ 24 ಗಂಟೆಗಳಲ್ಲಿ 3344 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಪೈಕಿ ಈವರೆಗೆ 27,90,453 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಕೊರೋನಾದಿಂದ 35663 ಜನರ ಸಾವನ್ನಪ್ಪಿದ್ದಾರೆ.
ಸದ್ಯ ರಾಜ್ಯದಲ್ಲಿ 38,729 ಜನರಲ್ಲಿ ಕೊರೋನಾ ಸೋಂಕು ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇಕಡಾ 1.60ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಅಂಕಿ-ಸಂಖ್ಯೆ
ಬೆಂಗಳೂರು ನಗರ ಜಿಲ್ಲೆ 514, ಮೈಸೂರು ಜಿಲ್ಲೆ 294 , ದಕ್ಷಿಣ ಕನ್ನಡ 210, ಹಾಸನ 202, ಬೆಳಗಾವಿ 176, ಶಿವಮೊಗ್ಗ 167, ಉಡುಪಿ 148, ತುಮಕೂರು 136 , ಚಿಕ್ಕಮಗಳೂರು 114, ಮಂಡ್ಯ 88, ಕೊಡಗು 81, ಕೋಲಾರ 63, ಬೆಂಗಳೂರು ಗ್ರಾಮಾಂತರ ಜಿಲ್ಲೆ 59, ಉತ್ತರ ಕನ್ನಡ 49, ಚಾಮರಾಜನಗರ 47, ಚಿತ್ರದುರ್ಗ 30, ದಾವಣಗೆರೆ 28, ಧಾರವಾಡ 19, ಚಿಕ್ಕಬಳ್ಳಾಪುರ 18, ಬಳ್ಳಾರಿ 18, ರಾಮನಗರ 15, ಕೊಪ್ಪಳ 12, ಕಲಬುರಗಿ 11, ಹಾವೇರಿ 9, ಗದಗ 5, ಯಾದಗಿರಿ 5, ವಿಜಯಪುರ 4 , ಬಾಗಲಕೋಟೆ 3, ಬೀದರ್ 3, ರಾಯಚೂರು 2 ಕೇಸ್.