ರೆಬಲ್ ಸ್ಟಾರ್ ಅಂಬರೀಶ ಇನ್ನು ನೆನಪು ಮಾತ್ರ. ಆದ್ರೆ ಮಂಡ್ಯದ ಗಂಡು ಅಂಬರೀಶ್ ತಮ್ಮ ಕನಸುಗಳ ಬಿಟ್ಟು ಮರೆಯಾಗಿದ್ದಾರೆ. ಹಾಗಾದ್ರೆ ಅಂಬಿ ಕಂಡಿದ್ದ ಆ ಎರಡು ಕನಸುಗಳಾವುವು? ಇಲ್ಲಿವೆ ನೋಡಿ.
ಬೆಂಗಳೂರು, (ನ.25) ಕರ್ನಾಟಕದ ಪಾಲಿಗೆ ನಿನ್ನೆ ಕರಾಳ ಶನಿವಾರ. ಮಂಡ್ಯ ಬಸ್ ದುರಂತದಲ್ಲಿ 30 ಜನರನ್ನು ಕಳೆದುಕೊಂಡ ರಾಜ್ಯ, ಅದೇ ದಿನ ರಾತ್ರಿಯ ವೇಳೆಗೆ ಕನ್ನಡ ಚಿತ್ರರಂಗದ ಹಿರಿಯಣ್ಣ ನನ್ನು ಕಳೆದುಕೊಂಡಿದೆ.
ಖಡಕ್ ಮಾತಿನ ಹೃದಯವಂತಿಕೆಯ ಕನ್ವರ್ಲಾಲ್, ರೆಬಲ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಗಲಿದ ಕರ್ನಾಟಕ ಕರ್ಣ ಅಂಬರೀಶ್ ಸಂಕ್ಷಿಪ್ತ ಪರಿಚಯ
ರಾಜಕೀಯ ಹಾಗೂ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಅಂಬಿ, ತಾವು ಎರಡು ಕನಸುಗಳನ್ನ ಕಂಡಿದ್ದರು. ವಿಧಿಯಾಟದಿಂದ ಅಂಬಿಯ ಆ ಎರಡು ಕನಸುಗಳು ನನಸಾಗದೇ ಕನಸಾಗಿಯೇ ಉಳಿದುಕೊಂಡಿವೆ.
ಹಾಗಾದ್ರೆ ಮಂಡ್ಯದ ಗಂಡು ಅಂಬರೀಶ್ ಬಿಟ್ಟು ಹೋದ ಆ ಎರಡು ಕನಸುಗಳಾವುವು? ಇಲ್ಲಿವೆ ನೋಡಿ.
ಅಂಬಿ ಕನಸು ನಂ.1: ಅಂಬರೀಶ್ ತಮ್ಮ ಪುತ್ರ ಅಭಿಷೇಕ್ ನ ಚೊಚ್ಚಲ ಚಿತ್ರ "ಅಮರ್" ಚಿತ್ರವನ್ನ ನೋಡಬೇಕು ಎನ್ನುವು ಬಹಳ ಕನಸು ಕಂಡಿದ್ದರು. ಮಗನನ್ನು ಹೀರೋ ಪಾತ್ರದಲ್ಲಿ ನೋಡಿ ಕಣ್ತುಂಬಿಕೊಳ್ಳಬೇಕೆನ್ನುವ ಮಹಾದಾಸೆ ಅಂಬಿದಾಗಿತ್ತು. ಆದ್ರೆ, ವಿಧಿ ಅಂಬಿಯ ಕನಸನ್ನಕೊನೆಗೂ ಈಡೇರಿಸಲಿಲ್ಲ.
ಅಂಬಿ ಕನಸು ನಂ.2: ಅಂಬಿಯ ಎರಡನೇ ಕನಸು ಅಂದ್ರೆ ಅದು ಕುಚುಕು ಗೆಳೆಯ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ನೋಡುವುದು ವಿಷ್ಣು ಸಮಾಧಿ ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವುದರಲ್ಲಿಯೇ ದಿನಗಳು ಕಳೆದು ಹೋದವು. ಇದ್ರಿಂದ ಅಂಬಿ ಕಂಡಿದ್ದ ಈ ಕನಸು ಕನಸಾಗಿಯೇ ಉಳಿಯಬೇಕಾಯಿತು.
ಒಟ್ಟಿನಲ್ಲಿ ಅಂಬಿ ಕಂಡಿದ್ದ ಈ ಎರಡು ಕನಸುಗಳನ್ನ ಬಿಟ್ಟು ಹೋಗಿರುವುದು ವಿಪರ್ಯಾಸ.
