ದಾಖಲೆ ಸಂಖ್ಯೆಯಲ್ಲಿ ಕೊರೋನಾದಿಂದ ಗುಣಮುಖ: 13550 ಮಂದಿ ಡಿಸ್ಚಾರ್ಜ್‌

ಗುರುವಾರ ಒಂದೇ ದಿನ 13,550 ಮಂದಿ ಡಿಸ್ಚಾರ್ಜ್‌, 5,778 ಮಂದಿಗೆ ಕೊರೋನಾ ಸೋಂಕು| ರಾಜ್ಯದಲ್ಲಿ ಈವರೆಗೆ ಒಟ್ಟು 10,770 ಮಂದಿ ಸೋಂಕಿಗೆ ಬಲಿ| ಗುರುವಾರದ ಮರಣ ದರ ಶೇ. 1.28 ರಷ್ಟು ದಾಖಲು| 1.07 ಲಕ್ಷ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 86,501 ಆರ್‌ಟಿ-ಪಿಸಿಆರ್‌ ಟೆಸ್ಟ್‌| ಒಟ್ಟು ಟೆಸ್ಟ್‌ ಗಳ ಪ್ರಮಾಣ 70 ಲಕ್ಷದ ಗಡಿ ದಾಟಿದೆ| 

13550 Coronavirus Patients Discharge Yesterday in Karnataka grg

ಬೆಂಗಳೂರು(ಅ.23): ರಾಜ್ಯದಲ್ಲಿ ಗುರುವಾರ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಸೋಂಕಿನಿಂದ ಜನರು ಗುಣಮುಖರಾಗಿದ್ದಾರೆ. 13,550 ಮಂದಿ ಗುಣಮುಖರಾಗಿದ್ದು 5,778 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. 74 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 940 ಮಂದಿ ವಿವಿಧ ಕೋವಿಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಪ್ಟೆಂಬರ್‌ 11ರಂದು 12,545 ಮಂದಿ ಸೋಂಕಿನಿಂದ ಮುಕ್ತರಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಗುರುವಾರ ಗುಣಮುಖರಾದವಲ್ಲಿ 7,683 ಮಂದಿ ಬೆಂಗಳೂರು ನಗರ ಜಿಲ್ಲೆಗೆ ಸೇರಿದವರು. ಈವರೆಗೆ ಒಟ್ಟು 6.84 ಲಕ್ಷ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸತತ ಎಂಟನೇ ದಿನ ಹೊಸ ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಲಕ್ಷದಿಂದ ಕೆಳಗಿಳಿದಿದೆ. ಸದ್ಯ 92,927 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಸೆಪ್ಟೆಂಬರ್‌ 26ರಂದು ಲಕ್ಷದ ಗಡಿ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಯು ಅಕ್ಟೋಬರ್‌ 10 ರಂದು 1,20,929ಕ್ಕೆ ತಲುಪಿತ್ತು. ಅಲ್ಲಿಂದ ಬಳಿಕ ಇಳಿಕೆ ಹಾದಿಯಲ್ಲಿ ಸಾಗಿ ಬಂದಿದೆ. ರಾಜ್ಯದಲ್ಲಿ ಈವರೆಗೆ 7.88 ಲಕ್ಷ ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ.

ಧಾರವಾಡ: ಕೇವಲ 53 ದಿನದಲ್ಲಿ 10000 ಕೊರೋನಾ ಸೋಂಕು!

ರಾಜ್ಯದಲ್ಲಿ ಈವರೆಗೆ ಒಟ್ಟು 10,770 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಗುರುವಾರದ ಮರಣ ದರ ಶೇ. 1.28ರಷ್ಟುದಾಖಲಾಗಿದೆ. 1.07 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 86,501 ಆರ್‌ಟಿ-ಪಿಸಿಆರ್‌ ಟೆಸ್ಟ್‌ಗಳಾಗಿವೆ. ಒಟ್ಟು ಟೆಸ್ಟ್‌ ಗಳ ಪ್ರಮಾಣ 70 ಲಕ್ಷದ ಗಡಿ ದಾಟಿದೆ.

ಬೆಂಗಳೂರು ನಂ.1:

ಬೆಂಗಳೂರು ನಗರ ಜಿಲ್ಲೆಯಲ್ಲಿ 36, ಕೊಪ್ಪಳ 5, ಮೈಸೂರು 4, ದಕ್ಷಿಣ ಕನ್ನಡ, ಧಾರವಾಡ, ಹಾಸನ ತಲಾ 3, ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ ತಲಾ 2, ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಕಲಬುರಗಿ, ಕೊಡಗು, ಮಂಡ್ಯ, ರಾಮನಗರ, ಉಡುಪಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 2,807 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಬಾಗಲಕೋಟೆ 59, ಬಳ್ಳಾರಿ 218, ಬೆಳಗಾವಿ 61, ಬೆಂಗಳೂರು ಗ್ರಾಮಾಂತರ 280, ಬೀದರ್‌ 6, ಚಾಮರಾಜನಗರ 29, ಚಿಕ್ಕಬಳ್ಳಾಪುರ 237, ಚಿಕ್ಕಮಗಳೂರು 80, ಚಿತ್ರದುರ್ಗ 79, ದಕ್ಷಿಣ ಕನ್ನಡ 154, ದಾವಣಗೆರೆ 58, ಧಾರವಾಡ 133, ಗದಗ 37, ಹಾಸನ 95, ಹಾವೇರಿ 97, ಕಲಬುರಗಿ 55, ಕೊಡಗು ಮತ್ತು ಕೊಪ್ಪಳ 49, ಕೋಲಾರ 52, ಮಂಡ್ಯ 191, ಮೈಸೂರು 308, ರಾಯಚೂರು 31, ರಾಮನಗರ 16, ಶಿವಮೊಗ್ಗ 93, ತುಮಕೂರು 184, ಉಡುಪಿ 141, ಉತ್ತರ ಕನ್ನಡ 60, ವಿಜಯಪುರ 83, ಯಾದಗಿರಿ ಜಿಲ್ಲೆಯಲ್ಲಿ 36 ಮಂದಿಯಲ್ಲಿ ಸೋಂಕು ದೃಢವಾಗಿದೆ.
 

Latest Videos
Follow Us:
Download App:
  • android
  • ios