ಹೊಸ DGP- IG ನೇಮಕ ಬೆನ್ನಲ್ಲೇ, 23 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ!

23 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ| ಹೊಸ DGP- IG ನೇಮಕ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ

23 IPS Officers Transferred In Karnataka

ಬೆಂಗಳೂರು[ಫೆ.01]: ಡಿಜಿಪಿ-ಐಜಿ ನೇಮಕಾತಿ ಬೆನ್ನಲ್ಲೇ ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ನಡೆಸಿರುವ ಸರ್ಕಾರವು, ಸೇವಾ ಹಿರಿತನ ಹೊಂದಿದ ಆರು ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಹಾಗೂ 23 ಅಧಿಕಾರಿಗಳನ್ನು ಶುಕ್ರವಾರ ಸಾಮೂಹಿಕವಾಗಿ ವರ್ಗಾವಣೆಗೊಳಿಸಿದೆ.

ವರ್ಗಾವಣೆಗೊಂಡವರ ವಿವರ ಹೀಗಿದೆ

ಎಡಿಜಿಪಿಗಳಾದ ಪಿ.ಎಸ್‌.ಸಂಧು- ಐಎಸ್‌ಡಿ, ಟಿ.ಸುನೀಲ್‌ ಕುಮಾರ್‌- ಎಸಿಬಿ, ಸಿ.ಎಚ್‌.ಪ್ರತಾಪ್‌ ರೆಡ್ಡಿ- ಪೊಲೀಸ್‌ ಆಧುನೀಕರಣ ವಿಭಾಗ, ಐಜಿಪಿಗಳಾದ ಸೀಮಂತ್‌ ಕುಮಾರ್‌ ಸಿಂಗ್‌- ಪಶ್ಚಿಮ ವಲಯ, ಪಿ.ಹರಿಶೇಖರನ್‌- ತರಬೇತಿ, ಸೌಮೇಂದು ಮುಖರ್ಜಿ- ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ (ಪಶ್ಚಿಮ), ಎಸ್‌.ರವಿ- ಐಎಸ್‌ಡಿ, ಡಿಐಜಿಗಳಾದ ಪವಾರ್‌ ಪ್ರವೀಣ್‌ ಮಧುಕರ್‌- ಆಡಳಿತ ಡಿಜಿಪಿ ಕಚೇರಿ, ಕೆ.ಟಿ.ಬಾಲಕೃಷ್ಣ- ತರಬೇತಿ, ಡಾ.ಚಂದ್ರಗುಪ್ತ- ಮೈಸೂರು ಆಯುಕ್ತ, ಎಸ್ಪಿಗಳಾದ ಅನುಪಮ್‌ ಅಗರ್‌ವಾಲ್‌- ವಿಜಯಪುರ, ಡಾ.ರಾಮ್‌ ನಿವಾಸ್‌ ಸಪೆಟ್‌-ಎಸಿಬಿ, ಪಾಟೀಲ್‌ ವಿನಾಯಕ್‌ ವಸಂತರಾವ್‌- ಎಫ್‌ಎಸ್‌ಎಲ್‌, ನಿಕ್ಕಂ ಪ್ರಕಾಶ್‌ ಅಮೃತ್‌- ಗುಪ್ತದಳ, ಡಾ.ಕೆ.ಅರುಣ್‌- ಬಿಎಂಟಿಸಿ, ಡಿ.ಎಲ್‌.ನಾಗೇಶ್‌ -ಬೀದರ್‌, ಆರ್‌.ಶ್ರೀನಿವಾಸ್‌ ಗೌಡ- ಹಾಸನ, ಎನ್‌.ಯತೀಶ್‌- ಗದಗ, ಪಿ.ಶ್ರೀಧರ್‌- ಗುಪ್ತದಳ, ಜಿನೇಂದ್ರ ಖಣಗಾವಿ- ಪೊಲೀಸ್‌ ತರಬೇತಿ ಶಾಲೆ ಚನ್ನಪಟ್ಟಣ, ಕೆ.ವಿ.ಜಗದೀಶ್‌- ಡಿಜಿಪಿ ಕಚೇರಿ, ನಾರಾಯಣ- ಬೆಂಗಳೂರು ಸಂಚಾರ (ಪೂರ್ವ) ಡಿಸಿಪಿ.

Latest Videos
Follow Us:
Download App:
  • android
  • ios