ಬೆಂಗಳೂರು, (ಮೇ.29): ರಾಜ್ಯದಲ್ಲಿ ಇಂದು (ಶನಿವಾರ) ಕೊರೋನಾ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, 20,628 ಹೊಸ ಪಾಸಿಟಿವ್ ಕೇಸ್, ಹಾಗೂ 492 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2567449ಕ್ಕೇರಿದ್ರೆ, ಒಟ್ಟು ಸಾವಿನ ಸಂಖ್ಯೆ 28298ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾದಿಂದ ಹೆತ್ತವರನ್ನ ಕಳೆದುಕೊಂಡ ಮಕ್ಕಳಿಗೆ ಮಹತ್ವದ ಯೋಜನೆ ಘೋಷಿಸಿದ ಸಿಎಂ

ಇನ್ನು ಕಳೆದ 24 ಗಂಟೆಗಳಲ್ಲಿ 42,444 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಈವರೆಗೂ 2189064 ಸೋಂಕಿತರು ಗುಣಮುಖರಾದಂತಾಗಿದೆ. ಇದರೊಂದಿಗೆ ಪ್ರಸ್ತುತ 350066 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೋವಿಡ್ ಅಂಕಿ ಸಂಖ್ಯೆ
ಬಾಗಲಕೋಟೆ 166, ಬಳ್ಳಾರಿ 671, ಬೆಳಗಾವಿ 1027, ಬೆಂಗಳೂರು ಗ್ರಾಮಾಂತರ 557, ಬೆಂಗಳೂರು 4889, ಬೀದರ್ 42, ಚಾಮರಾಜನಗರ 365, ಚಿಕ್ಕಬಳ್ಳಾಪುರ 434, ಚಿಕ್ಕಮಗಳೂರು 843, ಚಿತ್ರದುರ್ಗ 763, ದಕ್ಷಿಣ ಕನ್ನಡ 923, ದಾವಣಗೆರೆ 449, ಧಾರವಾಡ 519, ಗದಗ 307, ಹಾಸನ 1024, ಹಾವೇರಿ 194, ಕಲಬುರಗಿ 107, ಕೊಡಗು 333, ಕೋಲಾರ 684, ಕೊಪ್ಪಳ 350, ಮಂಡ್ಯ 453, ಮೈಸೂರು 1720, ರಾಯಚೂರು 340, ರಾಮನಗರ 181, ಶಿವಮೊಗ್ಗ 672, ತುಮಕೂರು 1102, ಉಡುಪಿ 684, ಉತ್ತರ ಕನ್ನಡ 536, ವಿಜಯಪುರ 210, ಯಾದಗಿರಿ 83